ETV Bharat / briefs

ವಾಟ್ಸ್​ಆ್ಯಪ್​ ಮೂಲಕ ಹರಿದಾಡಿದ 'ರಾಧೆ': ಕ್ರಮ ಕೈಗೊಳ್ಳಲು ದೆಹಲಿ ಹೈಕೋರ್ಟ್​ ಸೂಚನೆ

"ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್" ವಾಟ್ಸ್​ಆ್ಯಪ್​ಗಳಲ್ಲಿ ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಜೀ ಸಂಸ್ಥೆ ಸಲ್ಲಿಸಿದ ಮೊಕದ್ದಮೆಯ ಆಧಾರದ ಮೇಲೆ ದೆಹಲಿ ಹೈಕೋರ್ಟ್ ವಾಟ್ಸ್​​ಆ್ಯಪ್​ ಬಳಕೆದಾರರಿಗೆ ಆದೇಶಿಸಿದೆ.

ದೆಹಲಿ
ದೆಹಲಿ
author img

By

Published : May 24, 2021, 10:55 PM IST

ಮುಂಬೈ: ಸಲ್ಮಾನ್ ಖಾನ್ ಅವರ ಇತ್ತೀಚಿನ ಚಿತ್ರ "ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್" ವಾಟ್ಸ್​ಆ್ಯಪ್​ಗಳಲ್ಲಿ ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಜೀ ಸಂಸ್ಥೆ ಸಲ್ಲಿಸಿದ ಮೊಕದ್ದಮೆಯ ಆಧಾರದ ಮೇಲೆ ದೆಹಲಿ ಹೈಕೋರ್ಟ್ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಆದೇಶಿಸಿದೆ. ಪೈರಸಿ ಮೂಲಕ ಚಿತ್ರೀಕರಣವಾದ ಈ ವಿಡಿಯೋ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿತ್ತು.

ಚಿತ್ರದ ಪ್ರತಿಗಳನ್ನು ಮಾರಾಟ ಮಾಡಲು ಬಳಸುತ್ತಿರುವ ಮೊಬೈಲ್​ ಸಂಖ್ಯೆಗಳಿಗೆ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ವಾಟ್ಸ್​ಆ್ಯಪ್​​ಗೆ ನಿರ್ದೇಶನ ನೀಡಿದೆ. ದೇಶದ ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್ ಸಂಸ್ಥೆಗಳಿಗೆ ಈ ರೀತಿ ಪೈರಸಿ ನಡೆಸಿದವರ ಮತ್ತು ವಿಡಿಯೋ ಹರಿಬಿಟ್ಟ ಚಂದಾದಾರರ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಾಲಯವು ನಿರ್ದೇಶಿಸಿದೆ. ಈ ಬಳಿಕ ಜೀ ಸಂಸ್ಥೆ ಅವರ ವಿರುದ್ಧ ಮುಂದಿನ ಕಾನೂನು ಕ್ರಮಗಳನ್ನು ಪ್ರಾರಂಭಿಸಲು ಸೂಚಿಸಿದೆ.

ಈ ಚಿತ್ರವು 2021ರ ಮೇ 13ರಂದು ಫಿರ್ಯಾದಿಯ ಡಿಜಿಟಲ್ ಎಂಟರ್‌ಟೈನ್‌ಮೆಂಟ್ ಸ್ಟ್ರೀಮಿಂಗ್ ಸೇವೆ ಜೀ 5ನಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಬಿಡುಗಡೆಯಾಯಿತು. ಬಿಡುಗಡೆಯಾಗುತ್ತಿದ್ದಂತೆ ಪೈರಸಿ ಮಾಡಿದ ಕೆಲ ಕಿಡಿಗೇಡಿಗಳು ವಾಟ್ಸ್​ಆ್ಯಪ್​​ ಮೂಲಕ ಹರಿಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.