ತೆಲಂಗಾಣ: ಭೂ ಕಬಳಿಕೆ ಆರೊಪದ ಮೇಲೆ ತೆಲಂಗಾಣ ಆರೋಗ್ಯ ಸಚಿವ ಈಟಲ ರಾಜೇಂದರ್ ಸಂಪುಟದಿಂದ ವಜಾಗೊಂಡಿದ್ದಾರೆ. ಇಡೀ ರಾಜ್ಯ ತನ್ನನ್ನು ದ್ವೇಷಿಸಬೇಕೆಂದು ನನ್ನ ಬಗ್ಗೆ ಅಪಪ್ರಚಾರ ಮಾಡಲಾಗಿದೆ ಎಂದು ಮಾಜಿ ಸಚಿವ ಈಟಲ ಕಳವಳ ವ್ಯಕ್ತಪಡಿಸಿದ್ದಾರೆ.
ಸಾವಿರಾರು ಎಕರೆ ಭೂಮಿಯನ್ನು ಆಕ್ರಮಿಸಿಕೊಂಡಿರುವ ಹಗರಣಗಳು ವರದಿಯಾಗಿವೆ. ಅವರು ಸುಮಾರು 19 ವರ್ಷಗಳ ಕಾಲ ಸಿಎಂ ಕೆಸಿಆರ್ ಜೊತೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ತೆಲಂಗಾಣ ಚಳವಳಿಯ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಹೋರಾಡಲು ಅವರು ನನಗೆ ಅವಕಾಶ ನೀಡಿದ್ದರು. ನಾನು ಯಾವತ್ತೂ ಪಕ್ಷವನ್ನು ಕೆಣಕಲು ಏನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಸಿಆರ್ ನನಗೆ ನಾಯಕನಾಗಲು, ಸಚಿವನಾಗಲು ಅವಕಾಶ ನೀಡಿದ್ದಾರೆ. ಪಕ್ಷ, ಸರ್ಕಾರ, ಕೆಸಿಆರ್‌ಗೆ ಕಳಂಕ ತರುವಂತಹ ಯಾವುದೇ ಪ್ರಯತ್ನ ನಡೆದಿಲ್ಲ. ಕೆಸಿಆರ್ ಚಳವಳಿಯ ನಾಯಕನಾಗಿ ಅವರು ಎಂದಿಗೂ ಅನ್ಯಾಯದತ್ತ ಸಾಗಲಿಲ್ಲ. ಯಾವುದೇ ದಬ್ಬಾಳಿಕೆಗೂ ಅವರು ಎಂದಿಗೂ ಹೆದರುವುದಿಲ್ಲ. ಕೆಸಿಆರ್ ತೆಲಂಗಾಣದ ಜನರು ಮತ್ತು ಸದಾಚಾರವನ್ನು ನಂಬಿದವರು. ಅವರು ಎಂದಿಗೂ ಹಣವನ್ನು ನಂಬಲಿಲ್ಲ. ಅಂತಹ ಕೆಸಿಆರ್, ತನ್ನ ಎಲ್ಲ ಶಕ್ತಿಯನ್ನು ನನ್ನಂತಹ ಸಾಮಾನ್ಯ ವ್ಯಕ್ತಿಯ ಮೇಲೆ ಯಾಕೆ ಬಳಸುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದರು.
ಇಂತಹ ಸುಳ್ಳು ಪ್ರಚಾರ ಸೂಕ್ತವಲ್ಲ. ಅವರು ಹೇಳಿದಂತೆ ಜಮೀನುಗಳನ್ನು ಖರೀದಿಸಿದ್ದರೆ ನಾನು ಶಿಕ್ಷೆಗೆ ಅರ್ಹನಾಗಿದ್ದೇನೆ. ರಾಜ್ಯವು ನಿಮ್ಮ ಕೈಯಲ್ಲಿರಬಹುದು, ನೀವು ಹೇಳಿದಂತೆ ಅಧಿಕಾರಿಗಳು ಮಾಡಬಹುದು. ಆದ್ರೆ ನನ್ನ ಒಪ್ಪಿಗೆಯೊಂದಿಗೆ ನೀವು ಸಮೀಕ್ಷೆ ನಡೆಸುವುದು ನ್ಯಾಯಯುತ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತೆಲಂಗಾಣ ಆರೋಗ್ಯ ಸಚಿವರ ವಿರುದ್ಧ ಭೂ ಕಬಳಿಕೆ ಆರೋಪ : ವರದಿ ನೀಡಲು ಸಿಎಂ ಸೂಚನೆ