ಲಂಡನ್: ಐಸಿಸಿ ಮೆಗಾ ಟೂರ್ನಿಯಲ್ಲಿ ಭಾರತ-ಪಾಕ್ ಪಂದ್ಯ ವೀಕ್ಷಣೆಗೆ ಕ್ರೀಡಾಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ನಾಳೆ ಲಂಡನ್ನ ಮಾಂಚೆಸ್ಟರ್ ಮೈದಾನದಲ್ಲಿ ಬಿಗ್ಫೈಟ್ ನಡೆಯಲಿದೆ.
ಈ ಪಂದ್ಯ ವೀಕ್ಷಣೆಗೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಕೂಡ ಸಜ್ಜುಗೊಂಡಿದ್ದು, ಭಾರತ ಹಾಗೂ ಪಾಕಿಸ್ತಾನ ರಾಷ್ಟ್ರೀಯ ಧ್ವಜದ ಬಣ್ಣ ಹೊಂದಿರುವ ವಿಶೇಷ ಉಡುಪು ಧರಿಸಿ ಸಜ್ಜಾಗಿದ್ದಾರೆ. ವೆಸ್ಟ್ ಇಂಡೀಸ್ನ ದೈತ್ಯ ಬ್ಯಾಟ್ಸ್ಮನ್ ಗೇಲ್ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಜತೆಗೆ ಈ ಪಂದ್ಯ ವೀಕ್ಷಣೆ ಮಾಡಲು ತಾವು ಕಾತರರಾಗಿರುವುದಾಗಿ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಇದರ ಜೊತೆಗೆ ಕಳೆದ ಸೆಪ್ಟೆಂಬರ್ 20ರಂದು ತಮ್ಮ ಬರ್ತಡೇ ಡ್ರೆಸ್ ಕೂಡ ಇದೇ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ವಿಶ್ವಕಪ್ನಲ್ಲಿ ಈಗಾಗಲೇ ಆರು ಸಲ ಪಾಕ್-ಭಾರತ ಮುಖಾಮುಖಿಯಾಗಿದ್ದು, ಎಲ್ಲ ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವಿನ ನಗಾರಿ ಬಾರಿಸಿದೆ.