ಲಂಡನ್: ನಾಳೆ ಐಸಿಸಿ ವಿಶ್ವಕಪ್ನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ-ಪಾಕ್ ಮುಖಾಮುಖಿಯಾಗುತ್ತಿದ್ದು, ಉಭಯ ದೇಶದ ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಪಂದ್ಯದ ಕಿಚ್ಚು ಜೋರಾಗಿದೆ. ಮ್ಯಾಚ್ ವೀಕ್ಷಣೆ ಮಾಡುವ ಜೋಶ್ನಲ್ಲಿ ಯಾವುದೇ ಅಹಿತಕರ ಘಟನೆ ನಡೆಸದಂತೆ ಪಾಕ್ ಮಾಜಿ ಕ್ರಿಕೆಟಿಗ ವಸೀಂ ಅಕ್ರಮ್ ಕ್ರೀಡಾಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಉಭಯ ದೇಶಗಳ ನಡುವಿನ ಪಂದ್ಯ ನೋಡಿ ಆನಂದಿಸಿ. ಕ್ರೀಡೆಯಲ್ಲಿ ಯಾವುದಾದರೊಂದು ತಂಡ ಗೆಲ್ಲುವುದು ಸಹಜ. ಮತ್ತೊಂದು ತಂಡ ಸೋಲಲೇಬೇಕು. ಇದೇ ವಿಷಯವನ್ನಿಟ್ಟುಕೊಂಡು ಕ್ರೀಡಾಭಿಮಾನಿಗಳು ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದ್ದಾರೆ.
ವಿಶ್ವಕಪ್ನಲ್ಲಿ ನಾವು ಭಾರತದ ಎದುರು ಗೆಲುವು ಕಂಡಿಲ್ಲ ನಿಜ. ಆದರೆ ಪಂದ್ಯವನ್ನು ಆನಂದಿಸಿದ್ದೇವೆ. ಪಾಕಿಸ್ತಾನ ತಂಡಕ್ಕೆ ಹೋಲಿಕೆ ಮಾಡಿದಾಗ ಭಾರತ ಬಲಿಷ್ಠ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಹೊಂದಿದೆ. ಆದರೆ ಮೈದಾನದಲ್ಲಿ ಉಭಯ ತಂಡದ ಆಟಗಾರರಿಗೂ ಒತ್ತಡ ಇರುತ್ತದೆ. ಒತ್ತಡದಿಂದ ಹೊರಬಂದು ಆಡುವ ತಂಡ ನಿಜವಾಗಲೂ ಗೆಲುವು ದಾಖಲಿಸುತ್ತದೆ ಎಂದು ತಿಳಿಸಿದ್ದಾರೆ.
ಪಾಕ್ ಈಗಾಗಲೇ ತಾನಾಡಿರುವ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದರೆ, ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಗಾಹುತಿಯಾಗಿದೆ.