ಮುಂಬೈ: ಐಪಿಎಲ್ನಲ್ಲಿ 190ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸುತ್ತಿರುವ ಮುಂಬೈ ಇಂಡಿಯನ್ಸ್‌ನ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ವಕಪ್ನಲ್ಲಿ ಬೌಲಿಂಗ್ ಮಾಡಲು ಭಯವಾಗುತ್ತಿದೆ ಎಂದು ಮಲಿಂಗಾ ತಿಳಿಸಿದ್ದಾರೆ.
ಮೊನ್ನೆ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 12 ಬಾಲ್ಗಳಿಗೆ ಬೇಕಿದ್ದ 22 ರನ್ಗಳನ್ನು ಒಂದೇ ಓವರ್ನಲ್ಲಿ ಚಚ್ಚಿದ್ದರು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ 4 ವಿಕೆಟ್ ಪಡೆದಿದ್ದ ಮಲಿಂಗಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಇಂಡಿಯನ್ಸ್‌ನ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಎದುರು ಬೌಲಿಂಗ್ ಮಾಡಲು ಭಯವಾಗುತ್ತದೆ ಎಂದು ಲಸಿತ್ ಮಾಲಿಂಗಾ ತಿಳಿಸಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಹಾರ್ದಿಕ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಆಟಗಾರರಾಗಿದ್ದಾರೆ. ಚೆನ್ನೈ ವಿರುದ್ಧ ಕೊನೆಯಲ್ಲಿ ಬ್ರಾವೋ ಅಂತಹ ಅನುಭವವುಳ್ಳ ಬೌಲರ್ಗೆ 29 ರನ್ ಬಾರಿಸಿದ್ದರು. ಮೊನ್ನೆಯ ಪಂದ್ಯದಲ್ಲಿ ಪವನ್ ನೇಗಿಗೆ 21 ರನ್ ಬಾರಿಸಿದ್ದಾರೆ.
ಈ ಟೂರ್ನಿಯಲ್ಲಿ ಪಾಂಡ್ಯ ಆರ್ಸಿಬಿ ವಿರುದ್ಧ 2 ಪಂದ್ಯಗಳಲ್ಲೂ ಅಬ್ಬರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ 14 ಎಸೆತಗಳಲ್ಲಿ 32, ಕೆಕೆಆರ್ ವಿರುದ್ಧ 19 ಎಸೆತಗಳಲ್ಲಿ 31, ಸಿಎಸ್ಕೆ ವಿರುದ್ಧ 8 ಎಸೆತಗಳಲ್ಲಿ 25, ರಾಜಸ್ಥಾನ್ ವಿರುದ್ಧ 11 ಎಸೆತಗಳಲ್ಲಿ 28 ರನ್ಗಳಿಸಿದ್ದಾರೆ.
8 ಪಂದ್ಯಗಳಲ್ಲಿ 191ರ ಸ್ಟ್ರೈಕ್ರೇಟ್ಗಳ 186 ರನ್ಗಳಿಸಿದ್ದಾರೆ. ಇದನ್ನು ನೋಡಿ ಶಾಕ್ಗೊಳಗಾಗಿರುವ ಶ್ರೀಲಂಕಾದ ಮಲಿಂಗಾ, ಹಾರ್ದಿಕ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ. ಮುಂಬರುವ ವಿಶ್ವಕಪ್ನಲ್ಲಿ ಅವರ ವಿರುದ್ಧ ಬೌಲಿಂಗ್ ನಡೆಸುವುದು ಸವಾಲಿನ ಕೆಲಸ ಎಂದು ಅಭಿಪ್ರಾಯ ಪಟ್ಟಿದ್ದಾರೆ.