ಪ್ಯಾರಿಸ್: 21 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ವಿಡ್ಜರ್ಲೆಂಡ್‌ನ ರೋಜರ್ ಫೆಡರರ್ 3ನೇ ಸುತ್ತಿನ ಪಂದ್ಯದಲ್ಲಿ ಕ್ಯಾಸ್ಪರ್ ರುಡ್ ವಿರುದ್ಧ ಗೆಲ್ಲುವ ಮೂಲಕ ತಮ್ಮ 20 ವರ್ಷಗಳ ಟೆನ್ನಿಸ್ ವೃತ್ತಿಜೀವನದಲ್ಲಿ ಅಪ್ಪ-ಮಗ ಇಬ್ಬರ ವಿರುದ್ಧವೂ ಸೆಣಸಿದ ಖ್ಯಾತಿಗೆ ಪಾತ್ರರಾದರು.
1999 ರಲ್ಲಿ ಫ್ರೆಂಚ್ ಓಪನ್ ಪದಾರ್ಪಣೆ ಮಾಡಿದ್ದ 17 ವರ್ಷದ ಫೆಡರರ್ ತಮ್ಮ ಮೊದಲನೇ ಸುತ್ತಿನಲ್ಲೇ ಪ್ಯಾಟ್ ರಾಫ್ಟರ್ ವಿರುದ್ಧ ಸೆಣಸಾಡಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ಅದೇ ಟೂರ್ನಿಯಲ್ಲಿ ಕ್ರಿಶ್ಚಿಯನ್ ಎಂಬಾತ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದರು. ಇದೀಗ 20 ವರ್ಷಗಳ ನಂತರ ಅವರ ಮಗ ಕ್ಯಾಸ್ಪರ್ ರುಡ್ ವಿರುದ್ಧ ಪ್ರೆಂಚ್ ಓಪನ್ನ ಮೂರನೇ ಸುತ್ತಿನಲ್ಲಿ ಸೆಣಸಾಡಿ 6-3,6-1,7-6(8) ಜಯ ಸಾಧಿಸಿದ್ದಾರೆ. ಈ ಜಯ ಫೆಡರರ್ ಅವರ 400ನೇ ಗ್ರ್ಯಾಂಡ್ಸ್ಲಾಮ್ ಜಯವಾಗಿತ್ತು.
2001ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕ್ರಿಸ್ಟಿಯನ್ ತಮ್ಮ ಕೊನೆಯ ಗ್ರ್ಯಾಂಡ್ಸ್ಲ್ಯಾಮ್ ಆಡಿದ್ದರು. ಆದರೆ, ಮೊದಲನೇ ಸುತ್ತಿನಲ್ಲೇ ಸರ್ಜೀಸ್ ಸರ್ಜೀಸಿಯನ್ ವಿರುದ್ಧ ಸೋಲು ಅನುಭವಿಸಿ ತಮ್ಮ ವೃತ್ತಿ ಜೀವನಕ್ಕೆ ತೆರೆ ಎಳದಿದ್ದರು. ಒಂದು ವೇಳೆ ಮೊದಲನೇ ಸುತ್ತಿನಲ್ಲಿ ಜಯಿಸಿದ್ದರೆ, ಎರಡನೇ ಸುತ್ತಿನಲ್ಲಿ ರೋಜರ್ ಫೆಡರರ್ ಅವರನ್ನು ಎದುರಿಸುತ್ತಿದ್ದರು.
ಈ ಕುರಿತು ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಫೆಡರರ್ ಕ್ಯಾಸ್ಪರ್ವುಡ್ಗಿಂತ ಅವರ ತಂದೆಯ ಆಟವನ್ನು ನೋಡಿದ್ದೆ, ಆದರೆ, ಅವರ ವಿರುದ್ಧ ಎಂದೂ ಆಡಲು ಸಾಧ್ಯವಾಗಲಿಲ್ಲ, ಇದೀಗ 20 ವರ್ಷಗಳ ನಂತರ ಅವರ ಮಗನ ಜೊತೆ ಆಡುತ್ತಿದ್ದೇನೆ. ಟೆನ್ನಿಸ್ ವೃತ್ತಿಗೆ ಬಂದು 20 ವರ್ಷ ಕಳೆದಿದೆ ಎಂಬುದು ಈಗ ತಿಳಿಯುತ್ತಿದೆ ಎಂದಿದ್ದರು.