ETV Bharat / briefs

'ಅವಳೇ ಪ್ರೇರಣೆ': ವಾರ್ನರ್‌ ಅದ್ಭುತ ಪ್ರದರ್ಶನದ ಗುಟ್ಟೇನು?

ವಿಶ್ವಕಪ್​​ನಲ್ಲಿ ಡೇವಿಡ್​ ವಾರ್ನರ್​ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅದರ ಕ್ರೆಡಿಟ್​ ಪತ್ನಿಗೆ ನೀಡಿದ್ದಾರೆ.

ಡೇವಿಡ್​ ವಾರ್ನರ್​​
author img

By

Published : Jun 13, 2019, 6:06 PM IST

ಲಂಡನ್​: ಐಸಿಸಿ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದು, ಕೆಲವೊಂದು ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರ ಈ ಪ್ರದರ್ಶನಕ್ಕೆ ಕಾರಣ ಯಾರು ಎಂಬುದನ್ನು ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯದ ವೇಳೆ ಬಾಲ್​ ವಿರೂಪಗೊಳಿಸಿದ ಆರೋಪದ ಮೇಲೆ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಡೇವಿಡ್​ ವಾರ್ನರ್​, ಭವಿಷ್ಯದಲ್ಲಿ ಕ್ರಿಕೆಟ್​ ಆಡುವುದು ಅನುಮಾನವಾಗಿತ್ತು. ಆದರೆ ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಮಿಂಚಿದ್ದ ಇವರಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ವಿಶ್ವಕಪ್​​ನಲ್ಲಿ ಭಾಗಿಯಾಗಲು ಮಹತ್ವದ ಅವಕಾಶ ನೀಡಿತ್ತು. ಅದರ ಸದುಪಯೋಗ ಪಡೆದುಕೊಂಡು ವಾರ್ನರ್​ ಉತ್ತಮ ಪ್ರದರ್ಶನ ನೀಡಿ, ಪಾಕ್​ ವಿರುದ್ಧ ಶತಕ ಸಹ ಸಿಡಿಸಿದ್ದಾರೆ.

ನಿನ್ನೆ ಪಾಕ್​ ವಿರುದ್ಧ ಗೆಲುವು ದಾಖಲು ಮಾಡಿದ ಬಳಿಕ ಮಾತನಾಡಿದ್ದ ವಾರ್ನರ್​, ಇಷ್ಟೊಂದು ಬೇಗ ಕಮ್​ಬ್ಯಾಕ್​ ಮಾಡಲು ಕಾರಣವಾಗಿದ್ದು ತಮ್ಮ ಪತ್ನಿ ಎಂದು ಹೇಳಿದ್ದಾರೆ. ಪತ್ನಿಯೇ ನನ್ನ ಸ್ಪೂರ್ತಿ.ನಾನು ಕ್ರಿಕೆಟ್ ಆಡದೇ ಮನೆಯಲ್ಲಿದ್ದ ದಿನಗಳಲ್ಲಿ ಆಕೆ ನನ್ನನ್ನು ಪ್ರೇರೇಪಿಸಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ. ನಾನು ನಿರಾಶೆಗೊಳಗಾದ ಸಮಯದಲ್ಲಿ ಸ್ಪೂರ್ತಿ ನೀಡಿರುವುದೇ ಇವತ್ತು ನಾನು ಉತ್ತಮವಾಗಿ ಆಡಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳನ್ನಾಡಿದ್ದು, ವಾರ್ನರ್​ ಕ್ರಮವಾಗಿ 89 (ಅಜೇಯ), 3, 56 ಹಾಗೂ 107ರನ್​ ಸಿಡಿಸಿದ್ದಾರೆ.

Intro:Body:

ಅವಳೇ ನನ್ನ ಪ್ರೇರಣೆ: ವಿಶ್ವಕಪ್​​ನಲ್ಲಿ ಅತ್ಯುದ್ಭುತ ಪ್ರದರ್ಶನಕ್ಕೆ ವಾರ್ನರ್​ ಕ್ರೆಡಿಟ್ ನೀಡಿದ್ದು! 

ಲಂಡನ್​: ಐಸಿಸಿ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದು, ಕೆಲವೊಂದು ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರ ಈ ಪ್ರದರ್ಶನಕ್ಕೆ ಕಾರಣ ಯಾರು ಎಂಬ ಗುಟ್ಟು ಇದೀಗ ಬಿಚ್ಚಿಟ್ಟಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯದ ವೇಳೆ ಬಾಲ್​ ವಿರೂಪಗೊಳಿಸಿದ ಆರೋಪದ ಮೇಲೆ ಒಂದು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಡೇವಿಡ್​ ವಾರ್ನರ್​, ಭವಿಷ್ಯದಲ್ಲಿ ಕ್ರಿಕೆಟ್​ ಆಡುವುದು ಅನುಮಾನವಾಗಿತ್ತು. ಆದರೆ ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಮಿಂಚಿದ್ದ ಇವರಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ವಿಶ್ವಕಪ್​​ನಲ್ಲಿ ಭಾಗಿಯಾಗಲು ಮಹತ್ವದ ಅವಕಾಶ ನೀಡಿತ್ತು. ಅದರ ಸದುಪಯೋಗ ಪಡೆದುಕೊಂಡು ವಾರ್ನರ್​ ಉತ್ತಮ ಪ್ರದರ್ಶನ ನೀಡಿ, ಪಾಕ್​ ವಿರುದ್ಧ ಶತಕ ಸಹ ಸಿಡಿಸಿದ್ದಾರೆ. 

ನಿನ್ನೆ ಪಾಕ್​ ವಿರುದ್ಧ ಗೆಲುವು ದಾಖಲು ಮಾಡಿದ ಬಳಿಕ ಮಾತನಾಡಿದ್ದ ವಾರ್ನರ್​, ಇಷ್ಟೊಂದು ಬೇಗ ಕಮ್​ಬ್ಯಾಕ್​ ಮಾಡಲು ಕಾರಣವಾಗಿದ್ದು ತಮ್ಮ ಪತ್ನಿ ಎಂದು ಹೇಳಿದ್ದಾರೆ. ಪತ್ನಿಯೇ ನನ್ನ ಸ್ಪೂರ್ತಿ.ನಾನು ಕ್ರಿಕೆಟ್ ಆಡದೇ ಮನೆಯಲ್ಲಿದ್ದ ದಿನಗಳಲ್ಲಿ ಆಕೆ ನನ್ನನ್ನು ಪ್ರೇರೆಪಿಸಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ. ನಾನು ನಿರಾಶೆಗೊಳಗಾದ ಸಮಯದಲ್ಲಿ ಸ್ಪೂರ್ತಿ ನೀಡಿರುವುದೇ ಇವತ್ತು ನಾನು ಉತ್ತಮವಾಗಿ ಆಡಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ನಾಲ್ಕು ಪಂದ್ಯಗಳನ್ನಾಡಿದ್ದು, ವಾರ್ನರ್​ ಕ್ರಮವಾಗಿ 89 (not out), 3, 56 ಹಾಗೂ 107ರನ್​ ಸಿಡಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.