ETV Bharat / briefs

ಜಮೀನು ವಿವಾದ: ನ್ಯಾಯಕ್ಕಾಗಿ ಒತ್ತಾಯಿಸಿ ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ರೈತ ಕುಟುಂಬ!

ಮೈಸೂರು ಜಿಲ್ಲೆಯ ಕೆ.ಬಸವನಹಳ್ಳಿ ಗ್ರಾಮದ ರೈತ ಕುಟುಂಬ ನ್ಯಾಯಕ್ಕಾಗಿ ಅಂಗಲಾಚುತ್ತಿದೆ. ಸ್ವಂತ ಜಮೀನಿಗೆ ಬೇಲಿ ಹಾಕಿದವರ ವಿರುದ್ಧ ಯಾವ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದೆ. ಅಲ್ಲದೆ ನ್ಯಾಯ ಸಿಗದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗುತ್ತೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ನ್ಯಾಯ ಕೊಡಿಸುವಂತೆ ಅಂಗಲಾಚಿದ ನಾಗರಾಜೇಗೌಡ ಕುಟುಂಬ
author img

By

Published : May 29, 2019, 9:12 PM IST

ಮೈಸೂರು: ಜಮೀನಿಗೆ ಹೋಗದಂತೆ ತಂತಿ‌‌ಬೇಲಿ ಹಾಕಿ ತೊಂದರೆ ಕೊಡುತ್ತಿದ್ದಾರೆ. ನ್ಯಾಯ ಕೊಡಿಸುವಂತೆ ಅಧಿಕಾರಿಗಳನ್ನು ಅಂಗಲಾಚಿದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ರೈತ ಕುಟುಂಬವೊಂದು ಆರೋಪಿಸಿದೆ.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನ್ಯಾಯ ಕೊಡಿಸುವಂತೆ ಮನವಿ ಮಾಡಿದ ಪಿರಿಯಾಪಟ್ಟಣ ತಾಲೂಕಿನ ಕೆ. ಬಸವನಹಳ್ಳಿಯ ರೈತ ಕುಟುಂಬ ತಮಗೆ ನ್ಯಾಯ ಸಿಗದೇ ಹೋದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಜಮೀನು ವಿವಾದ: ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಬಡ ರೈತ ಕುಟುಂಬ

ಕೆ.ಬಸವನಹಳ್ಳಿ ಗ್ರಾಮದ ಶಿವಣ್ಣೆಗೌಡ ಎಂಬಾತ ನಮ್ಮ ಜಮೀನಿಗೆ ಹೋಗುವ ದಾರಿಗೆ ತಂತಿ‌ಬೇಲಿ ಹಾಕಿಸಿದ್ದಾರೆ. ನ್ಯಾಯ ಕೇಳಿದರೆ ಸುಳ್ಳು ಕೇಸ್ ಹಾಕಿಸಿ ನಮ್ಮನ್ನು ಜೈಲಿಗೆ ಹಾಕಿಸುವುದಾಗಿ ಬೆದರಿಸುತ್ತಾರೆ. ಅವರ ಹಾಕಿದ್ದ ಸುಳ್ಳು ಕೇಸ್​ನಿಂದ ಬೇಲ್​ ಪಡೆದು ಈಗ ಹೊರಗಡೆ ಬಂದಿದ್ದೇನೆ. ಇದರಿಂದ ಹೆದರಿದ ನಾವು ಊರನ್ನೇ ಬಿಟ್ಟಿದ್ದೆವು.‌ ಎಲ್ಲಾ ಅಧಿಕಾರಿಗಳಿಗೂ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಜಮೀನಿನಲ್ಲಿರುವ 1 ಸಾವಿರ ಅಡಿಕೆ ಮರ ಹಾಗೂ ಭತ್ತ ಒಣಗುತ್ತಿದೆ. ದಯವಿಟ್ಟು ಶೀಘ್ರವೇ ಕಾನೂನು ಕ್ರಮ ಜರುಗಿಸಿ ನಮ್ಮ ಜಮೀನು ಕೊಡಿಸಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಅಲ್ಲದೆ, ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನೇ ನಂಬಿಕೊಂಡಿದ್ದೇವೆ ಎಂದು ನಾಗರಾಜೇಗೌಡ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಅಂಗಲಾಚಿದರು.

Intro:ಮೈಸೂರು: ತಮ್ಮ ಜಮೀನಿಗೆ ನಾವೇ ಹೋಗದ ಹಾಗೇ ತಂತಿ‌‌ಬೇಲಿ ಹಾಕಿ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ನಮಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ ಇದರ ಬಗ್ಗೆ ನ್ಯಾಯ ಕೊಡಿಸಿ ಇಲ್ಲದಿದ್ದರೆ ಕುಟುಂಬವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರೈತ ಕುಟುಂಬವೊಂದು ಪತ್ರಕರ್ತರ ಭವನದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿತು.

Body:ಪಿರಿಯಾಪಟ್ಟಣ ತಾಲೂಕಿನ ಕೆ. ಬಸವನಹಳ್ಳಿ ಗ್ರಾಮದ ನಾಗರಾಜೇಗೌಡ ಎಂಬುವರು ತಮ್ಮ‌ಜಮೀನಿಗೆ ಹೋಗುವ ರಸ್ತೆಗೆ ತಂತಿ‌ಬೇಲಿ ಹಾಕಿಸಿ ತೊಂದರೆ ಕೊಡುತ್ತಿದ್ದಾನೆ ಈ ಬಗ್ಗೆ ನಾವು ನ್ಯಾಯ ಕೇಳಲು‌ ಹೋದರೆ ಬಲಾಢ್ಯವಿರುವ ಅವರು ಸುಳ್ಳು ಕೇಸ್ ಹಾಕಿಸಿ ನಮ್ಮನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಬೆದರಿದಸಿದ ಇದರಿಂದ ಹೆದರಿದ ನಾವು ಊರು ಬಿಟ್ಟಿದ್ದೇವು.‌ ನ್ಯಾಯಾಲಯದಿಂದ ಬೇಲ್ ಸಿಕ್ಕಿದ ಮೇಲೆ ಊರಿಗೆ ಬಂದಿದ್ದೇವೆ ಈಗಲೂ ತೊಂದರೆ ಕೊಡುತ್ತಿದ್ದಾನೆ ನಮ್ಮ ಜಮೀನಿಗೆ ಹೋಗುವ ರಸ್ತೆಗೆ ಮುಳ್ಳು ತಂತಿ ಹಾಕಿಸಿದ್ದಾನೆ ಎಲ್ಲಾ ಅಧಿಕಾರಿಗಳಿಗು ಮನವಿ ಮಾಡಿದರು ಯಾರು ಗಮನ ಹರಿಸುತ್ತಿಲ್ಲ ‌ನಮ್ಮ‌ ಜಮೀನಿನಲ್ಲಿರುವ ೧೦೦೦ ಅಡಿಕೆ ಮರ ಹಾಗೂ ಭತ್ತ ಒಣಗುತ್ತಿದ್ದು ದಯವಿಟ್ಟು ನಮ್ಮ‌ಜಮೀನಿ ಹೋಗಲು ದಾರಿ ಮಾಡಿ ಕೊಡಿ ಇಲ್ಲದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತಗತೇವೆ ಎಂದು ನಾಗರಾಜೇಗೌಡ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.