ETV Bharat / briefs

ಮೂವರು ಹೆಣ್ಣುಮಕ್ಕಳ ಮೇಲೆ ನಿರಂತರ ಅತ್ಯಾಚಾರ! ಪಾಪಿ ತಂದೆ ಅರೆಸ್ಟ್​​​ - ಮೂವರು ಹೆಣ್ಣುಮಕ್ಕಳು

ಕಳೆದ ಮೂರು ವರ್ಷಗಳಿಂದ ಕಾಮುಕ ತಂದೆಯೋರ್ವ ತನ್ನ ಮೂವರು ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರಗೈದಿದ್ದು, ಇದೀಗ ಪೊಲೀಸ್​ ಕಂಬಿ ಹಿಂದೆ ಸೇರಿದ್ದಾನೆ.

ಸಾಂದರ್ಭಿಕ ಚಿತ್ರ
author img

By

Published : May 30, 2019, 11:16 AM IST

ಇಂದೋರ್​: ಕಾಮುಕ ತಂದೆಯೋರ್ವ ತನ್ನ ಮೂವರು ಹೆಣ್ಣುಮಕ್ಕಳ ಮೇಲೆ ಕಳೆದ ಮೂರು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಎಸಗಿದ ಹೀನ ಕೃತ್ಯ ಮಧ್ಯಪ್ರದೇಶದ ಇಂದೋರ್​​ನಲ್ಲಿ ಬೆಳಕಿಗೆ ಬಂದಿದೆ.

ಪಾಪಿ ತಂದೆ ವಿರುದ್ಧ ದೂರು

ಚಾಕುವಿನಿಂದ ಬೆದರಿಸಿ 8 ವರ್ಷ,16 ಹಾಗೂ 18 ವರ್ಷದ ಹೆಣ್ಣು ಮಕ್ಕಳ ಮೇಲೆ ಕಾಮುಕ ತಂದೆ ಈ ದುಷ್ಕೃತ್ಯ ಎಸಗಿದ್ದು, ಇದರಿಂದ ರೋಸಿ ಹೋದ 8 ವರ್ಷದ ಮಗು ಕಳೆದ ಕೆಲ ದಿನಗಳ ಹಿಂದೆ ತಾಯಿಗೆ ಮಾಹಿತಿ ನೀಡಿದ್ದಾಳೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಇನ್ನಿಬ್ಬರ ಹೆಣ್ಣು ಮಕ್ಕಳನ್ನು ಕೇಳಿದಾಗ ಅವರು ತಮ್ಮ ಮೇಲೆ ನಡೆದ ಕೃತ್ಯದ ಬಗ್ಗೆ ಸತ್ಯ ಬಾಯಿ ಬಿಟ್ಟಿದ್ದಾರೆ.

ಮಕ್ಕಳ ಮೇಲೆ ಎಸಗಿದ ದುಷ್ಕೃತ್ಯದ ಬಗ್ಗೆ ಕಾಮುಕ ಗಂಡನನ್ನು ಕೇಳಿದಾಗ ಆತ ಹೆಣ್ಣು ಮಗುವಿನ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಮಗ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದು, ಈಗಾಗಲೇ ಪಾಪಿ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Intro:Body:

ಮೂವರು ಹೆಣ್ಣುಮಕ್ಕಳ ಮೇಲೆ ನಿರಂತರ ಅತ್ಯಾಚಾರ... ಪಾಪಿ ತಂದೆ ವಿರುದ್ಧ ದೂರು 

ಇಂದೋರ್​: ಕಾಮುಕರ ತಂದೆಯೋರ್ವ ತನ್ನ ಮೂವರು ಹೆಣ್ಣುಮಕ್ಕಳ ಮೇಲೆ ಕಳೆದ ಮೂರು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಎಸಗಿದ ಹೀನ ಕೃತ್ಯ ಮಧ್ಯಪ್ರದೇಶದ ಇಂದೋರ್​​ನಲ್ಲಿ ನಡೆದಿದೆ.

ಚಾಕುವಿನಿಂದ ಬೆದರಿಸಿ 8 ವರ್ಷ,16 ಹಾಗೂ 18 ವರ್ಷದ ಹೆಣ್ಣು ಮಕ್ಕಳ ಮೇಲೆ ಕಾಮುಕ ತಂದೆ ಈ ದುಷ್ಕೃತ್ಯ ವೆಸಗಿದ್ದು, ಇದರಿಂದ ರೋಸ ಹೋದ 8 ವರ್ಷದ ಮಗು ಕಳೆದ ಕೆಲ ದಿನಗಳ ಹಿಂದೆ ತಾಯಿಗೆ ಮಾಹಿತಿ ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಇನ್ನಿಬ್ಬರ ಹೆಣ್ಣು ಮಕ್ಕಳನ್ನ ಕೇಳಿದಾಗ ಅವರು ತಮ್ಮ ಮೇಲೆ ನಡೆದ ಕೃತ್ಯದ ಬಗ್ಗೆ ಹೇಳಿದ್ದಾರೆ. 

ಮಕ್ಕಳ ಮೇಲೆ ಎಸಗಿದ ದುಷ್ಕೃತ್ಯದ ಬಗ್ಗೆ ಕಾಮುಕ ಗಂಡನನ್ನು ಕೇಳಿದಾಗ ಆತ ಹೆಣ್ಣು ಮಗುವಿನ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ಆಕೆಯನ್ನ 

ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಓರ್ವ ಮಗ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದು, ಈಗಾಗಲೇ ಆತನ ಬಂಧನ ಮಾಡಲಾಗಿದ್ದು, ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾನೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.