ETV Bharat / briefs

ಪಾಕ್​ ವಿರುದ್ಧ ಹಿಂದೆಯೂ ಸೋತಿಲ್ಲ, ಈ ಬಾರಿಯೂ ಸೋಲಲ್ಲ: ಸುರೇಶ್​ ರೈನಾ

ಭಾರತ ಇದುವರೆಗೂ 6 ಬಾರಿ ಪಾಕಿಸ್ತಾನದ ಜೊತೆ ಮುಖಾಮುಖಿಯಾಗಿದ್ದು 6 ಬಾರಿಯೂ ಜಯ ಸಾಧಿಸಿದೆ. 2019ರ ವಿಶ್ವಕಪ್​ನಲ್ಲಿ ಭಾರತ ತಂಡ ಮ್ಯಾಚೆಂಸ್ಟರ್‌ನಲ್ಲಿ ಜೂನ್​ 16ರಂದು ಪರಸ್ಪರ ಮುಖಾಮುಖಿಯಾಗಲಿದ್ದು, ಈ   ಹೈ ವೋಲ್ಟೇಜ್ ಪಂದ್ಯಕ್ಕೆ ಇಡೀ ವಿಶ್ವವೇ ಕಾದುಕುಳಿತಿದೆ

author img

By

Published : Jun 2, 2019, 10:57 AM IST

suresh

ಮುಂಬೈ: ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲು ಕಂಡಿಲ್ಲ, ಈ ಬಾರಿಯೂ ಪಾಕಿಸ್ತಾನದ ಕೈಯಲ್ಲಿ ಭಾರತವನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಪವರ್​ ಹಿಟ್ಟರ್​ ಖ್ಯಾತಿಯ ಸುರೇಶ್ ರೈನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಇದುವರೆಗೂ 6 ಬಾರಿ ಪಾಕಿಸ್ತಾನದ ಜೊತೆ ಮುಖಾಮುಖಿಯಾಗಿದ್ದು 6 ಬಾರಿಯೂ ಜಯ ಸಾಧಿಸಿದೆ. 2019ರ ವಿಶ್ವಕಪ್​ನಲ್ಲಿ ಭಾರತ ತಂಡ ಮ್ಯಾಚೆಂಸ್ಟರ್‌ನಲ್ಲಿ ಜೂನ್​ 16ರಂದು ಪರಸ್ಪರ ಮುಖಾಮುಖಿಯಾಗಲಿದ್ದು, ಈ ಹೈ ವೋಲ್ಟೇಜ್ ಪಂದ್ಯಕ್ಕೆ ಇಡೀ ವಿಶ್ವವೇ ಕಾದುಕುಳಿತಿದೆ.

ಭಾರತ ತಂಡದ ಆಟಗಾರರು ಪಾಕಿಸ್ತಾನ ವಿರುದ್ಧದ ಪಂದ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ. ತಮ್ಮ ಮೊದಲ ಪಂದ್ಯದಲ್ಲಿ ಕೇವಲ 105 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಪಾಕಿಸ್ತಾನ ಆಘಾತಕಗಕೀಡಾಗಿದೆ. ಇನ್ನು ಭಾರತ ತನ್ನ ಮೊದಲ ಪಂದ್ಯದಲ್ಲಿ ಗೆದ್ದಿದ್ದೇ ಆದರೆ, ಪಾಕಿಸ್ತಾನ ವಿರುದ್ಧ ಸುಲಭವಾಗಿ ಗೆಲ್ಲಲಿದೆ ಎಂದಿದ್ದಾರೆ.

ಭಾರತ ತಂಡ ಪ್ರಸ್ತುತ ವಿಶ್ವಕಪ್​ನಲ್ಲಿ ಬಲಿಷ್ಠ ತಂಡವಾಗಿದೆ. ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ವಿಶ್ವಶ್ರೇಷ್ಠ ಆಟಗಾರರಿರುವುದರಿಂದ ನಮ್ಮ ತಂಡವೇ ವಿಶ್ವಕಪ್​ ಗೆಲ್ಲುವ ಫೇವರೇಟ್. ಆದರೆ ಇಂಗ್ಲೆಂಡ್​ ಹಾಗೂ ದ.ಆಫ್ರಿಕಾ ತಂಡಗಳು ಪ್ರಬಲ ಪೈಪೋಟಿ ನೀಡಲಿವೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.