ಲಾಹೋರ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತೆ ಗಂಭೀರ್ ವಿರುದ್ಧ ಸಿಡಿದಿದ್ದು, ಪಾಕಿಸ್ತಾನದ ವಿರುದ್ಧ ಭಾರತ ವಿಶ್ವಕಪ್ನಲ್ಲಿ ಆಡಬಾರದು ಎಂಬ ಮಾತಿಗೆ ಕಿಡಿಕಾರಿದ್ದಾರೆ.
ಪುಲ್ವಾಮಾ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವ ಸಂಬಂಧ ತೀರಾ ಹಳಸಿದ್ದು, ಇದು ರಾಜಕೀಯವನ್ನು ದಾಟಿ ಕ್ರೀಡೆಯನ್ನು ಆವರಿಸಿಕೊಂಡಿದೆ.
ಪುಲ್ವಾಮಾ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದ ಭಾರತ ಮಾಜಿ ಕ್ರಿಕೆಟಿಗ ಗಂಭೀರ್, ಮುಂಬರುವ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿ ಪಡೆ ಕಣಕ್ಕಿಳಿಯಬಾರದು ಎಂದಿದ್ದರು. ಅದೇ ಮಾತನ್ನು ಅವರು ಇಂದಿಗೂ ಪ್ರತಿಪಾದಿಸಿಕೊಂಡೇ ಬಂದಿದ್ದಾರೆ.
ಈ ವೇಳೆ ಆಫ್ರಿದಿ ಹಾಗೂ ಗಂಭೀರ್ ನಡುವೆ ಟ್ವಿಟರ್ ವಾರ್ ಕೂಡ ನಡೆದಿತ್ತು. ಇದೀಗ ಪತ್ರಕರ್ತರೊಬ್ಬರು ಗಂಭೀರ್ರ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಆಡಬಾರದು ಎಂಬ ಹೇಳಿಕೆ ಪ್ರತಿಕ್ರಿಯೆ ಕೇಳಿದ್ದು, ಇದಕ್ಕುತ್ತರಿಸಿದ ಅಫ್ರಿದಿ" ಗಂಭೀರ್, ಒಬ್ಬ ಪರಿಜ್ಞಾನವಿಲ್ಲದ ವ್ಯಕ್ತಿ, ವಿದ್ಯಾವಂತರಾದವರು ಇಂತಹ ಹೇಳಿಕೆ ನೀಡುತ್ತಾರಾ? ಎಂದು ಗಂಭಿರ್ ಹೇಳಿಕೆಗೆ ಕಿಡಿಕಾಡಿದ್ದಾರೆ.
ಇದಕ್ಕೂ ಮುನ್ನ ಗಂಭೀರ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ " ನಾವು ದೇಶದ ಭಾವನೆಗಳೊಂದಿಗೆ ಆಡುವುದಕ್ಕಾಗುವುದಿಲ್ಲ, ಪಾಕಿಸ್ತಾನದ ವಿರುದ್ಧ ಆಡಿದರೆ ಕೇವಲ 2 ಅಂಕ ಬರಬಹುದು ಅಥವಾ ಹೋಗಬಹುದು ಆದರೆ ಅದಕ್ಕೆ ನಾವು ಮಹತ್ವ ಕೊಡಬೇಕಿಲ್ಲ. ಅಂಕಗಳಿಗಿಂತ ನಮ್ಮ ಸೈನಿಕರ ಪ್ರಾಣಕ್ಕೆ ಹೆಚ್ಚು ಮಹತ್ವನೀಡಬೇಕಿದೆ ಎಂದಿರುವ ಅವರು, ಪಾಕಿಸ್ತಾನ ವಿರುದ್ಧ ವಿಶ್ವಕಪ್ನಲ್ಲಿ ಆಡಲೇ ಬಾರದು ಎಂದು ವಾದಿಸಿದ್ದಾರೆ.
ಒಂದು ವೇಳೆ ಫೈನಲ್ ತಲುಪಿದರು ಪಾಕಿಸ್ತಾನದ ವಿರುದ್ಧ ಆಡದಿದ್ದರೆ ಇಡೀ ಭಾರತವೇ ತಂಡದ ಪರ ನಿಲ್ಲುತ್ತದೆ ಎಂದಿದ್ದರು.