ETV Bharat / briefs

ಕೋತಿರಾಜ್ ಏಂಜೆಲ್ ಫಾಲ್ಸ್ ಏರಿಲ್ಲ, ಹಾಗಾದ್ರೆ ಅವರು ಎಲ್ಲಿದ್ದಾರೆ?: ಅವರ ಗೆಳೆಯ ಹೇಳಿದ್ದಿಷ್ಟು.. - ಕೋತಿರಾಜ್​ ಬಗ್ಗೆ ಸುಳ್ಳು ಸುದ್ದಿ

ರಾಜ್ಯಾದ್ಯಂತ ಮನೆಮಾತಾಗಿರುವ ಕೋತಿರಾಜ್, ಅಮೆರಿಕದ ಎತ್ತರದ ಏಂಜೆಲ್ ಫಾಲ್ಸ್ ಏರಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈಗ ಈ ಸುದ್ದಿ ಸುಳ್ಳು ಎಂದು ಕೋತಿರಾಜ್​ ಆತ್ಮೀಯ ಬಸವರಾಜ್ ವಿಡಿಯೋ ಮೂಲಕ ತಿಳಿಸಿದ್ದಾರೆ.

fake news about kotiraj in chamrajnagar
ಕೋತಿರಾಜ್​ ಗೆಳೆಯ ಬಸವರಾಜ
author img

By

Published : Mar 1, 2020, 1:58 PM IST

Updated : Mar 1, 2020, 2:32 PM IST

ಚಿತ್ರದುರ್ಗ: ರಾಜ್ಯಾದ್ಯಂತ ಮನೆಮಾತಾಗಿರುವ ಕೋತಿರಾಜ್, ಅಮೆರಿಕದ ಎತ್ತರದ ಏಂಜೆಲ್ ಫಾಲ್ಸ್ ಏರಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈಗ ಆ ಸುದ್ದಿ ಸುಳ್ಳು ಎಂದು ಕೋತಿರಾಜ್​ ಆತ್ಮೀಯ ಬಸವರಾಜ್ ವಿಡಿಯೋ ಮೂಲಕ ಹೇಳಿದ್ದಾರೆ.

ಕೋತಿರಾಜ್​ ಗೆಳೆಯ ಬಸವರಾಜ

ಸದ್ಯ ಕೋತಿರಾಜ್ ದೇಹದ ತೂಕ ಇಳಿಸುವ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಏಂಜೆಲ್​ ಫಾಲ್ಸ್​ ಏರಲು ತೂಕ ಇಳಿಸುವುದು ಅವಶ್ಯವಾಗಿದೆ. ಹಾಗಾಗಿ ಹಿರಿಯ ಸ್ನೇಹಿತರ ಸಲಹೆ ಮೇರೆಗೆ ಅವರು ತೂಕ ಇಳಿಸುವ ಕಸರತ್ತು ನಡೆಸುತ್ತಿದ್ದಾರೆ.

ಇದಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಆಯುರ್ವೇದಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಪ್ರಿಲ್​ನಲ್ಲಿ ಏಂಜಲ್ ಫಾಲ್ಸ್‌ ಏರುವ ನಿರ್ಧಾರದ ಕುರಿತು ಕೋತಿರಾಜ್​ ಶೀಘ್ರವೇ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

Last Updated : Mar 1, 2020, 2:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.