ಹೈದರಾಬಾದ್: ತೆಲುಗು ರಾಜ್ಯದ ಯುವಕನೊಬ್ಬ ಒಂದೊಳ್ಳೆ ವಿಚಾರಕ್ಕೆ ಗಿನ್ನೆಸ್ ದಾಖಲೆಯ ಪುಟ ಸೇರಿದ್ದಾರೆ.
ಗೌತಮ್ ಕುಮಾರ್ ಎನ್ನುವ ಹೈದರಾಬಾದ್ ಮೂಲಕ ಯುವಕ ''Serve Needy'' ಎನ್ನುವ ಎನ್ಜಿಒ ಸ್ಥಾಪಕ ಮೂಲಕ ಒಂದೇ ದಿನ ಸಾವಿರಕ್ಕೂ ಅಧಿಕ ಮಂದಿಗೆ ಆಹಾರ ನೀಡಿದ್ದಾನೆ. ಭಾನುವಾರ ಹೈದರಾಬಾದ್ನ ಮೂರು ವಿವಿಧ ಸ್ಥಳಗಳಲ್ಲಿ ಗೌತಮ್ ಬಡವರಿಗೆ ಆಹಾರ ನೀಡಿ ಗಿನ್ನೆಸ್ ದಾಖಲೆ ಸೇರಿದ್ದಾರೆ.
ಗಿನ್ನೆಸ್ ಬುಕ್ ಆಫ್ ರೆಕಾರ್ಡ್ನ ಭಾರತೀಯರ ಪ್ರತಿನಿಧಿ ಕೆ.ವಿ.ರಮಣ ರಾವ್ ಹಾಗೂ ತೆಲಂಗಾಣದ ಪ್ರತಿನಿಧಿ ಟಿ.ಎಂ.ಶ್ರೀಲತಾರವರು ಯುವಕನ ಕೆಲಸವನ್ನ ದಾಖಲಿಸಿಕೊಂಡಿದ್ದಾರೆ. ಜೊತೆಗೆ ಗಿನ್ನೆಸ್ ದಾಖಲೆಯ ಪ್ರಮಾಣ ಪತ್ರವನ್ನು ಇದೇ ವೇಳೆ ನೀಡಿದ್ದಾರೆ.
ಆ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗೌತಮ್, "2014ರ ನಾನು ಇಂತಹ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡೆ. ಸದ್ಯ ನಾವು 140 ಜನ ಕಾರ್ಯಕರ್ತರನ್ನು ಹೊಂದಿದ್ದೇವೆ. ಇಂದು ನಾನು ಒಬ್ಬನೇ ಸಾವಿರ ಜನರಿಗೆ ಆಹಾರವನ್ನು ನೀಡಿದ್ದೇನೆ. ಇದು ವಿಶ್ವದಾಖಲೆಗೆ ಪಾತ್ರವಾಗಿದೆ" ಎಂದರು.