ETV Bharat / briefs

ರಂಜಾನ್ ಹಬ್ಬಕ್ಕೆ ಆಹಾರದ ಕಿಟ್ ವಿತರಣೆ ಮಾಡಿದ ದಾವಣಗೆರೆ ಪೊಲೀಸರು!

ಪೊಲೀಸ್ ಅಧಿಕಾರಗಳ ಮೂಲಕವೇ ಕಿಟ್ ವಿತರಣೆ ಮಾಡಿಸಿದ್ದು ವಿಶೇಷ. ಅಜಾದ್‌ನಗರ ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ..

police distributes food kit
police distributes food kit
author img

By

Published : May 8, 2021, 3:03 PM IST

ದಾವಣಗೆರೆ : ಲಾಕ್​ಡೌನ್ ಘೋಷಣೆಯಿಂದ ಮುಸ್ಲಿಂ ಸಮುದಾಯದ ಬಡವರು ರಂಜಾನ್ ಹಬ್ಬ ಆಚರಿಸೋದು ಹೇಗೆಂಬ ಸಂಕಷ್ಟದಲ್ಲಿದ್ದಾರೆ.

ಹಾಗಾಗಿ, ಅಜಾದ್ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶೈಲಜಾ ತಮ್ಮ ಸ್ವಂತ ಖರ್ಚಿನಲ್ಲಿ 50ಕ್ಕೂ ಹೆಚ್ಚು ಬಡ ಮುಸ್ಲಿಂ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಿದರು.

ಆಜಾದ್‌ನಗರ, ಭಾಷಾನಗರ ಸೇರಿ ಹಲವು ಕಡೆಗಳಲ್ಲಿ ಕೂಲಿ ಮಾಡಿ ಜೀವನ ನಡೆಸುವ ಜನರೇ ಜಾಸ್ತಿ. ಈಗ ರಂಜಾನ್ ಹಬ್ಬ ಬಂದಿದ್ದರಿಂದ ಕೂಲಿ ಇಲ್ಲದೆ ಹಬ್ಬ ಆಚರಣೆ ಮಾಡಲು ಸಂಕಷ್ಟು ಅನುಭವಿಸುತ್ತಿದ್ದರು. ಇದನ್ನು ಮನಗಂಡ ಪಿಎಸ್ಐ ಶೈಲಜಾ ಅವರು ಹಬ್ಬಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.

ಪೊಲೀಸ್ ಅಧಿಕಾರಗಳ ಮೂಲಕವೇ ಕಿಟ್ ವಿತರಣೆ ಮಾಡಿಸಿದ್ದು ವಿಶೇಷ. ಅಜಾದ್‌ನಗರ ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.