ETV Bharat / briefs

ರಂಜಾನ್​ ಸಂಭ್ರಮ: ಮಾರುಕಟ್ಟೆಯಲ್ಲಿ ಖರ್ಜೂರ್​ ಮಾರಾಟ ಬಲು ಜೋರು

ದೇಹಕ್ಕೆ ಹೆಚ್ಚು ಶಕ್ತಿ ನೀಡುವ ಖರ್ಜೂರ್​​ ಹೆಚ್ಚು ಸೇವನೆ ಮಾಡುವುದರಿಂದ ನಗರದಲ್ಲಿ ವಿವಿಧೆಡೆ ಹಣ್ಣಿನ ವ್ಯಾಪಾರಿಗಳು ದೈನಂದಿನ ಹಣ್ಣುಗಳ ಜೊತೆಗೆ ಖರ್ಜೂರ ಹಣ್ಣು ತಂದು ಮಾರಾಟ ಮಾಡಿ ಲಾಭಗಳಿಸುತ್ತಿದ್ದಾರೆ.

ಖರ್ಜೂರ್​ ಮಾರಾಟ ಬಲು ಜೋರು
author img

By

Published : May 12, 2019, 3:18 AM IST

ರಾಯಚೂರು: ಮುಸ್ಲಿಮರ ಪವಿತ್ರ ಮಾಸಗಳಲ್ಲಿ ರಂಜಾನ್ ಕೂಡ ಒಂದು. ಈ ತಿಂಗಳಲ್ಲಿ ಮುಸ್ಲಿಮ ಬಾಂಧವರು ಒಂದು ತಿಂಗಳ ಕಾಲ ಉಪವಾಸ (ರೋಜಾ) ಮಾಡುವುದು ಸರ್ವೆ ಸಾಮಾನ್ಯ. ಸಂಜೆ ಉಪವಾಸ ಬಿಡುವಾಗ ವಿವಿಧ ಫಲಹಾರ ಸೇವೆ ಮಾಡುವ ಇವರು ಹೆಚ್ಚಾಗಿ ಖರ್ಜೂರ್​ ಖರೀದಿ ಮಾಡುತ್ತಾರೆ.

ಖರ್ಜೂರ್​ ಮಾರಾಟ ಬಲು ಜೋರು

ದೇಹಕ್ಕೆ ಹೆಚ್ಚು ಶಕ್ತಿ ನೀಡುವ ಖರ್ಜೂರ್​ ಹೆಚ್ಚು ಸೇವನೆ ಮಾಡುವುದರಿಂದ ನಗರದಲ್ಲಿ ವಿವಿಧೆಡೆ ಹಣ್ಣಿನ ವ್ಯಾಪಾರಿಗಳು ದೈನಂದಿನ ಹಣ್ಣುಗಳ ಜೊತೆಗೆ ಖರ್ಜೂರ್​ ಹಣ್ಣು ತಂದು ಮಾರಾಟ ಮಾಡಿ ಲಾಭಗಳಿಸುತ್ತಿದ್ದಾರೆ. ಇದರ ಮಾರಾಟ ಕೂಡ ಬಲು ಜೋರಾಗಿ ನಡೆದಿದೆ.

ನಗರದ ಗಂಜ್,ಚಂದ್ರಮೌಳೇಶ್ವರ ರಸ್ತೆ, ಬಸ್​ಸ್ಟ್ಯಾಂಡ್​,ಸ್ಟೇಷನ್ ರಸ್ತೆ ಸೇರಿ ವಿವಿಧ ಪ್ರದೇಶಗಳಲ್ಲಿ ತಳ್ಳುವ ಬಂಡಿಗಳಲೂ ಇದರ ಮಾರಾಟ ಜೋರಾಗಿದೆ. ಇನ್ನು ಹಣ್ಣಿನ ಮಾರಾಟಗಾರರು ಬಗೆಬಗೆಯ ಹಣ್ಣು ಮಾರಾಟ ಮಾಡುವುದರ ಜತೆಗೆ ಖರ್ಜೂರ್​ ಕೂಡ ಮಾರಾಟ ಮಾಡುತ್ತಿದ್ದಾರೆ. ಪ್ರಮುಖವಾಗಿ ಇರಾನಿ, ಬರಾರಿ ಸೇರಿದಂತೆ ವಿವಿಧ ಬಗೆಯ ಖರ್ಜೂರ್​ ಮಾರಾಟವಾಗುತ್ತಿದ್ದು, ಕೆಜಿಗೆ 70ರಿಂದ ಸಾವಿರದವರೆಗೆ ಬೆಲೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.