ಪಾಲಿ(ರಾಜಸ್ಥಾನ): "ನಾನು ನನ್ನ ಜೀವನವನ್ನು ನಡೆಸಿದ್ದೇನೆ, ಆದ್ರೆ ಅವನಿಗೆ ಹಾಸಿಗೆ ಬೇಕು" ಎಂದು ವಯಸ್ಸಾದ ಮಹಿಳೆಯೊಬ್ಬರು ಸ್ವಯಂ ಪ್ರೇರಣೆಯಿಂದ ಬೆಡ್ ಬಿಟ್ಟುಕೊಟ್ಟ ಘಟನೆ ಪಾಲಿ ಜಿಲ್ಲೆಯಲ್ಲಿ ನಡೆದಿದೆ.
ಭಾವ್ರಿ ಗ್ರಾಮದ ನಿವಾಸಿ ಲೆಹರ್ ಕನ್ವಾರ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ಪಾಲಿಯ ಬಂಗಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲೂ ಬೆಡ್ ಸಮಸ್ಯೆ ಇದ್ದುದರಿಂದ ಶತ ಪ್ರಯತ್ನಗಳ ಬಳಿಕ ಆಕೆಗೆ ಬೆಡ್ ದೊರಕಿತ್ತು.
ಇದೇ ಸಂದರ್ಭ ವ್ಯಕ್ತಿಯೋರ್ವ ತನ್ನ ಮಗನನ್ನುಕೊರೊನಾದಿಂದ ಉಳಿಸಿಕೊಳ್ಳಲು ಹಾಸಿಗೆಗಾಗಿ ಹುಡುಕಾಡುವುದನ್ನು ಕಂಡಿದ್ದಾರೆ ಲೆಹರ್. 'ನಾನು ಜೀವನವನ್ನು ಕಳೆದಿದ್ದೇನೆ, ಸದ್ಯ ಈ ಯುವಕನ ಜೀವವನ್ನು ಉಳಿಸುವುದು ಹೆಚ್ಚು ಮುಖ್ಯ', ಎಂದು ಹೇಳುತ್ತಾ ಆ ವ್ಯಕ್ತಿಗೆ ತನ್ನ ಹಾಸಿಗೆಯನ್ನು ಬಿಟ್ಟುಕೊಡಲು ನಿರ್ಧರಿಸಿದಳು.
ಇದನ್ನು ಅನುಸರಿಸಿ ಆಸ್ಪತ್ರೆಯ ಸಿಬ್ಬಂದಿ ಕನ್ವರ್ ಅವರ ಉದಾತ್ತ ಮನೋಭಾವವನ್ನು ಶ್ಲಾಘಿಸಿ, ಆತನಿಗೆ ಹಾಸಿಗೆಯನ್ನು ನೀಡಿದರು.