ನವದೆಹಲಿ: ಲೈಂಗಿಕ ಕಿರುಕುಳದ ಆರೋಪದಿಂದ ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ರನ್ನು ದೋಷಮುಕ್ತರನ್ನಾಗಿ ಮಾಡಿರುವ ವಿಚಾರ ದೂರುದಾರ ಮಹಿಳೆಯ ಕಣ್ಣು ಕೆಂಪಗಾಗಿಸಿದೆ.
ಜಸ್ಟೀಸ್ ಎಸ್.ಎ.ಬೋಬ್ಡೆ, ಇಂದಿರಾ ಬ್ಯಾನರ್ಜಿ ಹಾಗೂ ಇಂದು ಮಲ್ಹೋತ್ರಾರಿದ್ದ ಸಮಿತಿ ದೂರಿನ ಸಂಪೂರ್ಣ ವಿಚಾರಣೆ ನಡೆಸಿತ್ತು. ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರ ದೊರೆತಿಲ್ಲ ಎಂದಿದ್ದ ಸಮಿತಿ ಸೋಮವಾರದಂದು ಗೊಗೊಯ್ರಿಗೆ ಕ್ಲೀನ್ಚಿಟ್ ನೀಡಿತ್ತು.
ಸದ್ಯ ದೂರುದಾರ ಮಹಿಳೆ ತನಿಖೆಯ ಪ್ರತಿಯನ್ನು ನೀಡುವಂತೆ ಒತ್ತಾಯ ಮಾಡಿದ್ದಾಳೆ. ನನಗೆ ಪ್ರಕರಣದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವ ಹಕ್ಕಿದೆ. ಯಾವ ಆಧಾರದಲ್ಲಿ ಸಾಕ್ಷ್ಯಾಧಾರ ದೊರೆತಿಲ್ಲ ಎನ್ನುವುದು ಗೊತ್ತಾಗಬೇಕಿದೆ ಎಂದು ಮಹಿಳೆ ಹೇಳಿದ್ದಾಳೆ.
ಇವೆಲ್ಲದರ ನಡುವೆ ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಐವತ್ತಕ್ಕೂ ಅಧಿಕ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರು ಧರಣಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.