ETV Bharat / briefs

'ಡಿ ಬಾಸ್‌'​ ಜತೆ ಚಿತ್ರರಂಗಕ್ಕೆ ಕಾಲಿಟ್ಟ ಈ ಚೆಲುವೆ ಈಗ ಸಂಸದೆ! - ಲೋಕಸಭೆ

ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಜತೆ ನಟನೆ ಮಾಡುವ ಮೂಲಕ ಸಿನಿ ರಂಗಕ್ಕೆ ಪ್ರವೇಶ ಪಡೆದುಕೊಂಡಿದ್ದ ನಟಿ ಇದೀಗ ಸಂಸದೆಯಾಗಿ ಪ್ರಜಾಪ್ರಭುತ್ವ ದೇಗುಲದ ಮೆಟ್ಟಿಲು ಏರಿದ್ದಾರೆ.

ನವನೀತ್ ಕೌರ್​ ರಾಣಾ
author img

By

Published : May 28, 2019, 1:03 PM IST

ಮುಂಬೈ: 2004ರಲ್ಲಿ ಚಾಲೆಂಜಿಂಗ್ ಸ್ಟಾರ್‌ ದರ್ಶನ್​ ಜತೆ ಸಿನಿಮಾವೊಂದರಲ್ಲಿ ನಟನೆ ಮಾಡುವ ಮೂಲಕ ಸಿನಿರಂಗಕ್ಕೆ ಡೆಬ್ಯು ಮಾಡಿದ್ದ ನಟಿಯೊಬ್ಬರು ಇದೀಗ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸಂಸತ್‌ ಮೆಟ್ಟಿಲೇರಿದ್ದಾರೆ.

2004ರಲ್ಲಿ ನಟ ದರ್ಶನ್​ ನಟನೆಯ 'ದರ್ಶನ್'​ ಚಿತ್ರದಲ್ಲಿ ನವನೀತ್ ಕೌರ್​ ರಾಣಾ ನಟನೆ ಮಾಡಿದ್ದರು. ಇದು ಅವರ ಮೊದಲ ಚಿತ್ರವಾಗಿತ್ತು. ಅದಾದ ಬಳಿಕ ಸುಮಾರು 25ಕ್ಕೂ ಹೆಚ್ಚು ತೆಲಗು, ಹಿಂದಿ, ಮಲಯಾಳಂ ಚಿತ್ರಗಳಲ್ಲಿ ನಟನೆ ಮಾಡಿದ್ದ ನವನೀತ್​, ಈ ಸಲದ ಲೋಕಸಭೆಯಲ್ಲಿ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಶಿವಸೇನೆಯಿಂದ ಕಣಕ್ಕಿಳಿದಿದ್ದ ಆನಂದ್​ರಾವ್​ ಅವರನ್ನು 36,000 ಮತ​ಗಳ ಅಂತರದಿಂದ ಸೋಲಿಸಿದ ನವನೀತ್‌ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. 2014 ರಲ್ಲಿ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನವನೀತ್​ 1.37 ಲಕ್ಷ ಮತಗಳ ಅಂತರದ ಸೋಲು ಕಂಡಿದ್ದರು.

ನವನೀತ್​ ರಾಣಾ 2011ರಲ್ಲಿ ಶಾಸಕ ರವಿ ರಾಣಾ ಜತೆ ವಿವಾಹವಾಗಿದ್ದು, ಅವರು ಸ್ಥಾಪನೆ ಮಾಡಿದ್ದ ಪಕ್ಷದಿಂದಲೇ 2014ರಲ್ಲಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು.

Intro:Body:

ಮುಂಬೈ: 2004ರಲ್ಲಿ ಸ್ಯಾಂಡಲ್​ವುಡ್​ ಸ್ಟಾರ್​ ದರ್ಶನ್​ ಜತೆ ಸಿನಿಮಾವೊಂದರಲ್ಲಿ ನಟನೆ ಮಾಡುವ ಮೂಲಕ ಸಿನಿರಂಗಕ್ಕೆ ಡೆಬ್ಯು ಮಾಡಿದ್ದ ನಟಿವೋರ್ವಳು ಇದೀಗ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲು ಮಾಡುವುದರ ಮೂಲಕ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. 

2004ರಲ್ಲಿ ನಟ ದರ್ಶನ್​ ನಟನೆಯ ದರ್ಶನ್​ ಚಿತ್ರದಲ್ಲಿ ನವನೀತ್ ಕೌರ್​ ರಾಣಾ ನಟನೆ ಮಾಡಿದ್ದರು. ಇದು ಅವರ ಮೊದಲ ಚಿತ್ರವಾಗಿತ್ತು. ಅದಾದ ಬಳಿಕ ಸುಮಾರು 25ಕ್ಕೂ ಹೆಚ್ಚು ತೆಲಗು, ಹಿಂದಿ, ಮಲಿಯಾಳಂ ಚಿತ್ರಗಳಲ್ಲಿ ನಟನೆ ಮಾಡಿದ್ದ ನವನೀತ್​, ಈ ಸಲದ ಲೋಕಸಭೆಯಲ್ಲಿ ಅಮರಾವತಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 

ಇವರ ವಿರುದ್ಧ ಶಿವಸೇನೆಯ ಆನಂದ್​ರಾವ್​ ಸ್ಪರ್ಧೆ ಮಾಡಿದ್ದರು. ಅವರನ್ನ 36000ವೋಟ್​ಗಳ ಅಂತರದಿಂದ ಸೋಲಿಸುವ ಮೂಲಕ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. 2014ರಲ್ಲಿ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದ ನವನೀತ್​ 1.37 ಲಕ್ಷ ಮತಗಳ ಅಂತರದ ಸೋಲು ಕಂಡಿದ್ದರು. ಆದರೆ ಈ ಸಲ ಗೆಲುವು ದಾಖಲು ಮಾಡಿದ್ದಾರೆ. 

ನವನೀತ್​ ರಾಣಾ 2011ರಲ್ಲಿ ಶಾಸಕ ರವಿ ರಾಣಾ ಜತೆ ವಿವಾಹವಾಗಿದ್ದು, ಅವರು ಸ್ಥಾಪನೆ ಮಾಡಿದ್ದ ಪಕ್ಷದಿಂದಲೇ 2014ರಲ್ಲಿ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಈ ಸಲ ಗೆಲುವು ದಾಖಲು ಮಾಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.