ಭಾರತದ ಯುವಕ ಪಾಕ್ ಯುವತಿಯೊಂದಿಗೆ ಲವ್ನಲ್ಲಿ ಬಿದ್ದಿದ್ದ. 2014ರಲ್ಲಿ ಪಾಕ್ ಯುವತಿ ಸರ್ಜಿತ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವರವಿಂದರ್ ಸಿಂಗ್ ಪರಿಚಯವಾಗಿತ್ತು. ಮೊದಲು ಸ್ನೇಹಿತರಾದ ಇವರು ಲವ್ನಲ್ಲಿ ಬಿದ್ದಿದ್ದರು. ಒಂದೇ ಮತಕ್ಕೆ ಸೇರಿದ್ದರಿಂದ ಇವರ ಲವ್ಗೆ ಹಿರಿಯರು ಅಸ್ತು ಎಂದು 2016ರಲ್ಲಿ ಮದುವೆ ನಿಶ್ಚಯ ಮಾಡಿದ್ದರು.
ಮದುವೆ ಪಾಕ್ನಲ್ಲಿ ನಡೆಯಬೇಕಾಗಿತ್ತು. ಆದರೆ, ವಧು ಕುಟುಂಬಕ್ಕೆ ವೀಸಾ ಸಿಗದ ಹಿನ್ನೆಲೆ ಮದುವೆ ಮತ್ತೆ ಮುಂದಕ್ಕೆ ಹೋಗಿತ್ತು. ಫೆಬ್ರವರಿ 23 ರಂದು ಭಾರತದಲ್ಲಿ ಇವರ ಮದುವೆ ನಿಶ್ಚಯಪಡಿಸಲಾಗಿತ್ತು. ಆದರೀಗ, ಭಾರತ-ಪಾಕ್ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿದ್ದು, ಯುವತಿ ಹಾಗೂ ಆಕೆಯ ಕುಟುಂಬ ಭಾರತಕ್ಕೆ ಬರಲು ಅಸಾಧ್ಯವಾಗಿದೆ.
ಎಷ್ಟೋದಿನಗಳ ಬಳಿಕ ಯುವತಿ, ಆಕೆಯ ಕುಟುಂಬ ಭಾರತಕ್ಕೆ ಬರಲು 45 ದಿನಗಳ ವೀಸಾ ಮಂಜೂರಾಗಿತ್ತು. ಹರಿಯಾಣದ ಅಂಬಾಲದ ಸಂಬಂಧಿಕರ ಮನೆಯಲ್ಲಿ ಸರ್ಜಿತ್ ಕುಟುಂಬ ತಂಗಿತ್ತು. ಗುರುವಾರದಂದು ಪಂಜಾಬ್ನ ಪಟಿಯಾಲದ ಗುರುದ್ವಾರವೊಂದರಲ್ಲಿ ಸಿಖ್ ಸಂಪ್ರದಾಯದಂತೆ ಗುರು-ಹಿರಿಯರ ಆರ್ಶೀವಾದ ಪಡೆದು ಪರಿವಿಂದರ್ ಸಿಂಗ್ ಮತ್ತು ಸರ್ಜಿತ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.
ಅನೇಕ ಕಷ್ಟಗಳನ್ನು ನಡುವೆ ಎದೆಗುಂದದೇ, ಎಲ್ಲವನ್ನು ಧೈರ್ಯವಾಗಿ ಎದುರಿಸಿದ ಈ ಲವ್ ಬರ್ಡ್ಸ್ ಮದುವೆ ಮೂಲಕ ಒಂದಾದರು.