ಹೈದರಾಬಾದ್: ಅತ್ಯಂತ ರೋಚಕವಾಗಿ ಸಾಗಿದ್ದ ಐಪಿಎಲ್ ಉಪಾಂತ್ಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಂದು ರನ್ಗಳ ರೋಚಕ ಸೋಲುಂಡಿದ್ದು, ಧೋನಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ತಂಡವಾಗಿ ಈ ಆವೃತ್ತಿ ನಮ್ಮ ಪಾಲಿಗೆ ಅತ್ಯುತ್ತಮವಾಗಿತ್ತು.. ಆದರೆ ನಾವು ಫೈನಲ್ ತಲುಪಿದ್ದು ಹೇಗೆ ಎನ್ನುವ ವಿಮರ್ಶೆ ಅಗತ್ಯವಿದೆ. ಈ ಬಾರಿ ಮಾತ್ರ ನಾವು ಉತ್ತಮ ಪ್ರದರ್ಶನ ತೋರಿ ಕೊನೆಯ ಹಂತ ತಲುಪಿದ್ದಲ್ಲ" ಎಂದು ನಾಯಕ ಎಂ.ಎಸ್.ಧೋನಿ ಹೇಳಿದ್ದಾರೆ.
ನಮ್ಮ ಮಧ್ಯಮ ಕ್ರಮಾಂಕ ಅಷ್ಟೇನು ಉತ್ತಮವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ಇದು ಕಾಡಿತ್ತು. ವಿಚಿತ್ರವೆಂದರೆ ನಾವೆರಡು ತಂಡಗಳೇ ಟ್ರೋಫಿಯನ್ನು ಬದಲಾಯಿಸಿಕೊಳ್ಳುತ್ತಿದ್ದೇವೆ ಎಂದು ಧೋನಿ ಹಾಸ್ಯವಾಗಿ ಹೇಳಿದ್ದಾರೆ.
ಅತ್ಯಂತ ರೋಚಕವಾಗಿ ಸಾಗಿದ ಈ ಐಪಿಎಲ್ ಬಳಿಕ ನಮ್ಮು ಮುಂದಿನ ಗುರಿ ವಿಶ್ವಕಪ್ ಆಗಿರಲಿದೆ. ಬೌಲಿಂಗ್ ವಿಭಾಗದಲ್ಲಿ ಯಾವುದೇ ಚಿಂತೆಯಿಲ್ಲ, ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಒಂದಷ್ಟು ಬದಲಾವಣೆ ಅಗತ್ಯವಿದೆ ಎಂದು ಧೋನಿ ಇದೇ ವೇಳೆ ಹೇಳಿದ್ದಾರೆ.