ETV Bharat / briefs

1 ಟಿಕೆಟ್​ ಬೆಲೆ 60 ಸಾವಿರ! ಇಂಡೋ-ಪಾಕ್​ ಕದನ ವೀಕ್ಷಣೆಗೆ ಮುಗಿಬಿದ್ದ ಕ್ರೀಡಾಭಿಮಾನಿಗಳು!

ಇಂಡೋ-ಪಾಕ್​ ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಟಿಕೆಟ್​ಗಳ ಬೆಲೆ ಗಗನಕ್ಕೇರಿದೆ.

ಕ್ರೀಡಾಭಿಮಾನಿಗಳು
author img

By

Published : Jun 14, 2019, 5:05 PM IST

Updated : Jun 14, 2019, 5:12 PM IST

ಲಂಡನ್​​: ಐಸಿಸಿ ವಿಶ್ವಕಪ್​ ಮಹಾಸಮರದಲ್ಲಿ ಇಂಡೋ-ಪಾಕ್ ಹೈ ವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಶುರುವಾಗಿದೆ. ಸಾಂಪ್ರದಾಯಿಕ ಎದುರಾಳಿಗಳ ಹೈ ವೋಲ್ಟೇಜ್ ಕದನ ಭಾರೀ ಕುತೂಹಲ ಮೂಡಿಸಿದೆ. ಈ ನಡುವೆ ಪಂದ್ಯ ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಜೂನ್​​ 16ರಂದು ಇಂಗ್ಲೆಂಡ್​​ನ ಮ್ಯಾಂಚೆಸ್ಟರ್​​ನಲ್ಲಿ ಪಂದ್ಯ ನಡೆಯಲಿದ್ದು, ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿರುವ ಕಾರಣ ಟಿಕೆಟ್​ ಬೆಲೆ ಗಗನಕ್ಕೇರಿದ್ದು, ಒಂದು ಟಿಕೆಟ್​ ಪಡೆದುಕೊಳ್ಳಲು ಬರೋಬ್ಬರಿ 60 ಸಾವಿರ ಹಣ ನೀಡಬೇಕಾಗಿದೆ. 2013ರ ನಂತರ ಇಂಡೋ-ಪಾಕ್​ ಐಸಿಸಿ ಪ್ರಾಯೋಜಿತ ಟೂರ್ನಿಗಳಲ್ಲಿ ಮಾತ್ರ ಭಾಗಿಯಾಗುತ್ತಿವೆ. ಹೀಗಾಗಿ ಈ ಮ್ಯಾಚ್‌ ನೋಡಲು ಉಭಯ ದೇಶದ ಕ್ರೀಡಾಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಲಂಡನ್​​ನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮೂಲದವರು ವಾಸವಾಗಿದ್ದಾರೆ. ಹೀಗಾಗಿ ಅವರಲ್ಲಿ ಬಹುತೇಕರು ಈ ಮೆಗಾ ಪಂದ್ಯ ವೀಕ್ಷಣೆಗೆ ಮುಂದಾಗಿದ್ದಾರೆ. ಈಗಾಗಲೇ ಪಂದ್ಯದ ಎಲ್ಲಾ ಟಿಕೆಟ್​ ಸೇಲ್​ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್​ ಪಡೆದುಕೊಂಡಿರುವ ಕೆಲವರು ಮರುಮಾರಾಟ ಮಾಡುತ್ತಿದ್ದು, ಅವುಗಳಿಗೆ ಭಾರೀ ಬೇಡಿಕೆ ಬಂದಿದೆ. ಲಂಡನ್​ ವೆಬ್​ಸೈಟ್​​ವೊಂದು ತಾನು ಖರೀದಿ ಮಾಡಿದ್ದ 480 ಟಿಕೆಟ್​ ಮರು ಮಾರಾಟ​ ಮಾಡಿದ್ದು, ಎಲ್ಲಾ ಟಿಕೆಟ್​ಗಳು ಬರೋಬ್ಬರಿ 60 ಸಾವಿರ ರೂ.ಗೆ ಬಿಕರಿಯಾಗಿವೆ ಎಂದು ತಿಳಿಸಿದೆ. ಟಿಕೆಟ್‌ಗಳಲ್ಲಿ​ ವಜ್ರ, ಗೋಲ್ಡ್​ ,ಪ್ಲಾಟಿನಮ್​ ಹಾಗೂ ಸಿಲ್ವರ್​ ಎಂಬ ವಿಭಾಗಗಳಿದ್ದು, ಎಲ್ಲ ಟಿಕೆಟ್​ಗಳ ಬೆಲೆ 17 ಸಾವಿರದಿಂದ 27 ಸಾವಿರ ರೂ ಆಗಿದೆ. ಆದರೆ, ಮಾರಾಟಗೊಂಡಿದ್ದು ಮಾತ್ರ ಹೆಚ್ಚಿನ ಹಣಕ್ಕೆ ಎಂಬುದು ಗಮನಾರ್ಹ ಸಂಗತಿ.

ಈ ಹಿಂದೆ ಇಂಗ್ಲೆಂಡ್​​ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತ ಸೋಲು ಕಂಡಿರುವ ಕಾರಣ, ಅದರ ಸೇಡು ತೀರಿಸಿಕೊಳ್ಳಲು ಕೊಹ್ಲಿ ಪಡೆ ತಯಾರಾಗಿದೆ.

