ನ್ಯೂಯಾರ್ಕ್: ಸಮಾಜದ ಪ್ರತಿಯೊಂದು ಆಗೂಹೋಗುಗಳಿಗೂ ತಕ್ಷಣವೇ ಸ್ಪಂದಿಸುವ ಸಾಮಾಜಿಕ ಜಾಲತಾಣವನ್ನು ಇಂದು ಆವರಿಸಿದ್ದು ಮೆಟ್ಗಾಲಾ.
ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಜನಪ್ರಿಯ ತಾರೆಗಳ ಚಿತ್ರ-ವಿಚಿತ್ರ ಸ್ಟೈಲ್ ಏಕಾಏಕಿ ಸುದ್ದಿಯಾದ ಮೆಟ್ಗಾಲಾ ಇವೆಂಟ್ ಬಗ್ಗೆ ನಿಮಗೆ ತಿಳಿಯದ ಸಂಗತಿ ಇಲ್ಲಿದೆ...
ಮೆಟ್ಗಾಲಾ ಎನ್ನುವುದು ಪ್ರತಿವರ್ಷ ನಡೆಯುವ ಫ್ಯಾಷನ್ ಇವೆಂಟ್. ಸಂಗೀತ, ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳ ಖ್ಯಾತನಾಮರು ಮೆಟ್ಗಾಲಾ ಇವೆಂಟ್ನಲ್ಲಿ ಪಾಲ್ಗೊಳ್ಳುತ್ತಾರೆ. ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಪ್ರತಿವರ್ಷ ಆಯೋಜನೆ ಮಾಡಲಾಗುತ್ತದೆ.
-
Met 2019#MimiCuttrell @PatiDubroff #BokHee @PattieYankee @Chopard @Dior @voguemagazine @metmuseum pic.twitter.com/cnhMpq3wTH
— PRIYANKA (@priyankachopra) May 7, 2019 " class="align-text-top noRightClick twitterSection" data="
">Met 2019#MimiCuttrell @PatiDubroff #BokHee @PattieYankee @Chopard @Dior @voguemagazine @metmuseum pic.twitter.com/cnhMpq3wTH
— PRIYANKA (@priyankachopra) May 7, 2019Met 2019#MimiCuttrell @PatiDubroff #BokHee @PattieYankee @Chopard @Dior @voguemagazine @metmuseum pic.twitter.com/cnhMpq3wTH
— PRIYANKA (@priyankachopra) May 7, 2019
ಮೆಟ್ನಲ್ಲಿ ಫ್ಯಾಷನ್ ಕಲೆಕ್ಷನ್ಗಾಗಿ ನಿಧಿ ಸಂಗ್ರಹಣೆಗಾಗಿ ಇವೆಂಟ್ ಆಯೋಜಿಸಲಾಗುತ್ತಿದ್ದು, ಪ್ರತಿವರ್ಷವೂ ವಿಭಿನ್ನ ಥೀಮ್ ನೀಡಲಾಗುತ್ತದೆ. ನೋಟ್ಸ್ ಆನ್ ಫ್ಯಾಷನ್ ಎನ್ನುವುದು ಈ ಬಾರಿಯ ಥೀಮ್ ಆಗಿತ್ತು.
ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಲೇಡಿ ಗಾಗಾ ಹಾಗೂ ಸೋಫಿಯಾ ಟರ್ನರ್ ತಮ್ಮ ವಿಶೇಷ ವೇಷ ಭೂಷಣದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಜೊತೆಗೆ ಇಂಟರ್ನೆಟ್ನಲ್ಲಿ ಸಖತ್ ಟ್ರೋಲ್ ಸಹ ಆಗಿದ್ದಾರೆ.
-
70’s Vibes. Emerald. Camp Glam. #MetGala pic.twitter.com/UGUxbiBfr2
— Ciara (@ciara) May 7, 2019 " class="align-text-top noRightClick twitterSection" data="
">70’s Vibes. Emerald. Camp Glam. #MetGala pic.twitter.com/UGUxbiBfr2
— Ciara (@ciara) May 7, 201970’s Vibes. Emerald. Camp Glam. #MetGala pic.twitter.com/UGUxbiBfr2
— Ciara (@ciara) May 7, 2019
ಶುರುವಾಗಿದ್ದು ಯಾವಾಗ, ಎಂಟ್ರಿ ಟಿಕೆಟ್ ಎಷ್ಟು..?
