ಮುಂಬೈ: ವಿಶ್ವಕ್ರಿಕೆಟ್ನಲ್ಲಿ ಇದುವರೆಗೆ 11 ವಿಶ್ವಕಪ್ಗಳು ಯಶಸ್ವಿಯಾಗಿ ನಡೆದಿದ್ದು, 2 ಬಾರಿ ಚಾಂಪಿಯನ್ ಆಗಿರುವ ಭಾರತ ತಂಡದ ಮೂವರು ಆಟಗಾರರು 3 ಆವೃತ್ತಿಗಳಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ( 1983 ರಲ್ಲಿ ಮೊಹಿಂದರ್ ಅಮರ್ನಾಥ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು)
1975 ರಿಂದ 2015ರವರೆಗೆ ನಡೆದಿರುವ 11 ವಿಶ್ವಕಪ್ಗಳಲ್ಲಿ 3 ವಿಶ್ವಕಪ್ಗಳಲ್ಲಿ ಚಾಂಪಿಯನ್ ತಂಡದ ಆಟಗಾರರ ಬದಲು ಬೇರೆ ತಂಡಗಳ ಆಟಗಾರರು ಸರಣಿ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಉಳಿದ 8 ಬಾರಿ ಚಾಂಪಿಯನ್ ತಂಡದ ಆಟಗಾರರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
1975ರಿಂದ 87 ರವೆಗೆ ನಡೆದ 4 ವಿಶ್ವಕಪ್ಗಳಲ್ಲಿ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಮಾತ್ರ ಅವಾರ್ಡ್ ನೀಡಲಾಗುತ್ತಿತ್ತು. ಐಸಿಸಿ 1992 ರಿಂದ ಒಟ್ಟಾರೆ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನನ್ನು ಸರಣಿ ಶ್ರೇಷ್ಠ ಆಟಗಾರ ಎಂಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
1975 ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ವಿಂಡೀಸ್ ನಾಯಕ ಕ್ಲೈವ್ ಲಾಯ್ಡ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ. ಈ ಪಂದ್ಯದಲ್ಲಿ ಲಾಯ್ಡ್ 85 ಎಸೆತಗಳಲ್ಲಿ 102 ರನ್ಗಳಿಸಿದ್ದರು.
1979 ವಿವಿಯನ್ ರಿಚರ್ಡ್ಸ್
ಎರಡನೇ ವಿಶ್ವಕಪ್ನಲ್ಲೂ ಇಂಗ್ಲೆಂಡ್ ವಿರುದ್ಧ ಫೈನಲ್ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಈ ಪಂದ್ಯದಲ್ಲಿ ರಿಚರ್ಡ್ಸ್ ಔಟಾಗದೆ 138 ರನ್ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
1983 ಮೊಹಿಂದರ್ ಅಮರ್ನಾಥ್
3 ನೇ ವಿಶ್ವಕಪ್ನಲ್ಲಿ ವಿಶ್ವಕ್ಕೆ ಶಾಕ್ ನೀಡಿ ಚಾಂಪಿಯನ್ ಆಗಿದ್ದ ಭಾರತ ತಂಡದ ಆಲ್ರೌಂಡರ್ ಮೊಹಿಂದರ್ ಅಮರ್ನಾಥ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಅಮರ್ನಾಥ್ 12 ರನ್ ನೀಡಿ 3 ವಿಕೆಟ್ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚಿದ್ದು 26 ರನ್ಗಳಿಸಿದ್ದರು.
1987 ಡೇವಿಡ್ ಮೂನ್
ನಾಲ್ಕನೇ ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿ ಚಾಂಪಿಯನ್ ಆಗಿತ್ತು. ಈ ಪಂದ್ಯದಲ್ಲಿ ಆಸೀಸ್ನ ಡೇವಿಡ್ ಬೂನ್ 75 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
1992 ರಿಂದ ಇಡೀ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯಾವುದೇ ತಂಡದ ಆಟಗಾರನಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಐಸಿಸಿ ನಿರ್ದರಿಸಿತ್ತು.
