ETV Bharat / briefs

ಬಿಡ್ಡಿಂಗ್​​ನಲ್ಲಿ ಜೇಬಿಗಿಳಿಸಿದ್ದು ಕೋಟಿ ಕೋಟಿ ಹಣ... ಟೂರ್ನಿಯಲ್ಲಿ ಮಾತ್ರ ಫ್ಲಾಪ್​ ಶೋ...! - ಐಪಿಎಲ್​​

ಕೋಟಿಗಟ್ಟಲೆ ಹಣ ನೀಡಿ ಫ್ರಾಂಚೈಸಿಗಳು ಖ್ಯಾತನಾಮ ಜೊತೆಗೆ ಯುವ ಪ್ರತಿಭೆಗಳನ್ನು ಖರೀದಿ ಮಾಡಿದ್ದರೆ, ಅಂತಹ ಆಟಗಾರರು ತಂಡದ ಹಾಗೂ ಫ್ರಾಂಚೈಸಿಗಳ ನಿರೀಕ್ಷೆಯನ್ನು ಹುಸಿ ಮಾಡಿವೆ. ಅಂತಹ ಪ್ರಮುಖ ಐದು ಆಟಗಾರರ ಮಾಹಿತಿ ಇಲ್ಲಿದೆ..

ಫ್ಲಾಪ್​ ಶೋ
author img

By

Published : May 14, 2019, 11:37 AM IST

ಹೈದರಾಬಾದ್: ಐಪಿಎಲ್​​ ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಬಿಕರಿಯಾಗುವ ಆಟಗಾರರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲ್ಲ ಎನ್ನುವ ಮಾತಿದೆ. ಇದು ಈ ಆವೃತ್ತಿಯಲ್ಲೂ ಮತ್ತೆ ಸಾಬೀತಾಗಿದೆ.

ಕೋಟಿಗಟ್ಟಲೆ ಹಣ ನೀಡಿ ಫ್ರಾಂಚೈಸಿಗಳು ಖ್ಯಾತನಾಮರ ಜೊತೆಗೆ ಯುವ ಪ್ರತಿಭೆಗಳನ್ನು ಖರೀದಿ ಮಾಡಿದ್ದರು. ಆದರೆ ಇದೀಗ ಅಂತಹ ಆಟಗಾರರು ತಂಡದ ಹಾಗೂ ಫ್ರಾಂಚೈಸಿಗಳ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ . ಅಂತಹ ಪ್ರಮುಖ ಐದು ಆಟಗಾರರ ಮಾಹಿತಿ ಇಲ್ಲಿದೆ..

ವರುಣ್​​ ಚಕ್ರವರ್ತಿ (ಪಂಜಾಬ್​​, 8.4 ಕೋಟಿ):
ಈ ಬಾರಿಯ ಬಿಡ್ಡಿಂಗ್​ನಲ್ಲಿ ಎಲ್ಲ ತಂಡಗಳೂ ವರುಣ್​ ಚಕ್ರವರ್ತಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದವು. ಕಾರಣ ವಿಭಿನ್ನ ಶೈಲಿಯ ಸ್ಪಿನ್. ಆದರೆ ಕೊನೆಗೆ ಈತ ಪಾಲಾಗಿದ್ದು ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್​ ಇಲೆವೆನ್ ಪಂಜಾಬ್.

ಕೇವಲ ಒಂದು ಪಂದ್ಯವನ್ನಾಡಿದ ವರುಣ್​​​ ನಾಲ್ಕು ಓವರ್ ಕೋಟಾದಲ್ಲಿ 35 ರನ್​ ಬಿಟ್ಟುಕೊಟ್ಟು ಒಂದು ವಿಕೆಟ್ ಕಿತ್ತಿದ್ದರು. ಬಳಿಕ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದರು.

ಹೆಚ್ಚಿನ ಓದಿಗಾಗಿ:

6 ಹೊಲಿಗೆ ಹಾಕುವಂತ ಗಾಯದ ನಡುವೆಯೂ ಕೊನೆಯ ಓವರ್​ತನಕ ಬ್ಯಾಟಿಂಗ್​ ನಡೆಸಿದ ವಾಟ್ಸನ್​

ಕಾರ್ಲೋಸ್​ ಬ್ರಾತ್​ವೈಟ್(ಕೆಕೆಆರ್​, 5 ಕೋಟಿ):
ಈ ಆವೃತ್ತಿಯಲ್ಲಿ ಪ್ಲೇ ಆಫ್​​ ಮಿಸ್ ಮಾಡಿಕೊಂಡ ಕೆಕೆಆರ್​ ತಂಡದಲ್ಲಿದ್ದ ದುಬಾರಿ ಆಟಗಾರ ವೆಸ್ಟ್​ ಇಂಡೀಸ್​​ನ ಕಾರ್ಲೋಸ್ ಬ್ರಾತ್​ವೈಟ್​​ ಫ್ಲಾಪ್​ ಶೋ ನಡೆಸಿದ್ದಾರೆ.

