ಮೈಸೂರು: ಪಡಿತರ ಅಕ್ಕಿಗಾಗಿ ಥಂಬ್ ಇಂಪ್ರೆಷನ್ ಕೊಡಲು ತೆರಳುತ್ತಿರುವಾಗ ಸಂಭವಿಸಿದ ಅಪಘಾತವೊಂದರಲ್ಲಿ ತಂದೆ-ಮಗನ ಪ್ರಾಣ ಪಕ್ಷಿ ಹಾರಿ ಹೋಗಿರುವ ಘಟನೆ ಮೈಸೂರಿನ ಕೋಟೆಹುಂಡಿ ಸರ್ಕಲ್ನಲ್ಲಿ ನಡೆದಿದೆ.
ಹೌದು, ಕಟ್ಟೆಹುಣಸೂರು ನಿವಾಸಿ ಪ್ರಕಾಶ್ ಕುಟುಂಬ ಇತ್ತೀಚೆಗೆ ಜಿ.ಪಿ ನಗರಕ್ಕೆ ಶಿಪ್ಟ್ ಆಗಿದ್ದರು. ಬೆಳಗ್ಗೆ ರೇಷನ್ ಅಕ್ಕಿಗಾಗಿ ಥಂಬ್ ಇಂಪ್ರೆಷನ್ ಕೊಡಲು ಜಿ.ಪಿ ನಗರದಲ್ಲಿ ವಾಸವಿದ್ದ ಪ್ರಕಾಶ್ (50) ತಮ್ಮ ಮಗ ಸುರೇಶ್ (23) ಜೊತೆ ಕಟ್ಟೆಹುಣಸೂರಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಸರ್ಕಾರಿ ಬಸ್ ಮತ್ತು ಪ್ರಕಾಶ್ ತೆರಳುತ್ತಿದ್ದ ಸ್ಕೂಟರ್ ಮಧ್ಯೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಇನ್ನು ಅಪಘಾತದಲ್ಲಿ ಪ್ರಕಾಶ್ ಮತ್ತು ಆತನ ಮಗ ಸುರೇಶ್ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂದೆ-ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಘಟನಾಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಕಳಹಿಸಿದ್ದಾರೆ.
ಈ ಘಟನೆ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.