ಹೈದರಾಬಾದ್: ಮಂಡಿಯಲ್ಲಿ ಗಾಯವಾಗಿ ರಕ್ತ ಸುರಿಯುತ್ತಿದ್ದರು ತಂಡದ ಗೆಲುವಿಗಾಗಿ ಏಕಾಂಗಿಯಾಗಿ ಹೋರಾಟ ನಡೆಸಿದ ಸಿಎಸ್ಕೆ ತಂಡ ಶೇನ್ ವಾಟ್ಸನ್ ಅವರ ಕ್ರಿಕೆಟ್ ಮೇಲಿನ ಶ್ರದ್ದೆ ಇಡೀ ಕ್ರಿಕೆಟ್ ಜಗತ್ತಿಗೆ ಸ್ಪೂರ್ತಿಯಾಗಿ ನಿಂತಿದೆ.
ಹೌದು, ನಿನ್ನೆ ನಡೆದ ಮುಂಬೈ ವಿರುದ್ಧದ 12ನೇ ಆವೃತ್ತಿಯ ಫೈನಲ್ನಲ್ಲಿ ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಹೆಬ್ಬಂಡೆಯಂತೆ ನಿಂತು ಏಕಾಂಗಿಯಾಗಿ ಹೋರಾಡಿದ ವಾಟ್ಸನ್ ಮಂಡಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರು ಲೆಕ್ಕಿಸದೆ ತಂಡಕ್ಕಾಗಿ ಆಡಿದ ಅವರ ಶ್ರದ್ದೆಯನ್ನು ಪ್ರತಿಯೊಬ್ಬ ಕ್ರಿಕೆಟ್ ಆಟಗಾರ, ಅಭಿಮಾನಿ ಮೆಚ್ಚಲೇಬೇಕಿದೆ. ಜಂಟಲ್ ಮ್ಯಾನ್ ಗೇಮ್ ಎಂದು ಕರೆಸಿಕೊಳ್ಳುವ ಕ್ರಿಕೆಟ್ನಲ್ಲಿ ವಾಟ್ಸನ್ ನಿಜಕ್ಕೂ ಜಂಟಲ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ.
ಮುಂಬೈ ನೀಡಿ150 ರನ್ಗಳ ಸಾದಾರಣ ಮೊತ್ತ ಬೆನ್ನೆತ್ತಿದ ಸಿಎಸ್ಕೆ ಕೇವಲ 1ರನ್ ಇಂದ ಸೋಲನುಭವಿಸಿತ್ತು. ವಾಟ್ಸನ್ 59 ಎಸೆತಗಳಲ್ಲಿ 80 ರನ್ಗಳಿಸಿ ಕೊನೆಯ ಓವರ್ನಲ್ಲಿ ರನ್ಔಟ್ ಆಗಿದ್ದರು. ಸಿಎಸ್ಕೆ ಕೊನೆಯ ಓವರ್ನಲ್ಲಿ 9 ರನ್ಗಳಿಸಲಾಗದೆ ಕೇವಲ ಒಂದು ರನ್ ಇಂದ ಸೋಲನುಭವಿಸಿ ನಿರಾಸೆಯನುಭವಿಸಿತು.
ಸಿಎಸ್ಕೆಗೆ ಗೆಲುವಿಗಾಗಿ ಹೋರಾಟ ನಡೆಸಿದ ವಾಟ್ಸನ್ ತಮ್ಮ ಮಂಡಿಯಿಂದ ರಕ್ತ ಸುರಿಯುತ್ತಿದ್ದರು ಬ್ಯಾಟಿಂಗ್ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಚೆನ್ನೈ ತಂಡದ ಬೌಲರ್ ಹರಭಜನ್ ಸಿಂಗ್ ರಿವೀಲ್ ಮಾಡುವ ಮೂಲಕ ವಾಟ್ಸನ್ಗಿರುವ ಕ್ರಿಕೆಟ್ ಬಗೆಗಿನ ಶ್ರದ್ದೆಯನ್ನು ಕೊಂಡಾಡಿದ್ದಾರೆ. ವಾಟ್ಸನ್ ಪಂದ್ಯದ ನಂತರ ಗಾಯಕ್ಕೆ 6 ಹೊಲಿಗೆ ಹಾಕಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಭಜ್ಜಿ ತಮ್ಮ ಇನ್ಸ್ಟಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.