ಹುಬ್ಬಳ್ಳಿ : ಬೆಳಗಾವಿಯ ಗೋಲ್ಡ್ ಸ್ಮಗ್ಲಿಂಗ್ ಕೇಸ್ ತನಿಖೆ ತೀವ್ರಗೊಂಡಿದೆ. ಈ ಕೇಸ್ಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿಂದು ಸಿಐಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಚಿನ್ನಕಳುವಿನ ಕಿಂಗ್ಪಿನ್ ಕಿರಣ್ ವೀರನಗೌಡರ ಹುಬ್ಬಳ್ಳಿಯ ಮನೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಶಿವಗಂಗಾ ಲೇಔಟ್ನಲ್ಲಿರುವ ಕಿರಣ್ ಹಾಗೂ ಆತನ ತಂದೆ ವೀರನಗೌಡ ಅವರನ್ನು ವಿಚಾರಣೆ ನಡೆಸಿದರು.

ಕದ್ದಿರುವ ಚಿನ್ನ ಮನೆಯಲ್ಲೇ ಇಟ್ಟಿರುವ ಸಂಶಯದ ಮೇಲೆ ಮನೆಯನ್ನ ಶೋಧ ನಡೆಸಿದರು. ಸತತ ಒಂದೂವರೆ ಗಂಟೆಗಳ ಕಾಲ ಸಿಐಡಿ ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.