ಚೆನ್ನೈ: ಸದಾ ಒಂದಿಲ್ಲೊಂದು ವಿಷಯಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುವ ಧೋನಿ ಪುತ್ರಿ ಝೀವಾ ಸದ್ಯ ಮತ್ತೊಂದು ವಿಡಿಯೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾಳೆ.
- " class="align-text-top noRightClick twitterSection" data="
">
ಟೀಂ ಇಂಡಿಯಾದ ಉದಯೋನ್ಮುಖ ಆಟಗಾರ ರಿಷಭ್ ಪಂತ್ಗೆ ಧೋನಿ ಪುತ್ರಿ ಝೀವಾ ಹಿಂದಿ ಭಾಷೆಯ ವರ್ಣಮಾಲೆ ಅ, ಆ, ಇ, ಈ ಹೇಳಿಕೊಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದಕ್ಕೆ ರಿಷಭ್ ಧನ್ಯವಾದ ಕೂಡ ಹೇಳಿದ್ದಾರೆ. ಈ ಹಿಂದೆ ಕೂಡ ಧೋನಿ ಪುತ್ರಿ ಅನೇಕ ವಿಷಯಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಳು.
ಕಳೆದೆರಡು ದಿನಗಳ ಹಿಂದೆ 2ನೇ ಕ್ವಾಲಿಫೈಯರ್ ಪಂಧ್ಯದಲ್ಲಿ ಚೆನ್ನೈ-ಡೆಲ್ಲಿ ತಂಡ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡಿರುವ ಮಾಹಿ ನೇತೃತ್ವದ ಸಿಎಸ್ಕೆ ತಂಡ ಫೈನಲ್ ಪ್ರವೇಶ ಪಡೆದುಕೊಂಡಿದ್ದು, ಇಂದು ಮುಂಬೈ ವಿರುದ್ಧ ಪ್ರಶಸ್ತಿಗಾಗಿ ಫೈಟ್ ನಡೆಸಲಿದೆ.