ಐದು ಕೋಟಿ ನೀಡಿ ಖರೀಸಿದ್ದರೂ ಬ್ರಾತ್​ವೈಟ್​ ಆಡಿದ್ದು ಕೇವಲ ಎರಡೇ ಪಂದ್ಯ..! ಆಡಿದ ಎರಡು ಮ್ಯಾಚ್​​ನಲ್ಲಿ ಕೇವಲ 11 ರನ್​ ಗಳಿಸಿದ್ದಾರೆ. ಆದರೆ ಬೌಲಿಂಗ್​ನಲ್ಲಿ ಯಾವುದೇ ಮ್ಯಾಜಿಕ್ ಮಾಡಲಿಲ್ಲ.

ಶಿವಂ ದುಬೆ(ಆರ್​​ಸಿಬಿ, 5 ಕೋಟಿ):
ಬಿಗ್​ ಹಿಟ್ಟರ್ ಎಂದೇ ಕರೆಸಿಕೊಳ್ಳುವ ಶಿವಂ ದುಬೆ ಆರ್​ಸಿಬಿ ತಂಡದಲ್ಲಿ ಯಾವುದೇ ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ. ರಣಜಿಯಲ್ಲಿ ಒಂದೇ ಓವರ್​​ನಲ್ಲಿ ಐದು ಸಿಕ್ಸರ್ ಸಿಡಿಸಿ ಮಿಂಚಿದ್ದ ದುಬೆ ಐಪಿಎಲ್​ನಲ್ಲಿ ತಂಡಕ್ಕೆ ನೆರವಾಗಲಿಲ್ಲ.

ನಾಲ್ಕು ಪಂದ್ಯವನ್ನಾಡಿದ ದುಬೆ ಒಟ್ಟಾರೆ 40 ರನ್​ ಗಳಿಸಿ ನಿರಾಸೆ ಮೂಡಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಡಿಸಿದ 24 ರನ್​ ದುಬೆ ಗರಿಷ್ಠ ಸ್ಕೋರ್.

ಹೆಚ್ಚಿನ ಓದಿಗಾಗಿ:

ವಿಶ್ವಕಪ್​ನಲ್ಲಿ ವೇಗದ ಶತಕ ಹಾಗೂ ಅರ್ಧಶತಕ ಸಿಡಿಸಿದ ವೀರರು...

ಪ್ರಭ್​ ಸಿಮ್ರನ್​​ ಸಿಂಗ್​(ಪಂಜಾಬ್​, 4.8 ಕೋಟಿ):
ಉತ್ತಮ ಮೊತ್ತಕ್ಕೆ ತಂಡ ಸೇರಿದ್ದರೂ ಪ್ರಭ್​ಸಿಮ್ರನ್​​ ಸಿಂಗ್ ಆಡಿದ್ದು ಕೇವಲ ಒಂದು ಮ್ಯಾಚ್. 42 ಎಸೆತದಲ್ಲಿ 106 ರನ್​ಗಳ ಅವಶ್ಯಕತೆ ಇದ್ದಾಗ ಮೈದಾನಕ್ಕಿಳಿದ ಪ್ರಭ್​ಸಿಮ್ರನ್​​ ಸಿಂಗ್ 17 ಎಸೆತದಲ್ಲಿ 16 ರನ್​ ಗಳಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಯಾವುದೇ ಅವಕಾಶ ಪಡೆಯಲೇ ಇಲ್ಲ.

ಶಿಮ್ರನ್​​ ಹೇಟ್ಮಯರ್​​(ಆರ್​ಸಿಬಿ, 4.2 ಕೋಟಿ):
ವಿಂಡೀಸ್​ ಮತ್ತೊಬ್ಬ ಬಲಿಷ್ಠ ಬ್ಯಾಟ್ಸ್​ಮನ್​ ಶಿಮ್ರನ್​ ಹೇಟ್ಮಯರ್​ ಈ ಬಾರಿಯ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದರು. ಆರಂಭಿಕ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ ಪರಿಣಾಮ ನಂತರದಲ್ಲಿ ಬೆಂಚ್​ ಕಾದಿದ್ದೇ ಹೆಚ್ಚು.

