ETV Bharat / briefs

ಹೆಚ್ಚುತ್ತಿವೆ ಆನ್​ಲೈನ್​ ವಂಚನೆಗಳು... ಸೈಬರ್ ಕ್ರೈಂ ತಡೆಗೆ ಇಲ್ಲಿವೆ ಪಂಚಸೂತ್ರಗಳು - ಸೈಬರ್​ ಕ್ರೈಮ್​ ಲೇಟೆಸ್ಟ್​ ನ್ಯೂಸ್​

ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಕೆಲವು ಸಲಹೆಗಳನ್ನು ತಜ್ಞರು ತಿಳಿಸಿದ್ದಾರೆ.

Cyber crime
Cyber crime
author img

By

Published : Jun 14, 2020, 6:14 PM IST

ಬೆಂಗಳೂರು: ಮೆಟ್ರೋ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಿಸಿಕೊಂಡಿರುವ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಾಡ್ಗಿಚ್ಚಿನಂತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇದೆ.

ಮಹಾನಗರ ಸೇರಿದಂತೆ ಎರಡನೇ ಹಂತದ ನಗರ ಪ್ರದೇಶಗಳ ಮುಗ್ಧ ಜನರನ್ನು ಆನ್​ಲೈನ್ ವಂಚಕರು ವಂಚಿಸುತ್ತಲೇ ಬಂದಿದ್ದಾರೆ. ಕಳೆದ ವರ್ಷ 2019 ರಲ್ಲಿ 12,014 ಪ್ರಕರಣಗಳು ದಾಖಲಾಗಿದ್ದು, ನಗರದಲ್ಲಿ 10,555 ಕೇಸ್ ದಾಖಲಾಗಿವೆ.‌ 193 ಪ್ರಕರಗಳು ಮಾತ್ರ ಇತ್ಯರ್ಥವಾಗಿವೆ.

ಮಿತಿ ಮೀರುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನೆ ಕೇಳಿದರೆ, ಇದಕ್ಕೆ ಸೈಬರ್ ತಜ್ಞರಿಂದ ಬರುವ ಉತ್ತರ ಪೂರ್ಣಪ್ರಮಾಣದಲ್ಲಿ ತಡೆಗಟ್ಟಲು ಸಾಧ್ಯವಾಗದೆ ಹೋದರೂ ಪ್ರಕರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಬಹುದಾಗಿದೆ. ಇದರ ತಡೆಗೆ ಈ ಕೆಳಗಿನ ಅಂಶಗಳನ್ನು ತಿಳಿಸಿದೆ.

1) ಸೈಬರ್ ಕ್ರೈಂ ಮಾಹಿತಿ ಕೊರತೆ

ಅದೆಷ್ಟೋ ಜನರಿಗೆ ಸೈಬರ್ ಕ್ರೈಂ ಅಂದರೆ ಏನು ಎಂಬುದೇ ತಿಳಿದಿಲ್ಲ. ಗ್ರಾಮೀಣ ಪ್ರದೇಶಗಳಂತೂ ಹೇಳುವ ಹಾಗೇ ಇಲ್ಲ‌. ಹೀಗಾಗಿ ಸರ್ಕಾರವಾಗಲಿ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಬೀದಿ ನಾಟಕ, ಮೆರವಣಿಗೆ, ಕಿರುಚಿತ್ರ ಹೀಗೆ ಎಲ್ಲಾ ಮಾದರಿಯಲ್ಲಿಯೂ ಜಾಗೃತಿ‌ ಮೂಡಿಸಿದಾಗ ಮಾತ್ರ ಸೈಬರ್ ಕ್ರೈಂ ಬಗ್ಗೆ ಜನರಲ್ಲಿ ಅರಿವು ಉಂಟಾಗಿ ದೂರು ನೀಡಲು‌ ಮುಂದಾಗುತ್ತಾರೆ.

2) ರಾಜ್ಯ ಮಟ್ಟದಲ್ಲಿ ಸೈಬರ್ ಮಾನಿಟಿರಿಂಗ್ ಸಿಸ್ಟಂ

ಆಯಾ ರಾಜ್ಯಗಳಲ್ಲಿ ಸೈಬರ್ ಅಪರಾಧ ಜರುಗಿದರೆ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತವೆ. ತರಹೇವಾರಿ ರೀತಿಯಲ್ಲಿ ನಡೆಯುವ ಅಪರಾಧಗಳ ಬಗ್ಗೆ ಡೇಟಾ ವಿಶ್ಲೇಷಣೆ ಮಾಡಲು ರಾಜ್ಯಮಟ್ಟದಲ್ಲಿ ಸೈಬರ್ ನಿಯಂತ್ರಣ ವ್ಯವಸ್ಥೆ ಅತ್ಯಗತ್ಯವಾಗಿದೆ. ಸೈಬರ್ ಸುರಕ್ಷತೆ ಸಲುವಾಗಿ ಡೇಟಾ ಸರ್ವರ್ ಗಳು, ನೆಟ್ ವರ್ಕ್, ಬಳಕೆದಾರರ ವೈಯಕ್ತಿಕ ಮಾಹಿತಿ ಸೇರಿದಂತೆ ಹಲವು ರೀತಿಯ ಮಾಹಿತಿ‌ ಒಳಗೊಂಡಾಗ ಆನ್​ಲೈನ್ ಖದೀಮರು ಎಲ್ಲೇ ವಂಚನೆ ಮಾಡಿದರೂ ಸುಲಭವಾಗಿ ಪತ್ತೆ ಹಚ್ಚಬಹುದು.

