ಭುವನೇಶ್ವರ್: ಒಡಿಶಾದಲ್ಲಿ ಉಂಟಾಗಿರುವ ಫಣಿ ಚಂಡಮಾರುತ ಅನೇಕ ಅವಾಂತರ ಸೃಷ್ಟಿ ಮಾಡಿದ್ದು, ಅಬ್ಬರದ ಗಾಳಿಗೆ ಮರಗಳು ಧರೆಗುರುಳುತ್ತಿವೆ. ಇದರ ಮಧ್ಯೆ ಆಸ್ಪತ್ರೆಯ ಹಾಸ್ಟೇಲ್ವೊಂದರ ಚಾವಣಿ ಕಿತ್ತುಹೋಗಿರುವ ಘಟನೆ ನಡೆದಿದೆ.
ಭುವನೇಶ್ವರದ AIIMS ಆಸ್ಪತ್ರೆಯ ಹಾಸ್ಟೇಲ್ನ ಚಾವಣಿ ಗಾಳಿಯ ರಭಸಕ್ಕೆ ಕಿತ್ತು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಒಡಿಶಾ ಸರ್ಕಾರವೇ ತನ್ನ ಟ್ಟಿಟ್ಟರ್ನಲ್ಲಿ ವಿಡಿಯೋ ಶೇರ್ ಮಾಡಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ರೋಗಿಗಳು ಸುರಕ್ಷಿತವಾಗಿದ್ದಾರೆಂದು ತಿಳಿಸಿದೆ.
-
Video clip of a roof being blown off at the undergraduate hostel in AIIMS Bhubaneshwar due to #CycloneFani #Fani #FaniCyclone #FaniUpdates pic.twitter.com/97c5ELQJ46
— Sitanshu Kar (@DG_PIB) May 3, 2019 " class="align-text-top noRightClick twitterSection" data="
">Video clip of a roof being blown off at the undergraduate hostel in AIIMS Bhubaneshwar due to #CycloneFani #Fani #FaniCyclone #FaniUpdates pic.twitter.com/97c5ELQJ46
— Sitanshu Kar (@DG_PIB) May 3, 2019Video clip of a roof being blown off at the undergraduate hostel in AIIMS Bhubaneshwar due to #CycloneFani #Fani #FaniCyclone #FaniUpdates pic.twitter.com/97c5ELQJ46
— Sitanshu Kar (@DG_PIB) May 3, 2019
ಫಣಿ ಚಂಡಮಾರುತ ಉಂಟಾಗಿರುವ ಕಾರಣ, AIIMS ಆಸ್ಪತ್ರೆಯ ಪರೀಕ್ಷೆ ಮುಂದೂಡಲಾಗಿದೆ. ಇನ್ನು ಚಂಡಮಾರುತಕ್ಕೆ ಇಲ್ಲಿಯವರೆಗೆ ಮೂರು ಮಂದಿ ಪ್ರಾಣ ಕಳೆದುಕೊಂಡಿದ್ದು, ಅನೇಕರು ನಿರ್ಗತಿಕರಾಗಿದ್ದಾರೆ. ಇದರ ಮಧ್ಯೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ರಕ್ಷಣೆಗಾಗಿ ಎಲ್ಲ ರೀತಿಯ ಕ್ರಮ ಕೈಗೊಂಡಿವೆ.