ETV Bharat / briefs

ಕೊಹ್ಲಿಗೆ ಸೊಕ್ಕಿದೆ, ನನ್ನಲ್ಲೂ ಇತ್ತು, ಏನಿವಾಗ? ಐ ಲೈಕ್​​​ ವಿರಾಟ್​​​​ ಎಂದ ವಿಂಡೀಸ್​​​ ಲೆಜೆಂಡ್​​​​! - ವಿಶ್ವಕಪ್​

ಮಾಜಿ ವಿಂಡೀಸ್​ ಕ್ಯಾಪ್ಟನ್​ ರಿಚರ್ಡ್ಸ್​ ಕೊಹ್ಲಿಯ ಅಹಂಕಾರದ ವರ್ತನೆಯನ್ನು ತುಂಬಾ ಪ್ರೀತಿಸುವುದಾಗಿ ಹೇಳಿದ್ದಾರೆ. ಜೊತೆಗೆ ಕೊಹ್ಲಿಯ ಇಂದಿನ ನಡವಳಿಕೆ ದಶಕಗಳ ಹಿಂದೆ ತಮ್ಮಲ್ಲೂ ಇತ್ತು ಎಂದು ಕೊಹ್ಲಿಯನ್ನು ಸಮರ್ಥಿಸಿಕೊಂಡು ಟೀಕಾಕಾರರಿಗೆ ಟಾಂಗ್​ ನೀಡಿದ್ದಾರೆ.

kohli
author img

By

Published : Jun 4, 2019, 10:33 AM IST

ಲಂಡನ್​: ಮೈದಾನದಲ್ಲಿ ಎದುರಾಳಿ ತಂಡದ ವಿರುದ್ಧ ವಿಕೆಟ್​ ಬಿದ್ದಾಗ ಅಥವಾ ಎದುರಾಳಿ ಬೌಲರ್​ ತಮ್ಮನ್ನು ಕೆಣಕಿದಾಗ ಮೈದಾನದಲ್ಲೇ ಕೋಪದಿಂದ ವರ್ತಿಸುವ ಕೊಹ್ಲಿಯನ್ನು ಟೀಕಿಸುವವರ ಬಾಯಿ ಮುಚ್ಚುವಂತಹ ಹೇಳಿಕೆಯನ್ನು ವಿಂಡೀಸ್​ ದಿಗ್ಗಜ ವಿವಿಯನ್​ ರಿಚರ್ಡ್ಸ್​ ಕೊಟ್ಟಿದ್ದಾರೆ.

ಮಾಜಿ ವಿಂಡೀಸ್​ ಕ್ಯಾಪ್ಟನ್​ ವಿವಿ ಕೊಹ್ಲಿಯ ಅಹಂಕಾರದ ವರ್ತನೆಯನ್ನು ತುಂಬಾ ಪ್ರೀತಿಸುವುದಾಗಿ ಹೇಳಿದ್ದಾರೆ. ಜೊತೆಗೆ ಕೊಹ್ಲಿಯ ಇಂದಿನ ನಡವಳಿಕೆ ದಶಕಗಳ ಹಿಂದೆ ತಮ್ಮಲ್ಲೂ ಇತ್ತು ಎಂದು ಕೊಹ್ಲಿಯನ್ನು ಸಮರ್ಥಿಸಿಕೊಂಡು ಟೀಕಕಾರರಿಗೆ ಟಾಂಗ್​ ನೀಡಿದ್ದಾರೆ.

"ಕೊಹ್ಲಿಯಂತಹ ಹುಡುಗರನ್ನು ನಾನು ಇಷ್ಟ ಪಡುತ್ತೇನೆ. ಕೆಲವರು ಅವರ ಅಹಂಕಾರದ ವರ್ತನೆಯ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಆದರೆ ಅವೆಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು" ಎಂದಿರುವ ಅವರು ಕೊಹ್ಲಿಯನ್ನು ತಮಗೆ ಹೋಲಿಕೆ ಮಾಡಿಕೊಂಡಿದ್ದಾರೆ.

Richards
ವಿವಿಯನ್​ ರಿಚರ್ಡ್ಸ್​

"ನಾನು ಭಾರತೀಯರ ಬ್ಯಾಟಿಂಗ್​ಅನ್ನು ಇಷ್ಟಪಡುತ್ತೇನೆ. ಆತ್ಮವಿಶ್ವಾಸ ಎಂಬುದು ಅವರಲ್ಲಿದೆ. ಯಾರೆ ಆದರೂ ಒಂದು ರಾತ್ರಿಯೊಳಗೆ ಆತ್ಮವಿಶ್ವಾಸವನ್ನು ಪಡೆಯುವುದಕ್ಕಾಗುವುದಿಲ್ಲ. ಅದನ್ನು ನೀವೇ ನಿಮ್ಮಲ್ಲಿ ಅಳವಡಿಸಿಕೊಳ್ಳಬೇಕು ಅಥವಾ ಹುಟ್ಟಿನಿಂದ ಬರಬೇಕು. ಕೊಹ್ಲಿ ಒಬ್ಬ ಹೋರಾಟಗಾರ. ಆತ ತನ್ನ ತಂಡದ ಆಟಗಾರರನ್ನು ಕಾಪಾಡಿಕೊಳ್ಳುವ ಸಲುವಾಗಿ ಹೇಗಾದರು ವರ್ತಿಸಬಹುದು" ಎಂದು ಕೊಹ್ಲಿ ಬಗ್ಗೆ ವಿವಿ ಗುಣಗಾನ ಮಾಡಿದ್ದಾರೆ.

ಕೊಹ್ಲಿಯಲ್ಲಿರುವುದು ಅಹಂಕಾರವಲ್ಲ. ಅವರು ತಮ್ಮನ್ನು ಸಮರ್ಥಿಸಿಕೊಳ್ಳಲು ಯಾರ ವಿರುದ್ಧವಾದರು ನಿಲ್ಲುತ್ತಾರೆ. ಇದು ಸರಿಯಾದ ಮಾರ್ಗ. ಉತ್ತಮ ಆಟಗಾರನೆನಿಸಿಕೊಂಡವರೆಲ್ಲಾ ವಿಶ್ವಕಪ್​ನಂತಹ ಬೃಹತ್​ ವೇದಿಕೆಯಲ್ಲಿ ಗೆಲುವಿಗಾಗಿ ಹಂಬಲಿಸುತ್ತಾರೆ. ಅದರಂತೆಯೇ ಕೊಹ್ಲಿಯೂ ಇದ್ದಾರೆ ಎಂದಿದ್ದಾರೆ.

ಎರಡು ದಿನಗಳ ಹಿಂದೆ ದ.ಆಫ್ರಿಕಾದ ವೇಗಿ ರಬಾಡಾ ಕೊಹ್ಲಿ ಅಪ್ರಬುದ್ಧ, ನಿಂದನೆಯನ್ನು ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದೀಗ ರಿಚರ್ಡ್ಸ್​​ ಅವರಂತಹ ದಿಗ್ಗಜರೇ ಕೊಹ್ಲಿಯನ್ನು ಹೊಗಳಿರುವುದು ಕೋಟ್ಯಂತರ ಭಾರತೀಯರ ಕಾಲರ್​ ಎಗರಿಸುವಂತೆ ಮಾಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.