3) ಪೊಲೀಸ್, ವಕೀಲರಿಗೆ ಸೈಬರ್ ಕಾನೂನಿನ ಅರಿವಿಲ್ಲ

ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆ ನಗರ ಪ್ರದೇಶಗಳಲ್ಲಿ ಸೈಬರ್ ಅಪರಾಧ ಹೆಚ್ಚಾಗುತ್ತಿವೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುವಾಗ ನ್ಯಾಯಾಲಯದಲ್ಲಿ ಪ್ರಕರಣಗಳ ಪರಿಶೀಲನೆ ವೇಳೆ ಡಿಜಿಟಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದಾಗಿರುತ್ತದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಜಾರಿಯಾಗಿ 20 ವರ್ಷ ಕಳೆದರೂ ಪೊಲೀಸರಿಗೆ ಹಾಗೂ ವಕೀಲರಿಗೆ ಕಾನೂನು ಬಗ್ಗೆ ಅರಿವೇ ಇಲ್ಲ. ಈ ನಿಟ್ಟಿನಲ್ಲಿ ಸೈಬರ್ ಕಾನೂನಿನ ಬಗ್ಗೆ ತರಬೇತಿ ನೀಡಿ ಆರೋಪಿಗಳಿಗೆ ತ್ವರಿತಗತಿಯಲ್ಲಿ ಶಿಕ್ಷೆಯಾಗಲು ಕಾರಣರಾಗಬೇಕಿದೆ.

4) ಪೊಲೀಸರಲ್ಲಿ ತಾಂತ್ರಿಕತೆ ನೈಪುಣ್ಯತೆಯ ಕೊರತೆ

ಪ್ರಕರಣ ಬೇಧಿಸುವುದರಲ್ಲಿ ಸೈಬರ್ ಕೃತ್ಯ ಹೇಗೆ ನಡೆಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪೊಲೀಸರು ಇನ್ನೂ ಹೆಣಗಾಡುತ್ತಿದ್ದಾರೆ. ಇದರಲ್ಲಿ ಪೊಲೀಸರದ್ದು ತಪ್ಪಿಲ್ಲ. ಸರ್ಕಾರವು ಇದರ ಜವಾಬ್ದಾರಿ ಹೊರಬೇಕಿದೆ. ಸೈಬರ್ ಅಪರಾಧ ಹೆಚ್ಚಳವಾಗುತ್ತಿದ್ದರೂ ಪೊಲೀಸರಿಗೆ ತಾಂತ್ರಿಕ ಸೌಲಭ್ಯ ನೀಡದಿರುವುದು, ಸಿಬ್ಬಂದಿ ಕೊರತೆ, ಆಧುನಿಕ ಉಪಕರಣ ಸೌಲಭ್ಯ ಕಲ್ಪಿಸದ ಪರಿಣಾಮ ಆರೋಪಿಗಳ ಬಂಧನಕ್ಕೆ‌ ಈ ಅಂಶಗಳು ಅಡ್ಡಿಯಾಗುತ್ತಿವೆ.

5) ಸೈಬರ್ ಸೆಕ್ಯೂರಿಟಿ ಸಮಿತಿ ರಚನೆ

ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಸೈಬರ್ ಸೆಕ್ಯೂರಿಟಿ ಸಮಿತಿ ಇಲ್ಲದಿರುವುದು ತ್ವರಿತವಾಗಿ ಪ್ರಕರಣ ಇರ್ತಥ್ಯ ಆಗದೆ ಇರುವುದಕ್ಕೆ ಪ್ರಮುಖ ಕಾರಣವಾಗಿದೆ. ಪೊಲೀಸರು, ವಕೀಲರು ಹಾಗೂ ಸೈಬರ್ ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯ ಒಳಗೊಂಡ ಸಮಿತಿ ರಚಿಸಿ ಕನಿಷ್ಠ ತಿಂಗಳಿಗೊಮ್ಮೆ ಸಭೆ ಸೇರಿ ದಾಖಲಾದ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಿ ಸಮನ್ವಯತೆ ಸಾಧಿಸಿದಾಗ ಸೈಬರ್ ಕ್ರೈಂ ತಡೆಯುವುದಕ್ಕೆ ಸಾಧ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.