ಚೆನ್ನೈ: ಇಲ್ಲಿನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಕ್ವಾಲಿಫೈಯರ್ನಲ್ಲಿ ಸಿಎಸ್ಕೆ ನಿಗದಿತ 20 ಓವರ್ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 131 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಆಟಗಾರ ಫಫ್ ಡು ಪ್ಲೆಸಿಸ್ 6 ರನ್ನಿಗೆ ಔಟಾದರೆ ಶೇನ್ ವ್ಯಾಟ್ಸನ್ 10 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಮಧ್ಯಮ ಕ್ರಮಾಂಕದಲ್ಲಿ ಐಪಿಎಲ್ ಸ್ಪೆಷಲಿಸ್ಟ್ ಸುರೇಶ್ ರೈನಾ ಕೇವಲ 5 ರನ್ನಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಮುರಳಿ ವಿಜಯ್ ಭರವಸೆ ಮೂಡಿಸಿದರಾದರೂ 26 ರನ್ನಿಗೆ ಹೋರಾಟ ಅಂತ್ಯವಾಯಿತು.
-
Innings Break!
— IndianPremierLeague (@IPL) May 7, 2019 " class="align-text-top noRightClick twitterSection" data="
A 66-run partnership between MS Dhoni and Rayudu propel #CSK to a total of 131/4. Will this be enough to defend?#Qualifier1 #MIvCSK pic.twitter.com/cD3OwchMup
">Innings Break!
— IndianPremierLeague (@IPL) May 7, 2019
A 66-run partnership between MS Dhoni and Rayudu propel #CSK to a total of 131/4. Will this be enough to defend?#Qualifier1 #MIvCSK pic.twitter.com/cD3OwchMupInnings Break!
— IndianPremierLeague (@IPL) May 7, 2019
A 66-run partnership between MS Dhoni and Rayudu propel #CSK to a total of 131/4. Will this be enough to defend?#Qualifier1 #MIvCSK pic.twitter.com/cD3OwchMup
ನಾಲ್ಕು ವಿಕೆಟ್ ಪತನವಾದ ಬಳಿಕ ಜೊತೆಯಾದ ನಾಯಕ ಎಂ.ಎಸ್.ಧೋನಿ ಹಾಗೂ ಅಂಬಟಿ ರಾಯುಡು ತಂಡಕ್ಕೆ ಆಸರೆಯಾದರು. ಬೌಂಡರಿ ಸಿಕ್ಸರ್ಗಳ ಮೂಲಕ ನಿಧಾನವಾಗಿ ಸ್ಕೋರ್ ಹೆಚ್ಚಿಸುತ್ತಾ ಸಾಗಿದರು.
ಧೋನಿ ಔಟಾಗದೆ 37 ರನ್ ಗಳಿಸಿದರೆ, ರಾಯುಡು 42 ರನ್ ಸಿಡಿಸಿ ಅಜೇಯರಾಗುಳಿದರು. ಈ ಇಬ್ಬರೂ ಮುರಿಯದ ಐದನೇ ವಿಕೆಟ್ಗೆ 66 ರನ್ಗಳ ಜೊತೆಯಾಟ ಆಡಿದರು.
ಮುಂಬೈ ಪರ ರಾಹುಲ್ ಚಹರ್ 2 ವಿಕೆಟ್ ಪಡೆದರೆ ಕೃನಾಲ್ ಪಾಂಡ್ಯ ಹಾಗೂ ಜಯಂತ್ ಯಾದವ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.