ಐದು ಪಂದ್ಯಗಳನ್ನಾಡಿದ ಹೇಟ್ಮಯರ್​​ 90 ರನ್​ ಗಳಿಸಿದರು. ಕೊನೆಯ ಪಂದ್ಯದಲ್ಲಿ ಮಿಂಚಿದ್ದ ಕೆರೆಬಿಯನ್ ಆಟಗಾರ 75 ರನ್​ ಸಿಡಿಸಿದ್ದರು. ಆದರೆ ಆ ವೇಳೆಗಾಗಲೇ ಆರ್​ಸಿಬಿ ಫ್ಲೇ ಆಫ್​ ರೇಸ್​​ನಿಂದ ಹೊರಬಿದ್ದಿತ್ತು.

Intro:Body:

ಬಿಡ್ಡಿಂಗ್​​ನಲ್ಲಿ ಸಿಕ್ಕಿದ್ದು ಕೋಟಿ ಕೋಟಿ ಹಣ... ಟೂರ್ನಿಯಲ್ಲಿ ಮಾತ್ರ ಫ್ಲಾಪ್​ ಶೋ...!

ಹೈದರಾಬಾದ್: ಐಪಿಎಲ್​​ ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಬಿಕರಿಯಾಗುವ ಆಟಗಾರರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲ್ಲ ಎನ್ನುವ ಮಾತಿದೆ. ಇದು ಈ ಆವೃತ್ತಿಯಲ್ಲೂ ಮತ್ತೆ ಸಾಬೀತಾಗಿದೆ.

ಕೋಟಿಗಟ್ಟಲೆ ಹಣ ನೀಡಿ ಫ್ರಾಂಚೈಸಿಗಳು ಖ್ಯಾತನಾಮ ಜೊತೆಗೆ ಯುವ ಪ್ರತಿಭೆಗಳನ್ನು ಖರೀದಿ ಮಾಡಿದ್ದರೆ ಅಂತಹ ಆಟಗಾರರು ತಂಡದ ಹಾಗೂ ಫ್ರಾಂಚೈಸಿಗಳ ನಿರೀಕ್ಷೆಯನ್ನು ಹುಸಿ ಮಾಡಿವೆ. ಅಂತಹ ಪ್ರಮುಖ ಐದು ಆಟಗಾರರ ಮಾಹಿತಿ ಇಲ್ಲಿದೆ..

ವರುಣ್​​ ಚಕ್ರವರ್ತಿ(ಪಂಜಾಬ್​​, 8.4 ಕೋಟಿ):

ಈ ಬಾರಿಯ ಬಿಡ್ಡಿಂಗ್​ನಲ್ಲಿ ಎಲ್ಲ ತಂಡಗಳೂ ವರುಣ್​ ಚಕ್ರವರ್ತಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದವು. ಕಾರಣ ವಿಭಿನ್ನ ಶೈಲಿಯ ಸ್ಪಿನ್. ಆದರೆ ಕೊನೆಗೆ ಈತ ಪಾಲಾಗಿದ್ದು ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್​ ಇಲೆವೆನ್ ಪಂಜಾಬ್.

ಕೇವಲ ಒಂದು ಪಂದ್ಯವನ್ನಾಡಿದ ವರುಣ್​​​ ನಾಲ್ಕು ಓವರ್ ಕೋಟಾದಲ್ಲಿ 35 ರನ್​ ಬಿಟ್ಟುಕೊಟ್ಟು ಒಂದು ವಿಕೆಟ್ ಕಿತ್ತಿದ್ದರು. ಬಳಿಕ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದರು.

ಕಾರ್ಲೋಸ್​ ಬ್ರಾತ್​ವೈಟ್(ಕೆಕೆಆರ್​, 5 ಕೋಟಿ):

ಈ ಆವೃತ್ತಿಯಲ್ಲಿ ಪ್ಲೇ ಆಫ್​​ ಮಿಸ್ ಮಾಡಿಕೊಂಡ ಕೆಕೆಆರ್​ ತಂಡದಲ್ಲಿದ್ದ ದುಬಾರಿ ಆಟಗಾರ ವೆಸ್ಟ್​ ಇಂಡೀಸ್​​ನ ಕಾರ್ಲೋಸ್ ಬ್ರಾತ್​ವೈಟ್​​ ಫ್ಲಾಪ್​ ಶೋ ನಡೆಸಿದ್ದಾರೆ.

