ಆನೇಕಲ್: ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಆರೋಪದ ಮೇಲೆ ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿ 2.40 ಲಕ್ಷ ಬೆಲೆ ಬಾಳುವ ಸುಮಾರು 8 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಸರ್ಜಾಪುರ-ಬೆಂಗಳೂರು ರಸ್ತೆಯ ದೊಮ್ಮಸಂದ್ರದಲ್ಲಿ ಖಚಿತ ಮಾಹಿತಿ ಮೇಲೆ ಶಿವ ಮತ್ತು ಶಂಕರಮ್ಮ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ ಈ ಇಬ್ಬರ ಜೊತೆಗಿದ್ದ ಆಯುಬ್ ಮತ್ತು ವಾಸೀಂ ಖಾನ್ ಎಂಬುವರು ತಲೆಮರೆಸಿಕೊಂಡಿದ್ದಾರೆ. ಆನೇಕಲ್ ಸುತ್ತ ನಡೆದ ಹಲವು ಅಪರಾಧ ಪ್ರಕರಣಗಳಲ್ಲಿ ಗಾಂಜಾ ವ್ಯಸನಿಗಳೇ ಹೆಚ್ಚಾಗಿ ಭಾಗಿಯಾಗಿದ್ದಾರೆ. ಹಾಗಾಗಿ ಬಂಧಿತರಿಂದ ಸಾಕ್ಷಿಗಳು ಸಿಗಲಿವೆ ಎಂದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.