ಬೆಂಗಳೂರು : ಮನೆಯಲ್ಲಿ ಯೋಗ, ಮನೆಯವರೊಂದಿಗೆ ಯೋಗ ಧ್ಯೇಯದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಇಂದು ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ಯೋಗದ ಮಹತ್ವವನ್ನು ತಿಳಿದು ಆಚರಣೆಗೆ ತರುತ್ತಿವೆ. ವಿಶ್ವ ಸಂಸ್ಥೆಯು ಈ ದಿನವನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವ ಮೂಲಕ ಭಾರತದ ಸನಾತನ ಪರಂಪರೆಯನ್ನು ಗುರುತಿಸಿದೆ. ಇದು ನಮಗೆಲ್ಲಾ ಅತ್ಯಂತ ಗರ್ವದ ವಿಷಯ. ಯೋಗ ಕೇವಲ ಈ ದಿನಕ್ಕಷ್ಟೇ ಸೀಮಿತವಾಗದೆ, ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.
ಕೋವಿಡ್ ವೈರಾಣುವನ್ನು ಎದುರಿಸಲು ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಅತ್ಯಂತ ಸಹಾಯಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ಯೋಗ ಮಾಡಬೇಕು, ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಬೆಳೆಸಿಕೊಳ್ಳಬೇಕು ಎಲ್ಲರೂ ಮನೆಯಲ್ಲಿ ಯೋಗ ಮಾಡಿ ಎಂದು ಸಚಿವರು ತಿಳಿಸಿದರು.
ವಿಡಿಯೋ ಸಂವಾದದ ಮೂಲಕ ಸಂದೇಶ ನೀಡಿದ ಸದ್ಗುರು ಜಗ್ಗಿ ವಾಸುದೇವ್, ರವಿಶಂಕರ್ ಗುರೂಜಿ, ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರು, ಕೋವಿಡ್ ಸಂಕಷ್ಟ ನಿರ್ವಹಣೆಯಲ್ಲಿ ಕರ್ನಾಟಕದ ಕ್ರಮಗಳನ್ನು ಶ್ಲಾಘಿಸಿದರು. ಮನಸ್ಸಿನ ಮೇಲೆ ಹಾಗೂ ದೇಹದ ಮೇಲೆ ಯೋಗದ ಪರಿಣಾಮಗಳನ್ನು ಗಣ್ಯರು ವಿವರಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಈಶ ಫೌಂಡೇಷನ್ ಸಂಸ್ಥಾಪಕ ಮತ್ತು ಯೋಗಗುರು ಸದ್ಗುರು ಜಗ್ಗಿ ವಾಸುದೇವ್, ಆರ್ಟ್ ಆಫ್ ಲೀವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ನಿರ್ಮಲಾನಂದನಾಥ ಸ್ವಾಮೀಜಿ, ಯೋಗಗುರು ವಚನಾನಂದ ಸ್ವಾಮೀಜಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಯೋಗ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು : ಸಚಿವ ಸುಧಾಕರ್ - Bangalore today news
ವಿಡಿಯೋ ಸಂವಾದದ ಮೂಲಕ ಸಂದೇಶ ನೀಡಿದ ಸದ್ಗುರು ಜಗ್ಗಿ ವಾಸುದೇವ್, ರವಿಶಂಕರ್ ಗುರೂಜಿ, ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿಯವರು, ಕೋವಿಡ್ ಸಂಕಷ್ಟ ನಿರ್ವಹಣೆಯಲ್ಲಿ ಕರ್ನಾಟಕದ ಕ್ರಮಗಳನ್ನು ಶ್ಲಾಘಿಸಿದರು. ಮನಸ್ಸಿನ ಮೇಲೆ ಹಾಗೂ ದೇಹದ ಮೇಲೆ ಯೋಗದ ಪರಿಣಾಮಗಳನ್ನು ಗಣ್ಯರು ವಿವರಿಸಿದರು..