ETV Bharat / briefs

ಧ್ರುವ ಲಕ್ ಕಸಿದ ನೋಟಾ ಮತಗಳು: ವಿ.ಶ್ರೀನಿವಾಸ ಪ್ರಸಾದ್​ಗೆ​ ಅದೃಷ್ಟ ತಂತಾ ವಿವಿಪ್ಯಾಟ್?​! - Vsri, druva, bjp, chnagar

ಆರಂಭದಿಂದಲೂ ಸತತ ಮುನ್ನಡೆ ಕಾಯ್ದುಕೊಂಡು ಬಂದ ಸಂಸದ ಧ್ರುವನಾರಯಣಗೆ ಕೊನೆ ಹಂತದಲ್ಲಿ ಲಕ್ ಬದಲಾಯಿಸಿದ್ದು ನೋಟಾ ಮತಗಳು ಎಂಬ ವಾದ ಕೇಳಿಬಂದಿದೆ. ಈ ಲೋಕಸಮರದಲ್ಲಿ 12,716 ನೋಟಾ ಮತಗಳು ಚಲಾವಣೆಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ದೊರಕಿದ್ದ 1ರ ಕ್ರಮಸಂಖ್ಯೆಯೇ ಮುಳುವಾಗಿದೆ ಎನ್ನಲಾಗ್ತಿದೆ.

ಧ್ರುವನಾರಾಯಣ್ ಹಾಗೂ ಶ್ರೀನಿವಾಸ ಪ್ರಸಾದ್
author img

By

Published : May 24, 2019, 2:57 PM IST

ಚಾಮರಾಜನಗರ: ರಾಜ್ಯದ ಲೋಕಸಭಾ ಫಲಿತಾಂಶದಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಜಯಶಾಲಿಯಾದ ವಿ. ಶ್ರೀನಿವಾಸಪ್ರಸಾದ್ ಹಾಗೂ ಕಡಿಮೆ ಮತಗಳ ಅಂತರದಿಂದ ಹ್ಯಾಟ್ರಿಕ್ ವಿಜಯ ತಪ್ಪಿಸಿಕೊಂಡ ಧ್ರುವನಾರಾಯಣ ಪರಾಜಯ ರಾಜ್ಯದ ಗಮನ ಸೆಳೆದಿದೆ. ಕೊನೇ ಹಂತದಲ್ಲಿ ಕಮಲ ಅರಳಿದ್ದು ಫಲಿತಾಂಶದ ರೋಚಕತೆಗೆ ಸಾಕ್ಷಿಯಾಗಿದೆ.

ಆರಂಭದಿಂದಲೂ ಸತತ ಮುನ್ನಡೆ ಕಾಯ್ದುಕೊಂಡು ಬಂದ ಸಂಸದ ಧ್ರುವನಾರಯಣಗೆ ಲಕ್ ಬದಲಿಸಿದ್ದು ನೋಟಾ ಮತಗಳು ಎಂಬ ವಾದ ಕೇಳಿಬಂದಿದೆ. ಈ ಲೋಕಸಮರದಲ್ಲಿ 12,716 ನೋಟಾ ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ದೊರಕಿದ್ದ 1 ರ ಕ್ರಮ ಸಂಖ್ಯೆಯೇ ಮುಳುವಾಗಿದೆ ಎಂದು ಹೇಳಲಾಗ್ತಿದೆ.

ನೋಟಾ ಬಟನ್ ಇವಿಎಂನ ಕೊನೆಯಲ್ಲಿರುವುದರಿಂದ ಹಲವಾರು ಮಂದಿ ನೋಟಾ ಕ್ರಮಸಂಖ್ಯೆ 1 ಇರಬೇಕು ಎಂದು ಭಾವಿಸಿ ನೋಟಾ ಗುಂಡಿ ಒತ್ತಿದ್ದಾರೆ ಎಂಬ ವಿಶ್ಲೇಷಣೆ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

ಇವಿಎಂ ಕೈಕೊಟ್ಟ ಬಳಿಕ ಅದೃಷ್ಟ:

ಒಟ್ಟು 21 ಸುತ್ತುಗಳಲ್ಲಿ ನಡೆಯುತ್ತಿದ್ದ ಮತ ಎಣಿಕೆಯಲ್ಲಿ 18ನೇ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಮುನ್ನಡೆ ಸಾಧಿಸಿದ್ದರು. ಆದರೆ, ಇವಿಎಂ ಮತಯಂತ್ರಗಳು ಕೈಕೊಟ್ಟು ವಿವಿಪ್ಯಾಟ್ ಮೂಲಕ ಮತ ಎಣಿಕೆ ನಡೆದಾಗ ವಿ.ಶ್ರೀನಿವಾಸ್​ ಪ್ರಸಾದ್​ಗೆ ಅದೃಷ್ಟ ಖುಲಾಯಿಸಿ ಅಲ್ಪಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.

