ಓವಲ್: ಟೀಮ್ ಇಂಡಿಯಾ ಎಲ್ಲ ವಿಭಾಗಗಳಲ್ಲೂ ಸಾಂಘಿಕ ಪ್ರದರ್ಶನದ ಮುಂದೆ ಮಂಡಿಯೂರಿದ ಕಾಂಗರೂ ಪಡೆ ಟೂರ್ನಿಯಲ್ಲಿ ಮೊದಲ ಸೋಲುಂಡಿದೆ. ಈ ಸೋಲಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕಾರಣ ನೀಡಿದ್ದಾರೆ.
37ನೇ ಓವರ್ನಲ್ಲಿ ಶತಕವೀರ ಶಿಖರ್ ಧವನ್ ಔಟಾಗುತ್ತಿದ್ದಂತೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಹಾರ್ದಿಕ್ ಪಾಂಡ್ಯ ರನ್ ವೇಗ ಹೆಚ್ಚಿಸಿದರು. 27 ಎಸೆತದಲ್ಲಿ ಮಿಂಚಿನ 48 ರನ್ ಬಾರಿಸಿ ಫಿಂಚ್ ಪಡೆಗೆ ಪಂಚ್ ನೀಡಿದರು.
ಆಸೀಸ್ ವಿರುದ್ಧ ಭಾರತಕ್ಕೆ ಗೆಲುವಿನ ಅರ್ಧಶತಕ... ಹೈವೋಲ್ಟೇಜ್ ಕದನದ ದಾಖಲೆಗಳು ಇಲ್ಲಿವೆ
ಪಾಂಡ್ಯ ಬ್ಯಾಟಿಂಗ್ ಆರಂಭಿಸಿದ ಮೊದಲ ಎಸೆತದಲ್ಲೇ ಜೀವದಾನ ಪಡೆದರು. ಕೀಪರ್ ಅಲೆಕ್ಸ್ ಕ್ಯಾರಿ ಸುಲಭ ಕ್ಯಾಚನ್ನು ಕೈಚೆಲ್ಲಿ ದೊಡ್ಡ ಬೆಲೆ ತೆತ್ತರು. ಇದೇ ಜೀವದಾನ ಆಸೀಸ್ ಸೋಲಿಗೆ ಕಾರಣವಾಯಿತು ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಹಾರ್ದಿಕ್ ಮೂರು ಅಬ್ಬರದ ಸಿಕ್ಸರ್ ಹಾಗೂ ನಾಲ್ಕು ಆಕರ್ಷಕ ಬೌಂಡರಿ ಮೂಲಕ 48 ರನ್ ಬಾರಿಸಿ ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ನಿಭಾಯಿಸಿದರು. ಪಾಂಡ್ಯರ ಇದೇ ಇನ್ನಿಂಗ್ಸ್ ಫಿಂಚ್ ಬಳಗಕ್ಕೆ ದುಬಾರಿಯಾಗಿ ಪರಿಣಮಿಸಿತು.
'ಚೀಟರ್' ಎಂದು ಸ್ಮಿತ್ರನ್ನು ಛೇಡಿಸಿದ ಫ್ಯಾನ್ಸ್... ಬುದ್ಧಿವಾದ ಹೇಳಿ ಮನಗೆದ್ದ ಕೊಹ್ಲಿ