ಟಾಂಟನ್: ವಿಶ್ವಕಪ್ ಟೂರ್ನಿಯ ಶನಿವಾರದ ಎರಡನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಆಫ್ಘಾನಿಸ್ತಾನವನ್ನು ಏಳು ವಿಕೆಟ್ಗಳಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಆಫ್ಘನ್ನರು ಉತ್ತಮ ಆರಂಭವನ್ನೇ ಪಡೆದಿದ್ದರು. ಹಝ್ರತುಲ್ಲಾ ಝಝೈ 34 ರನ್ ಹಾಗೂ ನೈರ್ ಅಲಿ ಝಡ್ರಾನ್ 31 ರನ್ ಸಿಡಿಸುವ ಮೂಲಕ ಭರ್ಜರಿ ಆರಂಭದ ಸೂಚನೆ ನೀಡಿದ್ದರು. ಆ ಬಳಿಕ ಹಷ್ಮತುಲ್ಲಾ ಶಾಹಿದಿ 59 ರನ್ ಬಾರಿಸಿದ್ದು ಬಿಟ್ಟರೆ ಉಳಿದವರಿಂದ ಉತ್ತಮ ಕೊಡುಗೆ ಬರಲಿಲ್ಲ.
ನಾಯಕ ಗುಲ್ಬಾದಿನ್ ನೈಬ್ 4, ನಬಿ 9, ರಹಮತ್ ಶಾ ಶೂನ್ಯಕ್ಕೆ ಔಟಾಗಿ ಆಫ್ಘನ್ ಪಾಳಯದಲ್ಲಿ ನಿರಾಸೆ ಮೂಡಿಸಿದರು. 41.1 ಓವರ್ನಲ್ಲಿ ಆಫ್ಘಾನಿಸ್ತಾನ 172 ರನ್ನಿಗೆ ಆಲ್ಔಟ್ ಆಯಿತು.
ತವರಲ್ಲಿ ಬಾಂಗ್ಲಾ ಮಣಿಸಿದ ಇಂಗ್ಲೆಂಡ್ : 106 ರನ್ಗಳ ಭರ್ಜರಿ ಗೆಲುವು
ಕಿವೀಸ್ ಪರ ಜಿಮ್ಮಿ ನೀಶಾಮ್ 5 ಹಾಗೂ ಲಾಕಿ ಫರ್ಗ್ಯೂಸನ್ 4 ವಿಕೆಟ್ ಪಡೆದು ಆಫ್ಘಾನಿಸ್ತಾನದ ದೊಡ್ಡ ಮೊತ್ತದ ಕನಸಿಗೆ ಮುಳ್ಳಾದರು. ಸಾಧಾರಣ ಗುರಿಯನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಆಟಗಾರ ಗಫ್ಟಿಲ್ ಶೂನ್ಯಕ್ಕೆ ನಿರ್ಗಮಿಸಿದರು. ಕಾಲಿನ್ ಮನ್ರೋ 22 ರನ್ ಗಳಿಸಿ ಪೆವಿಲಿಯನ್ ಸೇರಿದರು.
-
9 wickets between James Neesham and Lockie Ferguson, combined with an unbeaten 79 from #KaneWilliamson saw New Zealand overcome Afghanistan in Taunton.
— Cricket World Cup (@cricketworldcup) June 8, 2019 " class="align-text-top noRightClick twitterSection" data="
They now have 3⃣ wins in as many games, and remain at the apex of #CWC19 standings!
SCORECARD ▶️ https://t.co/Uv5e1IteWj pic.twitter.com/luZycgwCVJ
">9 wickets between James Neesham and Lockie Ferguson, combined with an unbeaten 79 from #KaneWilliamson saw New Zealand overcome Afghanistan in Taunton.
— Cricket World Cup (@cricketworldcup) June 8, 2019
They now have 3⃣ wins in as many games, and remain at the apex of #CWC19 standings!
SCORECARD ▶️ https://t.co/Uv5e1IteWj pic.twitter.com/luZycgwCVJ9 wickets between James Neesham and Lockie Ferguson, combined with an unbeaten 79 from #KaneWilliamson saw New Zealand overcome Afghanistan in Taunton.
— Cricket World Cup (@cricketworldcup) June 8, 2019
They now have 3⃣ wins in as many games, and remain at the apex of #CWC19 standings!
SCORECARD ▶️ https://t.co/Uv5e1IteWj pic.twitter.com/luZycgwCVJ
ನಾಯಕನ ಆಟವಾಡಿದ ಕೇನ್ ವಿಲಿಯಮ್ಸನ್ ಆಕರ್ಷಕ 79 ರನ್ ಬಾರಿಸಿ ತಂಡಕ್ಕೆ ಗೆಲುವನ್ನು ತಂದಿತ್ತರು. ನಾಯಕನಿಗೆ ಸಾಥ್ ನೀಡಿದ ರಾಸ್ ಟೇಲರ್ 48 ರನ್ ಗಳಿಸಿದರು. 32.1 ಓವರ್ನಲ್ಲಿ ಕಿವೀಸ್ ಮೂರು ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ಗೆಲುವಿನ ನಗೆ ಬೀರಿತು. ಟೂರ್ನಿಯ ಮೂರೂ ಪಂದ್ಯಗಳನ್ನು ಜಯಿಸುವ ಮೂಲಕ ನ್ಯೂಜಿಲ್ಯಾಂಡ್ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.