ಓವಲ್: ವಿಶ್ವಕಪ್ ಟೂರ್ನಿಯ ಬಲಿಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ರೋಚಕ ಮುಕ್ತಾಯ ಕಂಡಿದ್ದು, ಟೀಮ್ ಇಂಡಿಯಾ ಅರ್ಹ ಜಯ ಸಾಧಿಸಿದೆ.
ಭಾನುವಾರದ ಹೈವೋಲ್ಟೇಜ್ ಕದನದಲ್ಲಿ ಭಾರತದ ಕಪ್ತಾನ ವಿರಾಟ್ ಕೊಹ್ಲಿ ಒಂದೊಳ್ಳೆ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳ ಅದರಲ್ಲೂ ವಿಶೇಷವಾಗಿ ಆಸೀಸ್ ಫ್ಯಾನ್ಸ್ ಮನಗೆದ್ದಿದ್ದಾರೆ.
ಭಾರತದ ಇನ್ನಿಂಗ್ಸ್ ವೇಳೆ ಸ್ಮಿತ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಕೆಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸ್ಮಿತ್ರನ್ನು 'ಚೀಟರ್', 'ಚೀಟರ್' ಎಂದು ಛೇಡಿಸಿದ್ದಾರೆ. ತಕ್ಷಣವೇ ಇದು ಬ್ಯಾಟಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಗಮನಕ್ಕೆ ಬಂದಿದೆ.
ಎಲ್ಲಾ ಮಾದರಿಯ ಕ್ರಿಕೆಟ್ಗೆ ಯುವರಾಜ್ ಸಿಂಗ್ ವಿದಾಯ..? ಕುತೂಹಲ ಮೂಡಿಸಿದೆ ಇಂದಿನ ಪ್ರೆಸ್ಮೀಟ್..!
ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳತ್ತ ನೋಡಿ, ಈ ರೀತಿಯ ವರ್ತಿಸದಿರಿ. ಬದಲಾಗಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಎಂದು ಸನ್ನೆ ಮಾಡಿದ್ದಾರೆ.
-
Kohli ask Indian fans to stop calling "Smith" a cheater.
— Ravishankar VPRM (@ravisha56836868) June 9, 2019 " class="align-text-top noRightClick twitterSection" data="
And requested to give him a big applause
Absolute class 👏 #SpiritOfCricket #ViratKohli pic.twitter.com/J6rkAQuOrt
">Kohli ask Indian fans to stop calling "Smith" a cheater.
— Ravishankar VPRM (@ravisha56836868) June 9, 2019
And requested to give him a big applause
Absolute class 👏 #SpiritOfCricket #ViratKohli pic.twitter.com/J6rkAQuOrtKohli ask Indian fans to stop calling "Smith" a cheater.
— Ravishankar VPRM (@ravisha56836868) June 9, 2019
And requested to give him a big applause
Absolute class 👏 #SpiritOfCricket #ViratKohli pic.twitter.com/J6rkAQuOrt
ಕೊಹ್ಲಿಯ ಸಲಹೆಯನ್ನು ಗಮನಿಸಿದ ಸ್ಮಿತ್ ಅವರ ಬಳಿ ತೆರಳಿ ಹಸ್ತಲಾಘವ ಮಾಡಿ ಧನ್ಯವಾದ ಹೇಳಿದ್ದಾರೆ. ಈ ಮೂಲಕ ಉತ್ತಮ ಕ್ರೀಡಾಸ್ಫೂರ್ತಿಯಿಂದ ಕೊಹ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಭಾರತದೆದುರು ಮಂಕಾದ ಆಸ್ಟ್ರೇಲಿಯಾ! ಚಾಂಪಿಯನ್ನರ ವಿರುದ್ಧ 36 ರನ್ಗಳಿಂದ ಜಯ ಸಾಧಿಸಿದ ಕೊಹ್ಲಿಪಡೆ
ಅಭಿಮಾನಿಗಳ ಅತಿರೇಕದ ವರ್ತನೆ ಸ್ಮಿತ್ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದ ವೇಳೆ ಮತ್ತೆ ಪುನರಾವರ್ತನೆ ಆಗಿದೆ. ಇಲ್ಲೂ ಸಹ ಕೊಹ್ಲಿ ಜಾಗೃತರಾಗಿ ಮತ್ತೊಮ್ಮೆ ಅಭಿಮಾನಿಗಳಿಗೆ ಸಭ್ಯ ರೀತಿಯಲ್ಲಿ ವರ್ತಿಸಿ ಎಂದು ಸನ್ನೆ ಮಾಡಿದ್ದಾರೆ.
ಯಾಕೆ 'ಚೀಟರ್' ಘೋಷಣೆ..?
ಸ್ಮಿತ್ ವರ್ಷದ ಹಿಂದೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದರು. ವಿಚಾರಣೆ ವೇಳೆ ಆಸೀಸ್ ಆಟಗಾರ ತಪ್ಪೊಪ್ಪಿಕೊಂಡಿದ್ದರು. ಪರಿಣಾಮ ಒಂದು ವರ್ಷ ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಿದ್ದರು. ಬ್ಯಾನ್ ತೆರವಾದ ಬಳಿಕ ಸ್ಮಿತ್ ಆಡುತ್ತಿರುವ ಮಹತ್ವದ ಟೂರ್ನಿ ಇದಾಗಿದೆ.
ಪ್ರತಿಕ್ರಿಯೆ ನೀಡಿದ ಕೊಹ್ಲಿ:
ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಚೀಟರ್ ಘೋಷಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಗ್ಯಾಲರಿಯಲ್ಲಿ ಸಾವಿರಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳಿದ್ದರು. ಭಾರತೀಯ ಕ್ರಿಕೆಟ್ ಫ್ಯಾನ್ಸ್ ಕೆಟ್ಟ ವಿಚಾರಕ್ಕೆ ಉದಾಹರಣೆಯಾಗಬಾರದು ಎನ್ನುವುದು ನನ್ನ ಉದ್ದೇಶವಾಗಿತ್ತು. ಈ ಘೋಷಣೆ ಕೇಳಿಬಂದಾಗ ನನಗೆ ಸ್ವಲ್ಪ ಮಟ್ಟಿಗೆ ಬೇಸರವಾಯಿತು. ಅಭಿಮಾನಿಗಳಿಂದ ಇಂತಹ ವರ್ತನೆ ನನಗೆ ಇಷ್ಟವಾಗುವುದಿಲ್ಲ" ಎಂದು ಕೊಹ್ಲಿ ಹೇಳಿದ್ದಾರೆ.
ಈ ಪಂದ್ಯದಲ್ಲಿ ಸ್ಮಿತ್ ಆಸೀಸ್ ಪರ 69 ರನ್ ಬಾರಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಆದಾಗ್ಯೂ ಆಸ್ಟ್ರೇಲಿಯಾ ಟೀಂ ಭಾರತದ ಬಿಗು ಬೌಲಿಂಗ್ ದಾಳಿಯಿಂದ 36 ರನ್ಗಳಿಂದ ಸೋಲು ಕಂಡಿದೆ.