ETV Bharat / briefs

MRPL ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯ: ಮನೆಮನೆ ಪ್ರತಿಭಟನೆ ನಡೆಸಿ ಆಕ್ರೋಶ - Mangaluru MRPL News

ತುಳುನಾಡ ಅಭಿವೃದ್ದಿಯಲ್ಲಿ ತುಳುವರಿಗೆ ದೊಡ್ಡ ಪಾಲು ಸಿಗಬೇಕು. ಸ್ಥಳೀಯರಿಗೆ ಉದ್ಯೋಗ ನಿರಾಕರಿಸುವ ಕಂಪನಿಗಳಿಗೆ ಬೀಗ ಜಡಿಯಿರಿ ಎಂಬ ಫಲಕಗಳೊಂದಿಗೆ ಡಿವೈಎಫ್ಐ, ಎಸ್​ಎಫ್ಐ ಕಾರ್ಯಕರ್ತರು, ಸಿಪಿಎಂ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಎಂಆರ್​ಪಿಎಲ್​ನ ಉದ್ಯೋಗ ನೇಮಕಾತಿ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

MRPL appointment
MRPL appointment
author img

By

Published : Jun 6, 2021, 9:46 AM IST

ಮಂಗಳೂರು: ಎಂಆರ್​ಪಿಎಲ್​ನ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಗಿರುವ ಅನ್ಯಾಯ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮನೆ-ಮನೆ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್ಐ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಬೆಂಬಲದೊಂದಿಗೆ ಮನೆಮನೆ ಪ್ರತಿಭಟನೆ ನಡೆಯಿತು.

ತುಳುನಾಡ ಅಭಿವೃದ್ದಿಯಲ್ಲಿ ತುಳುವರಿಗೆ ದೊಡ್ಡ ಪಾಲು ಸಿಗಬೇಕು. ಸ್ಥಳೀಯರಿಗೆ ಉದ್ಯೋಗ ನಿರಾಕರಿಸುವ ಕಂಪನಿಗಳಿಗೆ ಬೀಗ ಜಡಿಯಿರಿ ಎಂಬ ಫಲಕಗಳೊಂದಿಗೆ ಡಿವೈಎಫ್ಐ, ಎಸ್​ಎಫ್ಐ ಕಾರ್ಯಕರ್ತರು, ಸಿಪಿಎಂ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಮಾಜಿ ಸಚಿವ ರಮನಾಥ ರೈ, ಶಾಸಕ ಯು.ಟಿ ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವ ಸೇರಿದಂತೆ ಅನೇಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಎಂಆರ್​ಪಿಎಲ್​ನ ಪ್ರಧಾನ ದ್ವಾರದ ಮುಂಭಾಗದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುನೀರ್ ಕಾಟಿಪಳ್ಳ, 233 ಉದ್ಯೋಗದಲ್ಲಿ ಕನಿಷ್ಠ 150 ದಕ್ಷಿಣ ಕನ್ನಡ ಹಾಗೂ ಉಡುಪಿಯವರಿಗೆ ಸಿಗಬೇಕಿತ್ತು. ಇಲ್ಲವೇ, ಒಟ್ಟಾರೆ ಕರ್ನಾಟಕಕ್ಕೆ 200 ಉದ್ಯೋಗವಾದರೂ ಸಿಗಬೇಕಿತ್ತು. ಆದರೆ ಬಹಳ ದೊಡ್ಡ ವಂಚನೆ ನಡೆದಿದೆ. ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲಾಗಿದೆ ಎಂಬುದು ದೊಡ್ಡ ಸುಳ್ಳು. ಜನಪ್ರತಿನಿಧಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಇದರಿಂದ ನಮ್ಮ ನೆಲ ವಿಷಮಯವಾಗಿದೆ. ಕರಾವಳಿಯಲ್ಲಿ ಇರುವ ದೊಡ್ಡ ಯೋಜನೆಗಳಿಂದ ಕರಾವಳಿ ಜನರೇ ವಂಚನೆಗೊಳಗಾಗಿದ್ದಾರೆ. ಹೀಗಾಗಿ ಸರೋಜಿನಿ‌ ಮಹಿಷಿ ವರದಿಯನ್ನು ಜಾರಿ ಮಾಡಬೇಕು. ಕರಾವಳಿಗೆ ದೊಡ್ಡ ಪಾಲು ಸಿಗಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.