ಲಂಡನ್: ಭಾರತದ ಕ್ರಿಕೆಟ್ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಭೂಮಿಯಲ್ಲಿ ಶ್ರೇಷ್ಠ ಗೆಮ್ ಚೇಂಜರ್ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ತಂಡದ ನಾಯಕನಾಗಿ ತಂಡವನ್ನು ವಿಶ್ವಕಪ್ನಲ್ಲಿ ಕೊಹ್ಲಿ ಉತ್ತಮವಾಗಿ ಮುನ್ನಡೆಸಲಿದ್ದಾರೆ. ವಿಶ್ವಕಪ್ ಇಂಗ್ಲೆಂಡ್ನಲ್ಲಿ ನಡೆಯುತ್ತಿದ್ದು, ತವರಿನ ಬಲವಿರುವುದರಿಂದ ಫೇವರೇಟ್ ಎನ್ನಬಹುದು, ಆದರೆ ಸದ್ಯದ ಮಟ್ಟಿಗೆ ನಾಯಕತ್ವದಲ್ಲಿ ಕೊಹ್ಲಿಗೆ ಯಾರು ಸಮಾನರಿಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಭಿಪ್ರಾಯ ಪಟ್ಟಿದ್ದಾರೆ.
ನಿಮ್ಮ ಪ್ರಕಾರ ಇಂಗ್ಲೆಂಡ್ ಬ್ಯಾಟಿಂಗ್ ಲೈನಪ್ಗಿಂತ ಬೇರೆ ದೇಶದ ಯಾವ ಆಟಗಾರ ಉತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ ಎಂಬ ಪ್ರಶ್ನೆಗೆ ಕೆವಿನ್ ಯೋಚನೆ ಮಾಡದೆ ಕೊಹ್ಲಿಯನ್ನು ಅತ್ಯುತ್ತಮ ಗೇಮ್ ಚೇಂಜರ್ ಹಾಗೂ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಉತ್ತಿರಿಸಿದರು. ಜೊತೆಗೆ ಭಾರತ ತಂಡ ವಿಶ್ವಕಪ್ನಲ್ಲಿ ಪ್ರಭಲ ಪೈಪೋಟಿ ನೀಡುವ ತಂಡವಾಗಿದೆ ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾದ ಲೆಜೆಂಡ್ ಜಾಕ್ ಕಾಲೀಸ್ ಕೂಡ ಭಾರತ ತಂಡದ ನಾಯಕ ಕೊಹ್ಲಿಯನ್ನು ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದಿದ್ದಾರೆ.
ಇನ್ನು ಈ ಇಬ್ಬರ ಮಾಜಿ ಆಟಗಾರರ ಪ್ರಕಾರ ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸುವ ಮೊದಲ ಮೂರು ತಂಡಗಳು ಎಂದಿದ್ದು, ನಾಲ್ಕನೇ ಸ್ಥಾನಕ್ಕೆ ಉಳಿದ ತಂಡಗಳು ಪ್ರಭಲ ಪೈಪೋಟಿ ನಡೆಸಲಿವೆ ಎಂದಿದ್ದಾರೆ.