ಟೀ.ನರಸೀಪುರ ವಿಧಾನಸಭಾ ಕ್ಷೇತ್ರದ 3 ಮತಯಂತ್ರಗಳು, ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ 3 ಮತಯಂತ್ರಗಳು ಕೈಕೊಟ್ಟು ಎಂಜಿನಿಯರ್​ಗಳು ಎಷ್ಟೇ ರಿಪೇರಿ ಮಾಡಿದರೂ ಫಲಿತಾಂಶ ತೋರದಿದ್ದರಿಂದ ವಿವಿಪ್ಯಾಟ್ ಎಣಿಕೆ ನಡೆದಾಗ 18 ಸುತ್ತು ಸತತ ಹಿನ್ನಡೆ ಕಂಡಿದ್ದ ವಿ.ಶ್ರೀನಿವಾಸಪ್ರಸಾದ್ ಮುನ್ನಡೆ ಸಾಧಿಸಿ ಗಡಿಜಿಲ್ಲೆಯಲ್ಲಿ ಕಮಲ ಅರಳಿಸಿದರು.

Intro:ಧ್ರುವ ಲಕ್ ಕಸಿದ NOTA: ಮತಯಂತ್ರ ಕೈಕೊಟ್ಟ ಬಳಿಕ ವಿ.ಶ್ರೀಗೆ ಖುಲಾಯಿಸಿದ ಅದೃಷ್ಟ !

ಚಾಮರಾಜನಗರ: ರಾಜ್ಯದ ಲೋಕ ಫಲಿತಾಂಶದಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಜಯಶಾಲಿಯಾದ ವಿ.ಶ್ರೀನಿವಾಸಪ್ರಸಾದ್ ಹಾಗೂ ಕಡಿಮೆ ಮತಗಳ ಅಂತರದಿಂದ ಹ್ಯಾಟ್ರಿಕ್ ವಿಜಯ ತಪ್ಪಿಸಿಕೊಂಡ ಧ್ರುವ ಪರಾಜಯದ ರಾಜ್ಯದ ಗಮನ ಸೆಳೆದಿದ್ದು ಕೊನೇ ಹಂತದಲ್ಲಿ ಕಮಲ ಅರಳಿದ್ದು ಫಲಿತಾಂಶದ ರೋಚಕತೆಗೆ ಸಾಕ್ಷಿ.

Body:ಆರಂಭದಿಂದಲೂ ಸತತ ಮುನ್ನಡೆ ಕಾಯ್ದುಕೊಂಡು ಬಂದ ಸಂಸದ ಧ್ರುವನಾರಯಣಗೆ ಲಕ್ ಬದಲಿಸಿದ್ದು NOTA ಮತಗಳು ಎಂಬ ವಾದ ಕೇಳಿಬಂದಿದೆ. ಈ ಲೋಕಸಮರದಲ್ಲಿ 12,716 ನೋಟಾ ಮತಗಳು ಚಲಾವಣೆಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ದೊರಕಿದ್ದ ೧- ಕ್ರಮಸಂಖ್ಯೆಯೇ ಮುಳುವಾಗಿದೆ ಎನ್ನಲಾಗಿದೆ.

NOTA ಬಟನ್ ಇವಿಎಂನ ಕೊನೆಯಲ್ಲಿರುವುದರಿಂದ ಹಲವಾರು ಮಂದಿ ನೋಟಾ ಕ್ರಮಸಂಖ್ಯೆ ಒಂದಿರಬೇಕೆಂದು ಭಾವಿಸಿ ನೋಟಾ ಗುಂಡಿ ಒತ್ತಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

EVM ಕೈಕೊಟ್ಟ ಬಳಿಕ ಅದೃಷ್ಟ:

ಒಟ್ಟು ೨೧ ಸುತ್ತುಗಳಲ್ಲಿ ನಡೆಯುತ್ತಿದ್ದ ಮತ ಎಣಿಕೆಯಲ್ಲಿ ೧೮ನೇ ಸುತ್ತಿನವರೆಗೂ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಯಣ ಮುನ್ನಡೆ ಸಾಧಿಸಿದ್ದರು. ಆದರೆ, ಇವಿಎಂ ಗಳು ಕೈಕೊಟ್ಟು ವಿವಿಪ್ಯಾಟ್ ಮೂಲಕ ಮತ ಎಣಿಕೆ ನಡೆದಾಗ ವಿ.ಶ್ರೀಗೆ ಅದೃಷ್ಟ ಖುಲಾಯಿಸಿ ಅಲ್ಪಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು.

Conclusion: ಟೀ.ನರಸೀಪುರ ವಿದಾನಸಭಾ ಕ್ಷೇತ್ರದ 3 ಮತಯಂತ್ರಗಳು, ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ೩ ಮತಯಂತ್ರಗಳು ಕೈಕೊಟ್ಟು ಎಂಜಿನಿಯರ್ ಗಳು ಎಷ್ಟೇ ರಿಪೇರಿ ಮಾಡಿದರೂ ಫಲಿತಾಂಶ ತೋರದಿದ್ದರಿಂದ ವಿವಿಪ್ಯಾಟ್ ಎಣಿಕೆ ನಡೆದಾಗ ಸತತ ಹಿನ್ನಡೆ ಕಂಡ ವಿ.ಶ್ರೀನಿವಾಸಪ್ರಸಾದ್ ಮುನ್ನಡೆ ಸಾಧಿಸಿ ಗಡಿಜಿಲ್ಲೆಯಲ್ಲಿ ಕಮಲ ಅರಳಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.