ETV Bharat / briefs

ಬಿಜೆಪಿ ಸುಳ್ಳಿಗೆ ಅಯೋಧ್ಯೆಯಿಂದ  ಶ್ರೀರಾಮನೇ ಎದ್ದು ಹೋಗಿದ್ದಾನೆ: ಘೋಟ್ನೇಕರ್

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಬಿಜೆಪಿಯ ಅನಂತಕುಮಾರ್ ಹೆಗಡೆ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಸ್ .ಎಲ್. ಘೋಟ್ನೇಕರ್ ಹರಿಹಾಯ್ದರು. ಬಿಜೆಪಿಯವರ ಸುಳ್ಳು ಭರವಸೆಗಳಿಂದ ಶ್ರೀರಾಮನೇ ಅಯೋಧ್ಯಯಿಂದ ಎದ್ದು ಹೋಗಿರಬೇಕು ಎಂದು ವ್ಯಂಗ್ಯವಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್ .ಎಲ್. ಘೋಟ್ನೇಕರ್
author img

By

Published : Apr 12, 2019, 12:07 PM IST

ಕಾರವಾರ: ಪ್ರತಿ ಬಾರಿಯೂ ರಾಮಮಂದಿರ ಕಟ್ಟುವುದಾಗಿ ಜನರಿಂದ ಇಟ್ಟಿಗೆ, ಹಣ ಪಡೆದಿದ್ದ ಬಿಜೆಪಿಯವರು ಈವರೆಗೂ ಕಟ್ಟಿಲ್ಲ. ಇವರ ಹುಸಿ ಭರವಸೆಗಳಿಂದ ಬೇಸತ್ತು ಅಯೋಧ್ಯೆಯಿಂದಲೇ ಶ್ರೀರಾಮ ಎದ್ದು ಹೋಗಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಎಸ್ .ಎಲ್. ಘೋಟ್ನೇಕರ್ ವ್ಯಂಗ್ಯವಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎಸ್ .ಎಲ್. ಘೋಟ್ನೇಕರ್

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬರಿ ಹಿಂದೂ, ಹಿಂದೂ ಎಂದು ಹೇಳಿಕೊಂಡು ತಿರುಗುವುದರಲ್ಲಿ ಕಾಲ ಕಳೆದಿದ್ದಾರೆಯೇ ವಿನಃ ಯಾವುದೇ ಕೆಲಸ ಮಾಡಿಲ್ಲ. ಮರಾಠರನ್ನು 2ಎಗೆ ಸೇರಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಡಲಾಗುತ್ತಿದೆ. ಆದರೆ ಅನಂತಕುಮಾರ್ ಹೆಗಡೆ ಒಂದು ಬಾರಿಯೂ ಈ ಬಗ್ಗೆ ಧ್ವನಿ ಎತ್ತಿಲ್ಲ. ಕಿತ್ತೂರು, ಖಾನಾಪುರ ಮರಾಠರು ಮತ ಹಾಕದಿದ್ದರೆ ಹೇಗೆ ಸಂಸದರಾಗುತ್ತಿದ್ದರು ಎಂದು ಪ್ರಶ್ನಿಸಿದರು.

ಹಿಂದೂ, ಹಿಂದೂ ಎನ್ನುವ ಅನಂತಕುಮಾರ್ ಮರಾಠರು ಹಿಂದೂಗಳು ಎಂಬುದನ್ನು ಮರೆತಿರಬೇಕು. ಅವರಿಗೆ ಹೊಡಿರಿ, ಬಡಿರಿ ಕಡಿರಿ ಅನ್ನೋದನ್ನು ಬಿಟ್ಟು ಬೇರೆ ಏನು ಗೊತ್ತಿಲ್ಲ. ಇಂತಹ ಮಾತುಗಳಿಂದಲೇ ಆತ ಯುವಕರ ದಾರಿ ತಪ್ಪಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ಅವನಿಗೆ ಕೌಶಲ್ಯಾಭಿವೃದ್ಧಿ ಖಾತೆಯ ಬದಲು ಹೊಡಿ, ಬಡಿ, ಕಡಿ ಖಾತೆಯನ್ನು ಮೋದಿಯವರು ನೀಡಬೇಕಿತ್ತು. ಅನಂತಕುಮಾರ್ ಹೆಗಡೆಯನ್ನು ಬಿಜೆಪಿಯವರು ಲೀಡರ್ ಎನ್ನುತ್ತಾರೆ. ತಾಕತ್ತಿದ್ದರೆ ಆ ಲೀಡರ್ ಮೊದಲು ಕಡಿದು ತೋರಿಸಲಿ ಎಂದು ಏಕವಚನದಲ್ಲೇ ಘೋಟ್ನೇಕರ್​ ಸವಾಲು ಹಾಕಿದರು.

ವಿದೇಶದಿಂದ ಕಪ್ಪು ಹಣ ವಾಪಸ್​ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದರು. ಆದರೆ ಈವರೆಗೆ 15 ರೂಪಾಯಿ ಕೂಡ ವಿದೇಶದಿಂದ ಕಪ್ಪು ಹಣ ಬಂದಿಲ್ಲ. ಇನ್ನು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತ ಮಾಡುತ್ತೇವೆ ಎಂದು ಹೇಳಿದ್ದರು. ಯಾರಿಗೂ ಉದ್ಯೋಗ ನೀಡಲಾಗಲಿಲ್ಲ. ಈ ಬಗ್ಗೆ ಯುವಕರು ಅರ್ಥ ಮಾಡ್ಕೋಬೇಕು‌. ಕಪ್ಪು ಹಣ ಇರುವುದು ಅಂಬಾನಿ, ಅದಾನಿಯ ಹತ್ತಿರ ಬಡವರ ಹತ್ತಿರ ಅಲ್ಲ. ಅಚ್ಛೇ ದಿನ್ ಆಯೇಗಾ ಅಂದ್ರು. ಯಾವಾಗ ಬರತ್ತೆ ಅಚ್ಛೆ ದಿನ್​ ಎಂದು ಪ್ರಶ್ನಿಸಿದರು.

