ಬೆಂಗಳೂರು: ಊಟಕ್ಕೆ ಪರಿತಪಿಸುತ್ತಿರುವವರಿಗೆ ಆಹಾರದ ಕಿಟ್ ನೀಡಿ ಬದಲಾಗಿ ಲಾಠಿ ಏಟನ್ನಲ್ಲ, ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯದ ಸೋಂಕಿತರಿಗೆ ಆಸ್ಪತ್ರೆ ಸೌಲಭ್ಯ ನೀಡಿ, ತೀವ್ರ ಸೋಂಕಿತರಿಗೆ ರೆಮ್ಡೆಸಿವಿರ್ ಚುಚ್ಚುಮದ್ದು ನೀಡಿ, ಉಸಿರಾಡಲೂ ಆಗದೇ ಒದ್ದಾಡುತ್ತಿರುವ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ನೀಡಿ, ಲಾಕ್ಡೌನ್ ವೇಳೆ ಕೆಲಸ ಇಲ್ಲದೇ ಊಟಕ್ಕೂ ಪರಿತಪಿಸುತ್ತಿರುವವರಿಗೆ ಆಹಾರದ ಕಿಟ್ ನೀಡಿ, ಲಾಠಿ ಏಟನ್ನಲ್ಲ. ನಾಚಿಕೆ ಇಲ್ಲದ ಸರ್ಕಾರ. ಜನ ವಿರೋಧಿ ಸರ್ಕಾರ ಎಂದಿದ್ದಾರೆ.
ಯಾವ ಕಾನೂನಿನಲ್ಲಿ ಮುಗ್ಧ ಸಾರ್ವಜನಿಕರಿಗೆ ಮನಸೋ ಇಚ್ಛೆ ಲಾಠಿಯಿಂದ ಹೊಡೆಯಲು ಪೊಲೀಸರಿಗೆ ಅಧಿಕಾರ ಇದೆ ಎಂಬುದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೊದಲು ಸ್ಪಷ್ಟಪಡಿಸಲಿ. ಇದು ಮಾನವ ಹಕ್ಕಿನ ಉಲ್ಲಂಘನೆ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.