Intro:Body:

ಒಂದು ಟಿಕೆಟ್​ ಖರೀದಿಗೆ ಬೆಲೆ 60 ಸಾವಿರ... ಇಂಡೋ-ಪಾಕ್​ ಕದನ ವೀಕ್ಷಣೆಗೆ ಮುಗಿಬಿದ್ದ ಕ್ರೀಡಾಭಿಮಾನಿ!

ಲಂಡನ್​​: ಐಸಿಸಿ ವಿಶ್ವಕಪ್​ ಮಹಾಸಮರದಲ್ಲಿ ಇಂಡೋ-ಪಾಕ್ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಶುರುವಾಗಿದೆ. ಸಾಂಪ್ರದಾಯಿಕ ಎದುರಾಳಿಗಳ ಹೈವೋಲ್ಟೇಜ್ ಕದನ ಭಾರೀ ನಿರೀಕ್ಷೆ ಮೂಡಿಸಿದೆ. ಈ ನಡುವೆ ಪಂದ್ಯ ವೀಕ್ಷಣೆ ಮಾಡಲು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 

ಜೂನ್​​ 16ರಂದು ಇಂಗ್ಲೆಂಡ್​​ನ ಮ್ಯಾಚೆಸ್ಟರ್​​ನಲ್ಲಿ ಪಂದ್ಯ ನಡೆಯಲಿದ್ದು, ಕೇವಲ ಎರಡು ದಿನಗಳ ಮಾತ್ರ ಬಾಕಿ ಉಳಿದಿರುವ ಕಾರಣ ಟಿಕೆಟ್​ ಬೆಲೆ ಗಗನಕ್ಕೇರಿದ್ದು, ಒಂದು ಟಿಕೆಟ್​ ಪಡೆದುಕೊಳ್ಳಲು ಬರೋಬ್ಬರಿ 60 ಸಾವಿರ ಹಣ ನೀಡಬೇಕಾಗಿದೆ. 2013ರ ನಂತರ ಇಂಡೋ-ಪಾಕ್​ ಐಸಿಸಿ ಯೋಜಿತ ಟೂರ್ನಿಗಳಲ್ಲಿ ಮಾತ್ರ ಭಾಗಿಯಾಗುತ್ತಿವೆ. ಹೀಗಾಗಿ ಈ ಕದನ ವಿಕ್ಷಣೆ ಮಾಡಲು ಉಭಯ ದೇಶದ ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತಿವೆ. 

ಲಂಡನ್​​ನಲ್ಲಿ ಲಕ್ಷಾಂತರವಾಗಿ ಭಾರತೀಯ ಹಾಗೂ ಪಾಕಿಸ್ತಾನ ಮೂಲದವರು ವಾಸವಾಗಿದ್ದಾರೆ. ಹೀಗಾಗಿ ಈ ಮೆಗಾ ಟೂರ್ನಿ ವೀಕ್ಷಣೆಗೆ ಮುಂದಾಗಿದ್ದಾರೆ.ಈಗಾಗಲೇ ಮೆಗಾಟೂರ್ನಿಯ ಎಲ್ಲ ಟಿಕೆಟ್​ ಸೇಲ್​ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್​ ಪಡೆದುಕೊಂಡಿರುವ ಕೆಲವರು ಮರು ಮಾರಾಟ ಮಾಡುತ್ತಿದ್ದು, ಅವುಗಳ ಹೆಚ್ಚಿನ ಬೇಡಿಕೆ ಬಂದಿದೆ. ಲಂಡನ್​ ವೆಬ್​ಸೈಟ್​​ವೊಂದು ತಾನು ಖರೀದಿ ಮಾಡಿದ್ದ 480 ಟಿಕೆಟ್​ ಮರು ಸೇಲ್​ ಮಾಡಿದ್ದು ಎಲ್ಲ ಟಿಕೆಟ್​ ಬರೋಬ್ಬರಿ 60 ಸಾವಿರಕ್ಕೆ ಬಿಕರಿಯಾಗಿವೆ ಎಂದು ತಿಳಿಸಿದೆ. ಟಿಕೆಟ್​ ವಜ್ರ,ಗೋಲ್ಡ್​,ಪ್ಲಾಟಿನಮ್​ ಹಾಗೂ ಸಿಲ್ವರ್​ ಎಂಬ ವಿಭಾಗಗಳಿದ್ದು, ಎಲ್ಲ ಟಿಕೆಟ್​ಗಳ ಬೆಲೆ 17 ಸಾವಿರದಿಂದ 27 ಸಾವಿರ ಆಗಿದೆ. ಆದರೆ ಮಾರಾಟಗೊಂಡಿದ್ದು  ಮಾತ್ರ ಹೆಚ್ಚಿನ ಹಣಕ್ಕೆ ಎಂಬುದು ಗಮನಾರ್ಹ ಸಂಗತಿ. 

ಈ ಹಿಂದೆ ಇಂಗ್ಲೆಂಡ್​​ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೋಲು ಕಂಡಿರುವ ಕಾರಣ, ಅದರ ಸೇಡು ತೀರಿಸಿಕೊಳ್ಳಲು ಕೊಹ್ಲಿ ಪಡೆ ತಯಾರಾಗಿದೆ. 

Conclusion:
Last Updated : Jun 14, 2019, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.