ಬೆಳಗಾವಿ: ಶ್ರೀಲಂಕಾ ಎ ವಿರುದ್ಧ ಬೆಳಗಾವಿಯಲ್ಲಿ ನಡೆಯುತ್ತಿರುವ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೂವರು ಬ್ಯಾಟ್ಸ್ಮನ್ಗಳ ಶತಕದ ಸಹಾಯದಿಂದ 622ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ನಿನ್ನೆ ಒಂದು ವಿಕೆಟ್ ಕಳೆದುಕೊಂಡು 371 ರನ್ಗಳಿಸಿದ್ದ ಭಾರತ ಎ ತಂಡ ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿ 622 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. 189 ರನ್ಗಳಿಸಿ ಔಟಾಗದೆ ಉಳಿದಿದ್ದ ಅಭಿಮನ್ಯು ಈಶ್ವರನ್ 233 ರನ್ಗಳಿಸಿ ಔಟಾದರು. ನೈಟ್ ವಾಚ್ಮ್ಯಾನ್ ಜಯಂತ್ ಯಾದವ್ 8 ರನ್ ಹಾಗೂ ರಿಕಿ ಭುಯಿ 1 ರನ್ಗಳಿಸಿ ಔಟಾದರರು.
ಆದರೆ ನಂತರ ಒಂದಾದ ಸಿದ್ದೇಶ್ ಲಾಡ್ ಹಾಗೂ ಅನ್ಮೋಲ್ಪ್ರೀತ್ ಸಿಂಗ್ ಅಬ್ಬರಿಸಿದರು. ಅನ್ಮೋಲ್ 165 ಎಸೆತಗಳಲ್ಲಿ 11 ಬೌಂಡರಿ ಸಹಿತ 116 ರನ್ಗಳಿಸಿದರು. ಲಾಡ್ 89 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 76 ರನ್ಗಳಿಸಿ ಲಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು.
623 ರನ್ಗಳನ್ನು ಹಿಂಬಾಲಿಸಿದ ಶ್ರೀಲಂಕಾ 2ನೇ ದಿನದಾಟದಂತ್ಯಕ್ಕೆ 84ರನ್ಗಳಸಿ 4 ಕಳೆದುಕೊಂಡು ಆಘಾತಕ್ಕೊಳಗಾಗಿದೆ.
ರನ್ಗಳ ಶಿಖರ ನೋಡಿ ಬೆಚ್ಚಿದ್ದ ಲಂಕಾ ಪಡೆಗೆ ಸಂದೀಪ್ ವಾರಿಯರ್ ಹಾಗೂ ಶಿವಂ ದುಬೆ ತಲಾ 2 ವಿಕೆಟ್ ಪಡೆದು ಅಘಾತ ನೀಡಿದರು. ಇನ್ನು 2 ದಿನಗಳ ಆಟ ಬಾಕಿಯಿರುವುದರಿಂದ ಭಾರತ ಎ ತಂಂಡಕ್ಕೆ ಗೆಲುವಿನ ಅವಕಾಶ ಹೆಚ್ಚಿದೆ.