ಲಂಡನ್: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿಖರ್ ಧವನ್ ಹೆಬ್ಬೆರಳು ಮುರಿತಕ್ಕೆ ಒಳಗಾಗಿರುವುದರಿಂದ ಆರಂಭಿಕನಾಗಿ ಕೆ.ಎಲ್.ರಾಹುಲ್ರನ್ನು, 4ನೇ ಸ್ಥಾನಕ್ಕೆ ದಿನೇಶ್ ಕಾರ್ತಿಕ್ರನ್ನು ಕಣಕ್ಕಿಳಿಸಿ ಎಂದು ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಸಲಹೆ ನೀಡಿದ್ದಾರೆ.
ಧವನ್ ಗಾಯಗೊಂಡಿರುವುದು ಭಾರತ ತಂಡದಕ್ಕೆ ದೊಡ್ಡ ಹೊಡೆತವಾಗಿದೆ. ಆದರೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ತಂಡದಲ್ಲಿ ಫಿಟ್ ಇರುವ ಆಟಗಾರರು ಬ್ಯಾಕ್ ಇರುವುದರಿಂದ ಅವರನ್ನು 11ರ ಬಳಗದಲ್ಲಿ ಆಡಿಸಬಹುದು ಎಂದಿರುವ ಮಾಜಿ ವಿಕೆಟ್ ಕೀಪರ್ ಮೋರೆ, ಧವನ್ ಸ್ಥಾನಕ್ಕೆ ರಾಹುಲ್ ಹೆಸರು ಸೂಚಿಸಿದ್ದಾರೆ.
ಧವನ್ ಐಸಿಸಿ ಟೂರ್ನಮೆಂಟ್ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅವರ ಅನುಪಸ್ಥಿತಿಯಲ್ಲಿ ಕೊಹ್ಲಿಗೆ ರಾಹುಲ್ರನ್ನು ಆಡಿಸುವಂತೆ ಸಲಹೆ ನೀಡುತ್ತೇನೆ. ರಾಹುಲ್ ಆರಂಭಿಕ ಸ್ಥಾನಕ್ಕೆ ಅತ್ಯುತ್ತಮ ಆಯ್ಕೆ ಎಂದು ತಿಳಿಸಿದ್ದಾರೆ.
ರಾಹುಲ್ ಆರಂಭಿಕನಾದರೆ, 4ನೇ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಕಿರಣ್ ಮೋರೆ, ದಿನೇಶ್ ಕಾರ್ತಿಕ್ ಹೆಸರನ್ನು ಸೂಚಿಸಿದ್ದಾರೆ. ಕಾರ್ತಿಕ್ ಬ್ಯಾಟ್ ಹಾಗೂ ಫೀಲ್ಡಿಂಗ್ ಅಲ್ಲದೆ ಅವಶ್ಯಕವಿದ್ದರೆ ಕೀಪಿಂಗ್ ಕೂಡ ಮಾಡಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.