ನಾಟಿಂಗ್ಹ್ಯಾಮ್: 2019ರ ಪ್ರಾಥಮಿಕ ತಂಡ ಪ್ರಕಟಿಸಿದ್ದ ಪಾಕಿಸ್ತಾನ ಆಯ್ಕೆ ಸಮಿತಿ ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್ ಹಾಗೂ ಆಸಿಫ್ ಅಲಿಯನ್ನು ತಂಡದಿಂದ ಕೈಬಿಟ್ಟು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.
ವಿಶ್ವಕಪ್ಗೂ ಮುನ್ನ ನಡೆದ ಸರಣಿಯಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 4-0ಯಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ಈ ಸರಣಿ ಸೋಲಿನ ನಂತರ ಎಚ್ಚೆತ್ತಕೊಂಡ ಪಿಸಿಬಿ ಆಯ್ಕೆ ಸಮಿತಿ ಹಿರಿಯ ಬೌಲರ್ಗಳಾದ ಅಮಿರ್ ರಿಯಾಜ್ ಹಾಗೂ ಆಸಿಪ್ ಅಲಿಯನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿ, ಅಬಿದ್ ಅಲಿ, ಜುನೈದ್ ಖಾನ್ ಹಾಗೂ ಫಹೀಮ್ ಅರಾಫತ್ರನ್ನು ಕೈಬಿಟ್ಟಿತ್ತು.
ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡ ವಹಾಬ್ ರಿಯಾಜ್ ಹಾಗೂ ಅಮಿರ್ ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆದು ತಂಡಕ್ಕೆ ಮೊದಲ ಗೆಲುವು ತಂದುಕೊಟ್ಟರು.
76 ಎಸೆತಗಳಲ್ಲಿ 103 ರನ್ ಸಿಡಿಸಿ ಇಂಗ್ಲೆಂಡ್ ತಂಡವನ್ನು ಗೆಲವಿನತ್ತ ಕೊಡೊಯ್ಯುತ್ತಿದ್ದ ಜಾಸ್ ಬಟ್ಲರ್ ವಿಕೆಟ್ ಪಡೆದ ಅಮಿರ್ ಪಾಕ್ ಪಾಳೆಯದಲ್ಲಿ ನಗು ತರಿಸಿದರೆ, 48 ಓವರ್ನಲ್ಲಿ ಕ್ರಿಸ್ ವೋಕ್ಸ್ ಹಾಗೂ ಮೊಯಿನ್ ಅಲಿ ವಿಕೆಟ್ ಪಡೆಯುವ ಮೂಲಕ ರಿಯಾಜ್ ಪಾಕಿಸ್ತಾನಕ್ಕೆ 14 ರನ್ಗಳ ರೋಚಕ ಜಯ ತಂದು ಕೊಟ್ಟರು.