ಐದು ಕೋಟಿ ನೀಡಿ ಖರೀಸಿದ್ದರೂ ಬ್ರಾತ್​ವೈಟ್​ ಆಡಿದ್ದು ಕೇವಲ ಎರಡೇ ಪಂದ್ಯ..! ಆಡಿದ ಎರಡು ಮ್ಯಾಚ್​​ನಲ್ಲಿ ಕೇವಲ 11 ರನ್​ ಗಳಿಸಿದ್ದಾರೆ. ಆದರೆ ಬೌಲಿಂಗ್​ನಲ್ಲಿ ಯಾವುದೇ ಮ್ಯಾಜಿಕ್ ಮಾಡಲಿಲ್ಲ.

ಶಿವಮ್ ದುಬೆ(ಆರ್​​ಸಿಬಿ, 5 ಕೋಟಿ):

ಬಿಗ್​ ಹಿಟ್ಟರ್ ಎಂದೇ ಕರೆಸಿಕೊಳ್ಳುವ ಶಿವಮ್ ದುಬೆ ಆರ್​ಸಿಬಿ ತಂಡದಲ್ಲಿ ಯಾವುದೇ ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ. ರಣಜಿಯಲ್ಲಿ ಒಂದೇ ಓವರ್​​ನಲ್ಲಿ ಐದು ಸಿಕ್ಸರ್ ಸಿಡಿಸಿ ಮಿಂಚಿದ್ದ ದುಬೆ ಐಪಿಎಲ್​ನಲ್ಲಿ ತಂಡಕ್ಕೆ ನೆರವಾಗಲಿಲ್ಲ.

ನಾಲ್ಕು ಪಂದ್ಯವನ್ನಾಡಿದ ದುಬೆ ಒಟ್ಟಾರೆ 40 ರನ್​ ಗಳಿಸಿ ನಿರಾಸೆ ಮೂಡಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಡಿಸಿದ 24 ರನ್​ ದುಬೆ ಗರಿಷ್ಠ ಸ್ಕೋರ್.

ಪ್ರಭ್​ಸಿಮ್ರನ್​​ ಸಿಂಗ್​(ಪಂಜಾಬ್​, 4.8 ಕೋಟಿ):

ಉತ್ತಮ ಮೊತ್ತಕ್ಕೆ ತಂಡ ಸೇರಿದ್ದರೂ ಪ್ರಭ್​ಸಿಮ್ರನ್​​ ಸಿಂಗ್ ಆಡಿದ್ದು ಕೇವಲ ಒಂದು ಮ್ಯಾಚ್. 42 ಎಸೆತದಲ್ಲಿ 106 ರನ್​ಗಳ ಅವಶ್ಯಕತೆ ಇದ್ದಾಗ ಮೈದಾನಕ್ಕಿಳಿದ ಪ್ರಭ್​ಸಿಮ್ರನ್​​ ಸಿಂಗ್ 17 ಎಸೆತದಲ್ಲಿ 16 ರನ್​ ಗಳಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಯಾವುದೇ ಅವಕಾಶ ಪಡೆಯಲೇ ಇಲ್ಲ.

ಶಿಮ್ರೋನ್​ ಹೇಟ್ಮಯರ್​​(ಆರ್​ಸಿಬಿ, 4.2 ಕೋಟಿ):

ವಿಂಡೀಸ್​ ಮತ್ತೊಬ್ಬ ಬಲಿಷ್ಠ ಬ್ಯಾಟ್ಸ್​ಮನ್​ ಶಿಮ್ರೋನ್ ಹೇಟ್ಮಯರ್​ ಈ ಬಾರಿಯ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದರು. ಆರಂಭಿಕ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ ಪರಿಣಾಮ ನಂತರದಲ್ಲಿ ಬೆಂಚ್​ ಕಾದಿದ್ದೇ ಹೆಚ್ಚು.

ಐದು ಪಂದ್ಯಗಳನ್ನಾಡಿದ ಹೇಟ್ಮಯರ್​​ 90 ರನ್​ ಗಳಿಸಿದರು. ಕೊನೆಯ ಪಂದ್ಯದಲ್ಲಿ ಮಿಂಚಿದ್ದ ಕೆರೆಬಿಯನ್ ಆಟಗಾರ 75 ರನ್​ ಸಿಡಿಸಿದ್ದರು. ಆದರೆ ಆ ವೇಳೆಗಾಗಲೇ ಆರ್​ಸಿಬಿ ಫ್ಲೇ ಆಫ್​ ರೇಸ್​​ನಿಂದ ಹೊರಬಿದ್ದಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.