1992 ಮಾರ್ಟಿನ್ ಕ್ರೋವ್
ಆಸ್ಟ್ರೇಲಿಯಾದಲ್ಲಿ ನಡೆದಿದ್ದ 5 ನೇ ವಿಶ್ವಕಪ್ನಲ್ಲಿ ಸೆಮಿಫನಲ್ ಪ್ರವೇಶಿಸಿದ್ದ ನ್ಯೂಜಿಲ್ಯಾಂಡ್ ತಂಡದ ನಾಯಕ ಟೂರ್ನಿಯಲ್ಲಿ 456 ರನ್ಗಳಿಸಿ ಚೊಚ್ಚಲ ಸರಣಿ ಸರ್ವೋತ್ತಮ ಪ್ರಶಸ್ತಿ ಪಡೆದುಕೊಂಡಿದ್ದರು. ಈ ವಿಶ್ವಕಪ್ ಪಾಕಿಸ್ತಾನ ಪಾಲಾಗಿತ್ತು.
1996 ಸನತ್ ಜಯಸೂರ್ಯ
ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿದ್ದ ಲಂಕಾದ ಆಟಗಾರ ಸನತ್ ಜಯಸೂರ್ಯ 221 ರನ್ ಹಾಗೂ 7 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
1999 ಲಾನ್ಸ್ ಕ್ಲೂಸ್ನರ್
ಇಂಗ್ಲೆಂಡ್ನಲ್ಲಿ ನಡೆದಿದ್ದ 6ನೇ ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಸೋಲನುಭವಿಸಿದ್ದ ದ.ಆಫ್ರಿಕಾ ತಂಡದ ಆಲ್ರೌಂಡರ್ ಲಾನ್ಸ್ ಕ್ಲೂಸ್ನರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಸೆಮಿಫೈನಲ್ ಪಂದ್ಯದಲ್ಲಿ 3 ಬಾಲ್ಗೆ ಒಂದು ರನ್ ತೆಗೆಯಲಾಗದೇ ಆತುರ ಪಟ್ಟು ಫೈನಲ್ ತಲುಪುವ ಅವಕಾಶವನ್ನು ದ.ಆಫ್ರಿಕಾ ಕಳೆದುಕೊಂಡಿತು. ಆಸ್ಟ್ರೇಲಿಯಾ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಆಗಿತ್ತು.
2003 ಸಚಿನ್ ತೆಂಡೂಲ್ಕರ್
ಗಂಗೂಲಿ ನೇತೃತ್ವದಲ್ಲಿ ಫೈನಲ್ ತಲುಪಿದ್ದ ಭಾರತ ತಂಡ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ನಿರಾಸೆಯನುಭವಿಸಿತ್ತು. ಆ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯ 673 ರನ್ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಈ ದಾಖಲೆ ಇನ್ನು ಸಚಿನ್ ಹೆಸರಿನಲ್ಲಿದೆ.
2007 ಗ್ಲೇನ್ ಮೆಕ್ಗ್ರಾತ್
ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಈ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಗ್ಲೇನ್ ಮೆಕ್ಗ್ರಾತ್ ದಾಖಲೆಯ 26 ವಿಕೆಟ್ ಪಡೆದು ಸರಣಿ ಸರ್ವೋತ್ತಮರಾಗಿದ್ದರು. ಶ್ರೀಲಂಕಾ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಹ್ಯಾಟ್ರಿಕ್ ಪ್ರಶಸ್ತಿ ಜಯಿಸಿತ್ತು.
2011 ಯುವರಾಜ್ ಸಿಂಗ್
ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳಲ್ಲಿ ನಡೆದಿದ್ದ 10 ನೇ ವಿಶ್ವಕಪ್ನಲ್ಲಿ ಭಾರತದ ಆಲ್ರೌಂಡರ್ ಯುವರಾಜ್ ಸಿಂಗ್ 362 ರನ್ ಹಾಗೂ 15 ವಿಕೆಟ್ ಪಡೆದು ಆಲ್ರೌಂಡರ್ ಪ್ರದರ್ಶನ ನೀಡುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
2015 ಮಿಚೆಲ್ ಸ್ಟಾರ್ಕ್
ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ನಲ್ಲಿ ನಡೆದಿದ್ದ 11 ನೇ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 22 ವಿಕೆಟ್ ಪಡೆಯುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಫೈನಲ್ ಪಂದ್ಯದಲ್ಲಿ ಕಿವೀಸ್ ಮಣಿಸಿ ಆಸೀಸ್ 5ನೇ ಬಾರಿ ಚಾಂಪಿಯನ್ ಆಗಿತ್ತು.