Intro:ಕಾರವಾರ: ಪ್ರತಿಬಾರಿಯೂ ರಾಮಮಂದಿರ ಕಟ್ಟುತ್ತೇವೆಂದು ಜನರಿಂದ ಇಟ್ಟಂಗಿ, ಹಣ ಪಡೆದಿದ್ದ ಬಿಜೆಪಿಯವರು ಈವರೆಗೂ ಕಟ್ಟಿಲ್ಲ. ಆದರೆ ಇವರ ಸುಳ್ಳಿನಿಂದ ಕೆಲಸವಾಗದ ಕಾರಣ ಅಯೋಧ್ಯಯಿಂದಲೇ ರಾಮ ಎದ್ದು ಹೋಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ್ ವ್ಯಂಗ್ಯವಾಡಿದರು.
ಹಳಿಯಾಳದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ ಅವರು,ಅನಂತಕುಮಾರ್ ಹೆಗಡೆ ಬರಿ ಹಿಂದೂ ಹಿಂದೂ ಎಂದು ಹೇಳಿಕೊಂಡು ತಿರುಗುವುದರಲ್ಲಿ ಕಾಲ ಕಳೆದಿದ್ದಾರೆ ವಿನಾಃ ಯಾವುದೇ ಕೆಲಸ ಮಾಡಿಲ್ಲ. ಮರಾಠರನ್ನು ೨ಎ ಗೆ ಸೇರಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಡಲಾಗುತ್ತಿದೆ. ಆದರೆ ಅನಂತಕುಮಾರ್ ಹೆಗಡೆ ಒಂದು ಬಾರಿಯೂ ಈ ಬಗ್ಗೆ ಧ್ವನಿ ಎತ್ತಿಲ್ಲ. ಕಿತ್ತೂರು, ಖಾನಾಪುರ ಮರಾಠರು ಮತಹಾಕದಿದ್ದರೇ ಹೇಗೆ ಸಂಸದರಾಗುತ್ತಿದ್ದರು ಎಂದು ಪ್ರಶ್ನಿಸಿದರು.
ಹಿಂದೂ ಹಿಂದೂ ಎನ್ನುವ ಅನಂತಕುಮಾರ್ ಮರಾಠರು ಹಿಂದುಗಳು ಎಂಬುದನ್ನು ಮರೆತಿರಬೇಕು. ಅವನಿಗೆ ಹೊಡಿರಿ, ಬಡಿರಿ ಕಡಿರಿ ಅನ್ನೋದನ್ನು ಬಿಟ್ಟು ಬೇರೆ ಏನು ಗೊತ್ತಿಲ್ಲ. ಇಂತಹ ಮಾತುಗಳಿಂದಲೇ ಆತ ಯುವಕರ ದಾರಿ ತಪ್ಪಿಸುವುದರಲ್ಲಿ ನಿಸ್ಸೀಮನಾಗಿದ್ದಾನೆ. ಅವನಿಗೆ ಕೌಶಲ್ಯಾಭಿವೃದ್ಧಿ ಖಾತೆಯ ಬದಲು ಹೊಡಿಬಡಿಕಡಿ ಖಾತೆಯನ್ನು ಮೋದಿಯವರು ನೀಡಬೇಕಿತ್ತು. ಅನಂತಕುಮಾರ್ ಹೆಗಡೆಯನ್ನು ಬಿಜೆಪಿಯವರು ಲೀಡರ್ ಎನ್ನುತ್ತಾರೆ. ಹಾಗಿದ್ದರೆ ತಾಕತ್ತಿದ್ದರೆ ಆ ಲೀಡರ್ ಮೊದಲು ಕಡಿದು ತೋರಿಸಲಿ ಎಂದು ಸವಾಲು ಹಾಕಿದರು.
ವಿದೇಶದಿಂದ ಕಪ್ಪು ಹಣ ವಾಪಸ್ಸ್ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ಹಾಕುವುದಾಗಿ ಹೇಳಿದ್ದರು. ಆದರೆ ಈವರೆಗೆ ೧೫ ರೂಪಾಯಿ ಕೂಡ ವ
ವಿದೇಶದಿಂದ ಕಪ್ಪುಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ಆದರೆ ಅದು‌ 15 ರೂಪಾಯಿಯೂ ಬಂದಿಲ್ಲ. ಇನ್ನು ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದರು. ಯಾರಿಗೂ ಉದ್ಯೋಗ ನೀಡಲಾಗಲಿಲ್ಲ. ಈ ಬಗ್ಗೆ ಯುವಕರು ಅರ್ಥ ಮಾಡ್ಕೋಬೇಕು‌. ಕಪ್ಪು ಹಣ ಇರುವುದು ಅಂಬಾನಿ, ಅದಾನಿಯ ಹತ್ತಿರ. ಬಡವರ ಹತ್ತಿರ ಅಲ್ಲ‌. ಅಚ್ಛೇ ದಿನ್ ಆಯೇಗಾ ಅಂದ್ರು. ಯಾವಾಗ ಬರತ್ತೆ ಅಚ್ಛೆ ದಿನ್? ಎಂದು ಪ್ರಶ್ನಿಸಿದರು.Body:ಕೆConclusion:ಕ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.