ಮಂಗಳೂರು: ಇಲ್ಲಿನ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಬಳಿ ಹಲವು ದಿನಗಳಿಂದ ಮುಂಭಾಗದ ಎಡಕಾಲು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದ ಕಾಡಾನೆ ಬುಧವಾರ ಮೃತಪಟ್ಟಿದೆ.
ಕಾಲು ನೋವಿನಿಂದ ಬಳಲುತ್ತಿದ್ದ ಬಗ್ಗೆ ತಿಳಿದ ಅರಣ್ಯಾಧಿಕಾರಿಗಳು ಒಂದು ಬಾರಿ ಚಿಕಿತ್ಸೆ ನೀಡಿಸಿದ್ದರು. ಆದರೆ, ಚಿಕಿತ್ಸೆ ಬಳಿಕವು ಚೇತರಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.