ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ಭಾರತದ ಹೆಮ್ಮೆಯ ಪ್ರಾಜೆಕ್ಟ್ 'ಮಿಷನ್ ಶಕ್ತಿ'ಯ ವಿಡಿಯೋವನ್ನು ರಕ್ಷಣಾ ಇಲಾಖೆ ಬಿಡುಗಡೆ ಮಾಡಿದೆ.
ವಿಡಿಯೋದಲ್ಲಿ ಆರಂಭದಿಂದ ಕೊನೆಯ ಹಂತದ ಪರೀಕ್ಷೆವರೆಗಿನ ವಿವರವನ್ನು ನೀಡಲಾಗಿದೆ. ವಿಡಿಯೋದಲ್ಲಿ ಸರಣಿ ಗ್ರಾಫಿಕ್ಸ್ ಮೂಲಕ ಸಂಪೂರ್ಣ ಮಿಷನ್ ಯಾವ ರೀತಿ ಕಾರ್ಯಗತಗೊಳಿಸಲಾಯಿತು ಎನ್ನುವುದನ್ನು ಹೇಳಲಾಗಿದೆ.
- " class="align-text-top noRightClick twitterSection" data="">
2014ರಲ್ಲಿ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಮಿಷನ್ ಶಕ್ತಿಗೆ ಮತ್ತಷ್ಟು ಶಕ್ತಿ ನೀಡಿದ್ದರು. ಮಿಷನ್ನಲ್ಲಿ ಎದುರಾಗಬಹುದಾದ ಸವಾಲು ಹಾಗೂ ಸಮಸ್ಯೆಗಳನ್ನು ಡಿಆರ್ಡಿಒದ ವಿಜ್ಞಾನಿಗಳು ಕೇಂದ್ರ ಭದ್ರತಾ ಸಲಹೆಗಾರರು ಸಮಾಲೋಚನೆ ನಡೆಸಿರುವ ವಿಚಾರ ವಿಡಿಯೊ ಒಳಗೊಂಡಿದೆ. ಈ ಪ್ರಾಜೆಕ್ಟ್ನಲ್ಲಿ 150 ವಿಜ್ಞಾನಿಗಳು ಹಗಲು-ರಾತ್ರಿ ದುಡಿದಿದ್ದರು.
ಮಿಷನ್ ಶಕ್ತಿ ಯಶಸ್ವಿಯಾಗುತ್ತಿದ್ದಂತೆ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ತಮ್ಮ ಭಾಷಣದಲ್ಲಿ ಡಿಆರ್ಡಿಒ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಮಿಷನ್ ಶಕ್ತಿಯ ಮೂಲಕ ಈ ಸಾಧನೆಗೈದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೊದಲು ಅಮೆರಿಕ,ರಷ್ಯಾ, ಚೀನಾ ಈ ಸಾಧನೆಗೈದಿತ್ತು.