ಉಧಾಂಪುರ(ಜಮ್ಮು ಕಾಶ್ಮೀರ): ಸಿಆರ್ಪಿಎಫ್ ಯೋಧನೋರ್ವ ತನ್ನ ಮೂವರ ಸಹದ್ಯೋಗಿಗಳಿಗೆ ಗುಂಡು ಹೊಡೆದು ಆ ಬಳಿಕ ತಾನು ಗುಂಡು ಹೊಡೆದುಕೊಂಡು ಸಾವಿಗೆ ಪ್ರಯತ್ನಿಸಿದ ಘಟನೆ ಬುಧವಾರ ರಾತ್ರಿ ಉಧಾಂಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಗುಂಡೇಟು ತಿಂದ ಮೂವರು ಸಿಆರ್ಪಿಎಫ್ ಯೋಧರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಯೋಧ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ನಡೆಯುತ್ತಿದೆ.
Jammu and Kashmir: 3 CRPF jawans shot dead by fellow soldier
— ANI Digital (@ani_digital) March 20, 2019 " class="align-text-top noRightClick twitterSection" data="
Read @ANI Story | https://t.co/NhCIIgXzsF pic.twitter.com/2Tm9i0CHWH
">Jammu and Kashmir: 3 CRPF jawans shot dead by fellow soldier
— ANI Digital (@ani_digital) March 20, 2019
Read @ANI Story | https://t.co/NhCIIgXzsF pic.twitter.com/2Tm9i0CHWHJammu and Kashmir: 3 CRPF jawans shot dead by fellow soldier
— ANI Digital (@ani_digital) March 20, 2019
Read @ANI Story | https://t.co/NhCIIgXzsF pic.twitter.com/2Tm9i0CHWH
ಸಾವನ್ನಪ್ಪಿರುವ ಮೂವರೂ ಕಾನ್ಸ್ಸ್ಟೇಬಲ್ಗಳಾಗಿದ್ದು, ರಾಜಸ್ಥಾನ, ದೆಹಲಿ ಹಾಗೂ ಹರಿಯಾಣಾ ಮೂಲದವರು ಎಂದು ಅಧಿಕಾರಿಗಳು ಎಂದು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆಸಿದಾತ ಕಾನ್ಸ್ಸ್ಟೇಬಲ್ ಅಜಿತ್ ಕುಮಾರ್ ಎನ್ನಲಾಗಿದ್ದು ಕೆಲ ಅಸಮಾಧಾನದಿಂದ ಈ ಗುಂಡಿನ ದಾಳಿ ನಡೆಸಿ ಸಹದ್ಯೋಗಿಗಳನ್ನು ಸಾಯಿಸಿದ್ದಾನೆ ಎನ್ನಲಾಗಿದೆ.
ಗುಂಡಿನ ದಾಳಿಗೂ ಮುನ್ನ ಕ್ಯಾಂಪ್ನಲ್ಲಿ ಜಗಳವಾಡುತ್ತಿದ್ದರು. ಪರಸ್ಪರ ಮಾತಿನ ಚಕಮಕಿ ನಡೆಯುತ್ತಿತ್ತು ಎಂದು ಮೂಲಗಳು ಹೇಳಿವೆ.