73 ವರ್ಷಗಳ ಹಿಂದೆ ಮಿಡ್ನೈಟ್ ಸಪ್ಪರ್ ಎನ್ನುವ ಹೆಸರಿನಲ್ಲಿ ಇವೆಂಟ್ ಆರಂಭವಾಯಿತು. ಆರಂಭದಲ್ಲಿ ಅತಿಥಿಗಳು 50 ಅಮೆರಿಕನ್ ಡಾಲರ್( ಸುಮಾರು 3,500 ರೂ) ನೀಡಿ ಎಂಟ್ರಿ ಪಡೆಯಬಹುದಿತ್ತು.
ಪ್ರಸ್ತುತ ಮೆಟ್ಗಾಲಾ ಇವೆಂಟ್ಗೆ ಎಂಟ್ರಿ ನೀಡುವುದಾದರೆ 30,000 ಅಮೆರಿಕನ್ ಡಾಲರ್ ನೀಡಬೇಕು. ಭಾರತೀಯ ಕರೆನ್ಸಿಯಂತೆ ಈ ಬೆಲೆ 20,79,525 ರೂ.
-
#METGALA #METGAGA 3️⃣
— Lady Gaga (@ladygaga) May 7, 2019 " class="align-text-top noRightClick twitterSection" data="
📸 John Shearer @GettyImages pic.twitter.com/Q0w9vS650h
">#METGALA #METGAGA 3️⃣
— Lady Gaga (@ladygaga) May 7, 2019
📸 John Shearer @GettyImages pic.twitter.com/Q0w9vS650h#METGALA #METGAGA 3️⃣
— Lady Gaga (@ladygaga) May 7, 2019
📸 John Shearer @GettyImages pic.twitter.com/Q0w9vS650h
ಈ ಪರಿಯ ಮೊತ್ತ ನೀಡಿದರೆ ಜಸ್ಟ್ ಎಂಟ್ರಿ ಪಡೆಯಬಹುದು ಅಷ್ಟೇ. ಯಾವುದಾದರೂ ಗೌನ್ ಧರಿಸಬೇಕಾದಲ್ಲಿ ಅದರ ಬೆಲೆ ಸುಮಾರು 35,000 ಅಮೆರಿಕನ್ ಡಾಲರ್(24,26,112 ರೂ). ಚಿನ್ನಾಭರಣ ಪ್ರತ್ಯೇಕವಾಗಿರಲಿದ್ದು ಅದರ ಬೆಲೆ ತುಸು ಹೆಚ್ಚೇ ಇದೆ..!
-
Zendaya never disappoints #MetGala pic.twitter.com/0dhIbC0L16
— bbqs (@couturebiatch) May 7, 2019 " class="align-text-top noRightClick twitterSection" data="
">Zendaya never disappoints #MetGala pic.twitter.com/0dhIbC0L16
— bbqs (@couturebiatch) May 7, 2019Zendaya never disappoints #MetGala pic.twitter.com/0dhIbC0L16
— bbqs (@couturebiatch) May 7, 2019
2017ರಲ್ಲಿ 12 ಮಿಲಿಯನ್ ಅಮೆರಿಕನ್ ಡಾಲರ್( 83,20,20,000 ರೂ) ಹಣವನ್ನು ಇವೆಂಟ್ನಿಂದ ಸಂಗ್ರಹಿಸಿತ್ತು. ಆದರೆ ಇಲ್ಲಿ ಭಾಗಿಯಾಗುವ ಬಹುತೇಕ ಎಲ್ಲ ಖ್ಯಾತನಾಮರು ತಾವೇ ಹಣ ನೀಡುವುದಿಲ್ಲ. ಎ- ಲಿಸ್ಟ್ ಎಂದು ಪರಿಗಣಿಸಲಾಗಿರುವ ಸೆಲೆಬ್ರೆಟಿಗಳಿಗೆ ಪ್ರಮುಖವಾಗಿ ಚಿನ್ನಾಭರಣಗಳನ್ನು ಧರಿಸುವಂತೆ ಆಫರ್ ನೀಡಲಾಗುತ್ತದೆ.