ಚೆನ್ನೈ: ಪ್ಲೆಸಿಸ್, ಧೋನಿ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 22 ರನ್ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಈ ಆವೃತ್ತಿಯಲ್ಲಿ ಚೊಚ್ಚಲ ಪಂದ್ಯವಾಡಿದ ಆಫ್ರಿಕಾದ ಡು ಪ್ಲೆಸಿಸ್ 38 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ, ನಾಯಕ ಧೋನಿ ಕೊನೆಯಲ್ಲಿ ಮತ್ತೊಮ್ಮೆ ತಮ್ಮ ಬಲಿಷ್ಠ ಹೊಡೆತಗಳಿಂದ 23 ಎಸೆತಗಳಲ್ಲಿ 37 ರನ್ ಗಳಿಸಿ 160 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
-
That's that from Chennai as @ChennaiIPL register another win. Beat #KXIP by 22 runs 👏👏#CSKvKXIP pic.twitter.com/I23iGYfzTX
— IndianPremierLeague (@IPL) April 6, 2019 " class="align-text-top noRightClick twitterSection" data="
">That's that from Chennai as @ChennaiIPL register another win. Beat #KXIP by 22 runs 👏👏#CSKvKXIP pic.twitter.com/I23iGYfzTX
— IndianPremierLeague (@IPL) April 6, 2019That's that from Chennai as @ChennaiIPL register another win. Beat #KXIP by 22 runs 👏👏#CSKvKXIP pic.twitter.com/I23iGYfzTX
— IndianPremierLeague (@IPL) April 6, 2019
ಪಂಜಾಬ್ ಪರ ನಾಯಕ ಆರ್. ಅಶ್ವಿನ್ 23 ರನ್ ನೀಡಿ 3 ವಿಕೆಟ್ ಪಡೆದರು.
161 ರನ್ಗಳ ಗುರಿ ಪಡೆದ ಪಂಜಾಬ್ ಕೇವಲ 7 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಧೋನಿಯ ಚಾಣಾಕ್ಷ ನಾಯಕತ್ವದಿಂದ ಶಾರ್ದುಲ್ ಬದಲು ಕಣಕ್ಕಿಳಿದಿದ್ದ ಹರಭಜನ್ ಈ ಇಬ್ಬರು ದಾಂಡಿಗರನ್ನು ಪೆವಿಲಿಯನ್ಗಟ್ಟಿದರು.
ನಂತರ ಒಂದಾದ ರಾಹುಲ್(55), ಸರ್ಫರಾಜ್ ಖಾನ್(67) 3ನೇ ವಿಕೆಟ್ಗೆ 110 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡದರಾದರು ತಾಳ್ಮೆಯ ಆಟಕ್ಕೆ ಒತ್ತು ಕೊಟ್ಟು ರನ್ ರೇಟ್ ಗತಿ ಏರಿಸಿಕೊಂಡರು.
-
The metal in the deserved hands of Bhajju pa! #WhistlePodu #Yellove #CSKvKXIP 🦁💛 pic.twitter.com/ta0NejQUf0
— Chennai Super Kings (@ChennaiIPL) April 6, 2019 " class="align-text-top noRightClick twitterSection" data="
">The metal in the deserved hands of Bhajju pa! #WhistlePodu #Yellove #CSKvKXIP 🦁💛 pic.twitter.com/ta0NejQUf0
— Chennai Super Kings (@ChennaiIPL) April 6, 2019The metal in the deserved hands of Bhajju pa! #WhistlePodu #Yellove #CSKvKXIP 🦁💛 pic.twitter.com/ta0NejQUf0
— Chennai Super Kings (@ChennaiIPL) April 6, 2019
ಇದರಿಂದ ಕೊನೆಯ 3 ಓವರ್ಗಳಲ್ಲಿ ಗುರಿ ತಲುಪಲು 48 ರನ್ ಗಳಿಸಬೇಕಾಗಿತ್ತು. ಆದರೆ ಉತ್ತಮ ಬೌಲಿಂಗ್ ನಡೆಸಿದ ಚಹಾರ್ ಹಾಗೂ ಸ್ಕಾಟ್ ಕಗ್ಲಿಜನ್ ಇಬ್ಬರ ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು. ಡೇವಿಡ್ ಮಿಲ್ಲರ್ ಕೇವಲ 6 ರನ್ ಗಳಿಸಿ ಚಹಾರ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ಪಂಜಾಬ್ ಗೆಲುವಿನ ಆಸೆಗೆ ಎಳ್ಳುನೀರು ಬಿಟ್ಟರು.