ನವದೆಹಲಿ: ರಾಜಕೀಯ ಎಂದರೆ ಹಣ, ಸೀಟು, ಅಧಿಕಾರ ಎನ್ನುವ ಮಾತು ಸಾಮಾನ್ಯ. ರಾಜಕಾರಣದಲ್ಲಿರುವವರ ವಿದ್ಯಾರ್ಹತೆ ಬಗ್ಗೆ ಆಗಾಗ ಮಾತುಗಳು ಕೇಳಿಬರುತ್ತಿವೆ.
ರಾಜಕೀಯಕ್ಕೆ ವಿದ್ಯಾರ್ಹತೆಯ ಮಾನದಂಡ ಅಗತ್ಯವಿದೆಯೇ ಎನ್ನುವ ಚರ್ಚೆಯ ಮಧ್ಯೆ ಸದ್ಯ ಯಾವ ಪಕ್ಷ ಎಷ್ಟೊಂದು ವಿದ್ಯಾವಂತರನ್ನು ಹೊಂದಿದೆ ಎನ್ನುವ ಮಾಹಿತಿ ಇಲ್ಲಿದೆ.
ಅತ್ಯಂತ ಹೆಚ್ಚಿನ ವಿದ್ಯಾವಂತರನ್ನು ಹೊಂದಿರುವ ಮೊದಲ ಐದು ಪಕ್ಷ ದಕ್ಷಿಣ ಭಾರತದಲ್ಲಿವೆ. ವೈಎಸ್ಆರ್ ಕಾಂಗ್ರೆಸ್ನಲ್ಲಿ ಶೇ.88ರಷ್ಟು ಮಂದಿ ಪದವಿ ಪೂರೈಸಿದ್ದಾರೆ. ಈ ಮೂಲಕ ವೈಎಸ್ಆರ್ ಕಾಂಗ್ರೆಸ್ ಈ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ.
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷದಲ್ಲಿ ಶೇ.87.5ರಷ್ಟು ಮಂದಿ ಉನ್ನತ ಶಿಕ್ಷಣ ಪಡೆದವರಿದ್ದಾರೆ. ಇದರ ಪ್ರತಿಸ್ಪರ್ಧಿ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಪಕ್ಷದ ವಿದ್ಯಾವಂತರು ಶೇ.86.4.
ಶೇ.82.4ರಷ್ಟು ಪದವೀಧರರನ್ನು ಹೊಂದಿರುವ ತೆಲಂಗಾಣದ ’ತೆಲಂಗಾಣ ರಾಷ್ಟ್ರ ಸಮಿತಿ’(ಟಿಆರ್ಎಸ್) ನಂತರದ ಸ್ಥಾನದಲ್ಲಿದೆ. ತಮಿಳುನಾಡಿನ ಇನ್ನೊಂದು ಪಕ್ಷ ನಾಮ್ ತಮಿಳರ್ ಕಚ್ಚಿ ಪಕ್ಷದಲ್ಲಿ ಶೇ.80ರಷ್ಟು ವಿದ್ಯಾವಂತರಿದ್ದಾರೆ.